ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರ್ತಾಗಿ ರಕ್ತಬೇಕೆ?, ವೆಬ್‌ಸೈಟ್‌ಗೆ ಭೇಟಿ ಕೊಡಿ

|
Google Oneindia Kannada News

ಬೆಂಗಳೂರು, ಜೂ. 19 : ತುರ್ತಾಗಿ ರಕ್ತ ಬೇಕಾದಾಗ ಸಹಾಯವಾಗಲು ಆರೋಗ್ಯ ಇಲಾಖೆ ವೆಬ್‌ಸೈಟ್‌ ಆರಂಭಿಸಿದೆ. ವೆಬ್‌ಸೈಟ್‌ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು ಅಥವ ಒಂದು ಕರೆ ಮಾಡಿದರೆ ರಕ್ತ ಎಲ್ಲಿ ಲಭ್ಯವಿದೆ? ಎಂಬ ಮಾಹಿತಿ ಮೊಬೈಲ್‌ಗೆ ಬರುತ್ತದೆ. ಸ್ಮಾರ್ಟ್‌ ಪೋನ್‌ ಬಳಕೆದಾರರಿಗಾಗಿ ಮೊಬೈಲ್ ಅಪ್ಲಿಕೇಶನ್‌ ಸಹ ಆರಂಭಿಸಲಾಗಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ 'ಜೀವ ಸಂಜೀವಿನಿ' ಹೆಸರಿನ ವೆಬ್‌ಸೈಟ್ ಉದ್ಘಾಟನೆ ಮಾಡಿದ್ದಾರೆ. ಒಂದು ಫೋನ್‌ ಕರೆ ಮಾಡಿದರೆ, ರಾಜ್ಯದ ಯಾವ ಮೂಲೆಯಲ್ಲಿ ಎಷ್ಟು ರಕ್ತ ಸಂಗ್ರಹವಿದೆ?, ಯಾವ ಗುಂಪಿನ ರಕ್ತದ ಲಭ್ಯತೆ ಎಷ್ಟಿದೆ? ಎಂಬ ವಿವರ ನಿಮ್ಮ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಬರಲಿದೆ. [ವೆಬ್ ಸೈಟ್ ವಿಳಾಸ]

blood

ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಾಗ ಜನರು 'ಆರೋಗ್ಯವಾಣಿ ಸಂಖ್ಯೆ 104'ಕ್ಕೆ ಕರೆ ಮಾಡಿದರೆ, ನೀವು ಕೇಳಿದ ಜಿಲ್ಲೆಯ ಯಾವ ಪ್ರದೇಶದಲ್ಲಿ ರಕ್ತ ಲಭ್ಯವಿದೆ? ಯಾವ ಗುಂಪಿನ ರಕ್ತ ಎಷ್ಟಿದೆ? ರಕ್ತ ನಿಧಿ ಕೇಂದ್ರದ ವಿಳಾಸ, ವೈದ್ಯರ ಹೆಸರು, ಮೊಬೈಲ್‌ ಸಂಖ್ಯೆ ಎಲ್ಲಾ ಮಾಹಿತಿ ಸಂದೇಶ ರೂಪದಲ್ಲಿ ಬರುತ್ತದೆ ಎಂದು ಸಚಿವ ಖಾದರ್ ವಿವರಣೆ ನೀಡಿದರು. [ನಿಮ್ಮ ರಕ್ತ ಯಾವ ಗುಂಪಿಗೆ ಸೇರಿದ್ದು ತಿಳಿದುಕೊಳ್ಳಿ]

2012ರಲ್ಲಿಯೇ ರಕ್ತದ ಲಭ್ಯತೆ ಕುರಿತು ಮಾಹಿತಿ ನೀಡುವ ವೆಬ್‌ಸೈಟ್ ಆರಂಭಿಸಲಾಗಿತ್ತು. ಸದ್ಯ ಅದನ್ನು ಉನ್ನತೀಕರಿಸಿ, 'ಜೀವ ಸಂಜೀವಿನಿ' ಹೆಸರಿನಲ್ಲಿ ಪರಿಚಯಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಜನರು ಸ್ಮಾರ್ಟ್ ಫೋನ್ ಹೊಂದಿದ್ದರೆ, ಜೀವ ಸಂಜೀವಿನಿ ಮೊಬೈಲ್ ಅಪ್ಲಿಕೇಶನ್‌ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ವೆಬ್‌ಸೈಟ್‌ನಲ್ಲಿಯೇ ಅಪ್ಲಿಕೇಶನ್ ಡೌನ್‌ಲೋಡ್ ಲಿಂಕ್‌ಗಳನ್ನು ನೀಡಲಾಗಿದೆ.

English summary
You can search blood donors of all the districts of Karnataka through mobile application and visiting http://blood.kar.nic.in/ website. Karnataka Health and family welfare department launched website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X