ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಟ್ ಪರೀಕ್ಷೆ: ಕರ್ನಾಟಕದ 4 ಜಿಲ್ಲೆಗಳಲ್ಲಿ ಹೊಸ ಕೇಂದ್ರಗಳು!

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೇಡ್ಕರ್ ಅವರು ಶುಕ್ರವಾರ ದೇಶಾದ್ಯಂತ ಘೋಷಣೆ ಮಾಡಿರುವ ಹೊಸ 23 ನೀಟ್ ಪರೀಕ್ಷಾ ಕೇಂದ್ರಗಳ ಪೈಕಿ ಕರ್ನಾಟಕದ 4 ಹೊಸ ಕೇಂದ್ರಗಳಲ್ಲಿ 2017 ನೀಟ್ ಪರೀಕ್ಷೆಗಳು ನಡೆಯಲಿವೆ.

|
Google Oneindia Kannada News

ಬೆಂಗಳೂರು, ಮಾರ್ಚ್. 24 : ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವೇಡ್ಕರ್ ಅವರು ಶುಕ್ರವಾರ ದೇಶಾದ್ಯಂತ 23 ಹೊಸ ನೀಟ್ ಪರೀಕ್ಷಾ ಕೇಂದ್ರಗಳನ್ನು ಘೋಷಣೆ ಮಾಡಿದ್ದಾರೆ.

ಈ ಮೂಲಕ ದೇಶಾದ್ಯಂತ 80 ಕೇಂದ್ರಗಳಲ್ಲಿ ನಡೆಯುತ್ತಿದ್ದ ನೀಟ್ ಪರೀಕ್ಷೆ, ಇದೀಗ 2017ರ ನೀಟ್ ಪರೀಕ್ಷೆಗಳು ಒಟ್ಟು 103 ಕೇಂದ್ರಗಳಲ್ಲಿ ನಡೆಯಲಿವೆ.

NEET 2017: CBSE Announces 4 New Exam centers in Karnataka

ಇದರಲ್ಲಿ ಮುಖ್ಯವಾಗಿ ಕರ್ನಾಟಕದ 4 ನಗರಗಳಲ್ಲಿ ಹೊಸ ಕೇಂದ್ರಗಳನ್ನಾಗಿ ಮಾಡಲಾಗಿದೆ. ಉಡುಪಿ, ದಾವಣಗೆರೆ, ಮೈಸೂರು ಮತ್ತು ಹುಬ್ಬಳ್ಳಿ ಈ ಮೂರು ಹೊಸ ಕೇಂದ್ರಗಳಲ್ಲಿ 2017 ನೀಟ್ ಪರೀಕ್ಷೆಗೆ ನಡೆಯಲಿವೆ.

ಈ ಹಿಂದೆ ಬೆಂಗಳೂರು, ಕಲಬುರಗಿ, ಬೆಳಗಾವಿ ಮತ್ತು ಮಂಗಳೂರು ನಗರಗಳಲ್ಲಿ ಮಾತ್ರ ನೀಟ್ ಪರೀಕ್ಷಾ ಕೇಂದ್ರಗಳಿದ್ದವು. ಇದೀಗ ಮತ್ತೆ ನಾಲ್ಕು ಹೊಸ ಕೇಂದ್ರಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು ಎಂಟು ನೀಟ್ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

ಕರ್ನಾಟಕ 4, ಮಹಾರಾಷ್ಟ್ರ 4, ಗುಜರಾತ್ ಮತ್ತು ತಮಿಳುನಾಡುನಲ್ಲಿ 3 ತಲಾ, ಆಂಧ್ರ ಪ್ರದೇಶ, ವೆಸ್ಟ್ ಬೆಂಗಾಲ್ ಮತ್ತು ಕೇರಳಗಳಲ್ಲಿ ತಲಾ 2 ಕೇಂದ್ರಗಳು, ಉಳಿದಂತೆ ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ತಲಾ ಒಂದೊಂದು ಹೊಸ ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗಳು ನಡೆಯಲಿವೆ.

English summary
Union minister for Human resource development Prakash Javdekar on Friday announced a new list of cities where NEET exams for 2017 would be held. 4 New Exam centers in Karnataka among 23 new cities across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X