ಲಾರಿ- ಕಾರು ಮುಖಾಮುಖಿ ಡಿಕ್ಕಿ: ನರಗುಂದ ಶ್ರೀ ಸಾವು

Posted By:
Subscribe to Oneindia Kannada

ವಿಜಯಪುರ, ಡಿಸೆಂಬರ್ 24: ವಿಜಯಪುರ ತಾಲ್ಲೂಕಿನ ಕಾರಜೋಳ ಕ್ರಾಸ್ ಬಳಿ ಕಾರು-ಲಾರಿ ಅಪಘಾತದಲ್ಲಿ ಗದಗ ಜಿಲ್ಲೆಯ ನರಗುಂದ ವಿರಕ್ತ ಮಠದ ಚನ್ನ ಬಸವ ಸ್ವಾಮೀಜಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಜರುಗಿದೆ.[ಕಾಶೀಮಠ ಸಂಸ್ಥಾನದ ಪೀಠಾಧಿಪತಿ ಸುಧೀಂದ್ರತೀರ್ಥ ಸ್ವಾಮೀಜಿ ವಿಧಿವಶ]

ಕಾರಜೋಳ ಕ್ರಾಸ್ ಬಳಿ ಕಾರು - ಲಾರಿ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಚನ್ನಬಸವ ಸ್ವಾಮೀಜಿ (36) ಸ್ಥಳದಲ್ಲಿಯೇ ಮೃತರಾದರು. ಅವರು ಮಹಾರಾಷ್ಟ್ರದ ಅಕ್ಕಲಕೋಟದಲ್ಲಿ ಧಾರ್ಮಿಕ ಕಾರ್ಯಕ್ರಮ ಮುಗಿಸಿಕೊಂಡು ನರಗುಂದಕ್ಕೆ ಮರಳುತ್ತಿದ್ದಾಗ, ಈ ದುರಂತ ಜರುಗಿದೆ. ವಾಹನವನ್ನು ಅವರೇ ಚಲಾಯಿಸುತ್ತಿದ್ದು ಕಾರಿನಲ್ಲಿ ಇಬ್ಬರೇ ಪ್ರಯಾಣಿಕರಿದ್ದರು. ಇನ್ನು ಲಾರಿಯಾತನ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ.[ಬೀದರ್ ಚೌಳಿ ಮಠದ ಮತ್ತೊಬ್ಬ ಸ್ವಾಮೀಜಿ ಸಾವು]

Nargunda Chenna Basava Swamiji killed by Lari-car accident

ಮೂಲತಃ ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ನಾವದಗಿ ಗ್ರಾಮದವರಾದ ಸ್ವಾಮೀಜಿ, ಮಹಾದಾಯಿ ಯೋಜನೆ ಜಾರಿಗಾಗಿ ನಡೆದ ಹೋರಾಟದಲ್ಲಿಯೂ ಪಾಲ್ಗೊಂಡಿದ್ದರು. ಗುರು, ಲಿಂಗ, ಜಂಗಮತ್ವಕ್ಕಾಗಿ ಜಿಲ್ಲೆ ಮತ್ತು ರಾಜ್ಯದಲ್ಲಿ ಅನೇಕ ಧಾರ್ಮಿಕ ಕಾರ್ಯಗಳನ್ನು ನೇರವೇರಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Nargunda Chenna Basava Swamiji killed by Lari-car accident in Karajola cross in Vijayapur.
Please Wait while comments are loading...