ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳಸಾ ಬಂಡೂರಿಗೆ ಒಟ್ಟಾದ ಕನ್ನಡ ಸಿನಿ ತಾರೆಯರು

|
Google Oneindia Kannada News

ಬೆಂಗಳೂರು, ನವೆಂಬರ್. 21: ರಾಜಧಾನಿ ಬೆಂಗಳೂರು ಶುಕ್ರವಾರ ವಿವಿಧ ಘಟನಾವಳಿಗೆ ಸಾಕ್ಷಿಯಾಯಿತು. ರಾತ್ರಿ ಧಾರಾಕಾರ ಮಳೆ ಸುರಿದು ಸಂಚಾರ ಅಸ್ತವ್ಯಸ್ತಮಾಡಿದರೆ ಹಗಲಿನಲ್ಲಿ ಮಹತ್ವದ ಬೆಳವಣಿಗೆಗಳಾದವು.

ರಾತ್ರಿ ಸುರಿದ ಮಳೆ ಪರಿಣಾಮ ಮೇಖ್ರಿ ವೃತ್ತದ ಬಳಿ ಮರವೊಂದು ಉರುಳಿ ಬಿದ್ದು ಸಂಚಾರ ಸಮಸ್ಯೆ ಉಂಟಾಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಕೆಆರ್ ಮಾರುಕಟ್ಟೆ, ವಿಜಯನಗರ, ಯಶವಂತಪುರ, ಕತ್ರಿಗುಪ್ಪೆ, ಜಯನಗರ, ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಬಹುತೇಕ ಬೆಂಗಳೂರಿನ ಎಲ್ಲ ಕಡೆ ಮಳೆ ಸುರಿದಿದೆ. ಶನಿವಾರ ಸಂಜೆ ಸಹ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.[ಕಳಸಾ ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು]

ಅಕ್ರಮ ಗಣಿಗಾರಿಕೆ ಸಂಬಂಧ ಗಾಲಿ ಜನಾರ್ದನ ರೆಡ್ಡಿ ಅವರನ್ನು ಎಸ್ ಐಟಿ ಪೊಲೀಸರು ಮತ್ತೆ ಬಂಧನಕ್ಕೆ ಒಳಪಡಿಸಿದರು. ಕಳಸಾ ಬಂಡೂರಿ ನೀರು ಹೋರಾಟಕ್ಕೆ ಕೈ ಜೋಡಿಸಿದ ಸಿನಿತಾರೆಯಯರು ಪ್ರತಿಭಟನೆ ನಡೆಸಿದರು. ಟ್ರಾನ್ಸೋಫೋಬಿಯಾಕ್ಕೆ ತುತ್ತಾಗಿ ಬಲಿಯಾದವರಿಗೆ ನಮನ ಸಲ್ಲಿಕೆ ಮಾಡಿದ ತೃತೀಯ ಲಿಂಗಿಗಳು... ಮತ್ತಷ್ಟು ಸುದ್ದಿಗಳನ್ನು ಚಿತ್ರಗಳಲ್ಲಿ ನೋಡಿ....(ಪಿಟಿಐ ಚಿತ್ರಗಳು)

ಶಿವಣ್ಣ ಮಾತು

ಶಿವಣ್ಣ ಮಾತು

ಕಳಸಾ ಬಂಡೂರಿ ಹೋರಾಟ ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಒಂದಾಗಿದ್ದ ಕನ್ನಡ ಚಿತ್ರರಂಗದ ತಾರೆಯರು ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಬೆಂಬಲ ನೀಡಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿದರು.

ತೃತೀಯಲಿಂಗಿಗಳ ನೆನಪು

ತೃತೀಯಲಿಂಗಿಗಳ ನೆನಪು

ಟ್ರಾನ್ಸೋಫೋಬಿಯಾಕ್ಕೆ ತುತ್ತಾಗಿ ಬಲಿಯಾದವರಿಗೆ ಬೆಂಗಳೂರಿನಲ್ಲಿ ತೃತೀಯ ಲಿಂಗಿಗಳು ಮೊಂಬತ್ತಿ ಬೆಳಗಿ ನಮನ ಸಲ್ಲಿಕೆ ಮಾಡಿದರು.

ಗಣಿಗಾರಿಕೆ ಉರುಳು

ಗಣಿಗಾರಿಕೆ ಉರುಳು

ಅಕ್ರಮ ಗಣಿಗಾರಿಕೆ ಸಂಬಂಧ ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ವಿಶೇಷ ತನಿಖಾ ತಂಡದ ಪೊಲೀಸರು ಶುಕ್ರವಾರ ಬಂಧಿಸಿದರು.

ಜಗತ್ತಿಗೆ ಶಾಂತಿ ಸಿಗಲಿ

ಜಗತ್ತಿಗೆ ಶಾಂತಿ ಸಿಗಲಿ

ಪ್ಯಾರಿಸ್ ಮೇಲಿನ ಉಗ್ರ ದಾಳಿಯನ್ನು ಖಂಡಿಸಿ ಮತ್ತು ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಚಿರಶಾಂತಿಗೆ ಪ್ರಾರ್ಥಿಸಿ ಬೆಂಗಳೂರಿನ ಜಾಮಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಎಲ್ಲೆಲ್ಲೂ ಟ್ರಾಫಿಕ್ ಜಾಮ್

ಎಲ್ಲೆಲ್ಲೂ ಟ್ರಾಫಿಕ್ ಜಾಮ್

ಶುಕ್ರವಾರ ರಾತ್ರಿ ಬೆಂಗಳೂರಿನಾದ್ಯಂತ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು. ಟ್ರಾಫಿಕ್ ಸಮಸ್ಯೆ ಉಂಟಾಗಿ ನಾಗರಿಕರು ಮನೆ ಸೇರಲು ಹರಸಾಹಸ ಪಡಬೇಕಾಯಿತು.

English summary
News In Pics: Kannada film personalities on Friday demanded that the State government lead another all-party delegation to meet Prime Minister Narendra Modi and convince him to take steps for the amicable settlement of the Mahadayi river water dispute. Mining baron Janardhan Reddy being produced at Lokayukta court by SIT, in connection with illegal iron ore case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X