ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳದಲ್ಲಿ ಸಿಲುಕಿರುವ 85 ಕನ್ನಡಿಗರು ಸುರಕ್ಷಿತ

By Mahesh
|
Google Oneindia Kannada News

ಬೆಂಗಳೂರು/ಕಠ್ಮಂಡು, ಏ.26: ಭೂಕಂಪ ಪೀಡಿತ ನೇಪಾಳದಲ್ಲಿ ಸಿಲುಕಿರುವ ಕರ್ನಾಟಕ ಮೂಲದ ಜನತೆಯನ್ನು ರಕ್ಷಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತ್ವರಿತ ಕಾರ್ಯಾಚರಣೆ ಕೈಗೊಂಡಿದೆ.

ಈ ಬಗ್ಗೆ ಕರ್ನಾಟಕ ಸರ್ಕಾರ ಭಾನುವಾರ ಬೆಳಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, 82ಜನ ನೇಪಾಳದಿಂದ ಕರ್ನಾಟಕದತ್ತ ಬರುತ್ತಿದ್ದಾರೆ ಎಂಬ ಶುಭ ಸಮಾಚಾರ ನೀಡಿದೆ. ಜೊತೆಗೆ ಕಂಟ್ರೋಲ್ ರೂಮ್ ನಂಬರ್ ಕೂಡಾ ನೀಡಲಾಗಿದೆ.

ನೇಪಾಳದ ಕಠ್ಮಂಡು ಸೇರಿದಂತೆ ವಿವಿಧೆಡೆ ಭೂಕಂಪದ ಆಘಾತಕ್ಕೆ ಸಿಲುಕಿ ತತ್ತರಿಸಿರುವ ಕನ್ನಡಿಗರಿಗೆ ಧೈರ್ಯ ತುಂಬಲು ಕರ್ನಾಟಕ ಸರ್ಕಾರ ಕ್ರಮ ಕೈಗೊಂಡಿದೆ. ಸಮರ್ಥ ಅಧಿಕಾರಿಗಳಾದ ಪಂಕಜ್ ಕುಮಾರ್ ಪಾಂಡೆ (99000 95440), ಐಎಎಸ್, ಉಮೇಶ್ ಕುಮಾರ್(94808 00029) ಐಪಿಎಸ್ ಅವರು ಕಠ್ಮಂಡು ತಲುಪಿದ್ದು, ಅಗತ್ಯ ಕ್ರಮ ಕೈಗೊಂಡಿದ್ದಾರೆ.[ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]

ಆಪರೇಷನ್ ಮೈತ್ರಿ ಹೆಸರಿನಲ್ಲಿ ಭಾರತ ಸರ್ಕಾರ ಕೈಗೊಂಡಿರುವ ಕಾರ್ಯಾಚರಣೆಗೆ ಪೂರಕವಾಗಿ ಕರ್ನಾಟಕ ಸರ್ಕಾರದ ತಂಡ ಕಾರ್ಯ ನಿರ್ವಹಿಸುತ್ತಿದ್ದು, ಪ್ರವಾಸಿಗರು ಸುರಕ್ಷಿತವಾಗಿ ಬೆಂಗಳೂರು ತಲುಪಲಿದ್ದಾರೆ ಎಂದು ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹೇಳಿದ್ದಾರೆ.

ಕನ್ನಡಿಗರ ಸ್ಥಿತಿಗತಿ ಅಪ್ಡೇಟ್ಸ್

ಕನ್ನಡಿಗರ ಸ್ಥಿತಿಗತಿ ಅಪ್ಡೇಟ್ಸ್

* ಅಪಾಯದಲ್ಲಿ ಸಿಲುಕಿದ್ದ 82 ಜನ ಐಎಎಫ್ ವಿಶೇಷ ವಿಮಾನದ ಮೂಲಕ ದೆಹಲಿಗೆ ನಿನ್ನೆ ಆಗಮಿಸಿದ್ದಾರೆ.
* ಕನ್ನಡಿಗರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಅವರಿಗೆ ಉಟ, ವಸತಿ ವ್ಯವಸ್ಥೆ ಮಾಡಲಾಗಿದೆ.
* ಭಾನುವಾರ ಬೆಳಗ್ಗೆ ದೆಹಲಿಯಿಂದ ಬೆಂಗಳೂರಿಗೆ ಒಂದು ತಂಡ ಬರುತ್ತಿದೆ.
* ಮಂಡ್ಯ, ಹಾರೋಹಳ್ಳಿ ಮೂಲದ 35 ಪ್ರವಾಸಿಗರ ತಂಡ ರಸ್ತೆ ಮಾರ್ಗವಾಗಿ ಭಾರತದ ಗೋರಖ್ ಪುರ ವನ್ನು ತಲುಪಿದ್ದಾರೆ.
* ಸೂರ್ಯಕಾಂತ್ ದಂಬಾಳ್ , 30 ಜನರ ತಂಡ ಭಾರತ ಗಡಿಭಾಗದತ್ತ ಮುಖ ಮಾಡಿದ್ದಾರೆ.

ಕರ್ನಾಟಕದ ವೈದ್ಯರ ತಂಡ ನೆರವು

ಕರ್ನಾಟಕದ ವೈದ್ಯರ ತಂಡ ನೆರವು

ಇದೇ ವೇಳೆ ಭೂಕಂಪ ಪೀಡಿತ ನೇಪಾಳಕ್ಕೆ ವೈದ್ಯರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮುಖ್ಯಕಾರ್ಯದರ್ಶಿಗೆ ಸೂಚಿಸಿದ್ದಾರೆ. ಅಗತ್ಯ ವಸ್ತು ಹಾಗೂ ಆಹಾರ ಸಾಮಾಗ್ರಿ ಪೂರೈಕೆಗೂ ಕ್ರಮ ಕೈಗೊಳ್ಳಲಾಗಿದೆ. ಸುಮಾರು 4 ಟನ್ ಗೂ ಅಧಿಕ ಆಹಾರ ಸಾಮಾಗ್ರಿಯನ್ನು ಭಾರತದಿಂದ ನೇಪಾಳಕ್ಕೆ ರವಾನಿಸಲಾಗಿದೆ.

ವಿವಿಧೆಡೆಗಳಿಂದ ನೇಪಾಳಕ್ಕೆ ತೆರಳಿದ್ದ ಪ್ರವಾಸಿಗರು

ವಿವಿಧೆಡೆಗಳಿಂದ ನೇಪಾಳಕ್ಕೆ ತೆರಳಿದ್ದ ಪ್ರವಾಸಿಗರು

ನೇಪಾಳಕ್ಕೆ ತೆರಳಿರುವ ಮೈಸೂರಿನ ಮಂದಿ ಸುರಕ್ಷಿತವಾಗಿದ್ದಾರೆ. 20 ಜನರ ಪೈಕಿ 8 ಜನ ಒಂದೇ ಕುಟುಂಬದವರು ಎಂದು ತಿಳಿದು ಬಂದಿದೆ. ಶ್ರೀದುರ್ಗಾ, ಪುಷ್ಪಲತಾ, ನಾಗರಾಜು ಸೇರಿದಂತೆ ಒಂದೇ ಕುಟುಂಬದವರು ಪ್ರವಾಸಕ್ಕೆ ತೆರಳಿದ್ದರು.

ಅನೇಕ ಮಂದಿ ಪಶುಪತಿ ನಾಥನ ದೇಗುಲದಲ್ಲಿ ಆಶ್ರಯ ಪಡೆದಿದ್ದಕ್ಕೆ ಜೀವ ಉಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರವಾಸಿಗರ ಪೈಕಿ ನಿವೃತ್ತರು, ವಯೋವೃದ್ಧರು, ಮಕ್ಕಳು ಅಧಿಕವಾಗಿದ್ದಾರೆ. ಈ ನಡುವೆ ಏವೆರೆಸ್ಟ್ ಪರ್ವರೋಹಣಕ್ಕೆ ತೆರಳಿರುವ ಕನ್ನಡಿಗ ಪ್ರದೀಪ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ

ಕನ್ನಡಿಗರಿಗೆ ಈ ಸಂಖ್ಯೆಗೆ ಕರೆ ಮಾಡಿ

ಕನ್ನಡಿಗರಿಗೆ ಈ ಸಂಖ್ಯೆಗೆ ಕರೆ ಮಾಡಿ

ಕರ್ನಾಟಕ ಕಂಟ್ರೋಲ್ ರೂಮ್: 1070, 080- 2225 3707, 080- 2203 2582
ಕೆಎಸ್ ಸರೋಜಮ್ಮ, ಉಪ ಕಾರ್ಯದರ್ಶಿ, 94483 51194, 080- 2220 32995
ಇಮೇಲ್ : [email protected]
ಟ್ವಿಟ್ಟರ್: SEOC_Karnataka

ಕರ್ನಾಟಕ ಭವನ, ದೆಹಲಿ: ರಂಗಸ್ವಾಮಿ, 98683 93991
ಶಂಭುಲಿಂಗಪ್ಪ: 96683 93989

ನೇಪಾಳದಲ್ಲಿ ಸಿಲುಕಿರುವ 85 ಕನ್ನಡಿಗರು ಸುರಕ್ಷಿತ

ನೇಪಾಳದಲ್ಲಿ ಸಿಲುಕಿರುವ 85 ಕನ್ನಡಿಗರು ಸುರಕ್ಷಿತ ಎಂದು ಟ್ವೀಟ್ ಮಾಡಿದ ಕರ್ನಾಟಕ ಸರ್ಕಾರ

ನೇಪಾಳದಲ್ಲಿ ಕನ್ನಡಿಗರ ಪಟ್ಟಿ ಪ್ರಕಟ

ನೇಪಾಳಕ್ಕೆ ಪ್ರವಾಸ ತೆರಳಿರುವ ಕರ್ನಾಟಕ ಮೂಲದವರ ಪಟ್ಟಿ ಪ್ರಕಟಗೊಂಡಿದೆ.

English summary
People from Karnataka stranded in Nepal are returning back in batches to Indian Border through road and special IAF flights. Government of Karnataka has requested relatives of the stranded people to contact the number provided and be in touch with IAS officer Pankaj Kumar Pandey and Umesh Kumar IPS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X