ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಜುಂಡಪ್ಪ ವರದಿ ಅವೈಜ್ಞಾನಿಕ : ಜಾಮದಾರ್ ಕಿಡಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನೇವರಿ, 14: ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದ ನಂಜುಂಡಪ್ಪ ವರದಿ ಸಂಪೂರ್ಣ ಅವೈಜ್ಞಾನಿಕ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್ ಹೇಳಿದ್ದಾರೆ.

ನಗರದ ಸಂಸ್ಕತಿ ಭವನದಲ್ಲಿ ಉತ್ತರ ಕರ್ನಾಟಕ ಹಿತವರ್ಧಕ ಸಮಿತಿ ವತಿಯಿಂದ ಜರುಗಿದ ನಾಡೋಜ ಡಾ.ಪಾಟೀಲ ಪುಟ್ಟಪ್ಪನವರ ಜನ್ಮದಿನಾಚರಣೆ ಮತ್ತು ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಅಥವಾ ಪ್ರತ್ಯೇಕ ರಾಜ್ಯ ಎಂಬ ವಿಷಯದ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]

Hubballi

ನಂಜುಂಡಪ್ಪ ವರದಿ ರಾಮಬಾಣವಾಗುವುದಿಲ್ಲ ಎಂದ ಅವರು, ಸಾಕಷ್ಟು ಪ್ರಮಾಣದಲ್ಲಿ ಹಿಂದುಳಿದಿರುವ ಉತ್ತರ ಕರ್ನಾಟಕ ಭಾಗಕ್ಕೆ ವರದಿಯಲ್ಲಿನ ಅಂಶಗಳು ಮತ್ತು ಶಿಫಾರಸ್ಸುಗಳು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ದಕ್ಷಿಣ ಕರ್ನಾಟಕ ಭಾಗದ ಜನತೆಗೆ ಈ ಭಾಗದ ಜನರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಅರ್ಥಮಾಡಿಸಿಕೊಡಬೇಕಾಗಿದೆ ಎಂದರು.[ಜಾತಿ ನಿಂದನೆ ಆರೋಪ, ಹುಬ್ಬಳ್ಳಿ ಪಾಲಿಕೆ ಸದಸ್ಯನ ಬಂಧನ]

ನಿವೃತ್ತ ಪ್ರಾಚಾರ್ಯ ಪ್ರೊ.ಎನ್.ಜಿ.ಚಚಡಿ, ಸಮಿತಿಯ ಸಂಚಾಲಕ ನಂದಕುಮಾರ ನಾಯ್ಡು, ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ, ಸಮಾಜ ಪರಿವರ್ತನ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ, ಮಾಜಿ ಸಂಸದ ಪ್ರೊ. ಐ.ಜಿ.ಸನದಿ ಉಪಸ್ಥಿತರಿದ್ದರು.

ಇಂಧನ ಉಳಿತಾಯ ವರ್ಷಾಚರಣೆ: ಇಂಧನ ಸಚಿವರು

ಬೆಂಗಳೂರು,ಜನವರಿ, 14: ಇಂಧನ ಇಲಾಖೆ ಈ ವರ್ಷವನ್ನು ವಿದ್ಯುತ್ ಉಳಿತಾಯ ವರ್ಷವೆಂದು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇಂಧನ ಸಚಿವ ಡಿ. ಕೆ.ಶಿವಕುಮಾರ್, 'ಇಂಧನ ಇಲಾಖೆಯಿಂದ ಯಾವ ಗ್ರಾಹಕರಿಗೂ ವಿದ್ಯುತ್ ನಿಯಂತ್ರಣ ಮಾಡಿ ಎಂದು ಹೇಳುವುದಿಲ್ಲ. ಆದರೂ ವಿದ್ಯುತ್ ಉಳಿತಾಯ ಮಾಡಿದರೆ ಒಳಿತು' ಎಂದರು.[ಜ.16ರಿಂದ ಲಾಲ್ ಬಾಗ್‌ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ]

ರಾಜ್ಯದಲ್ಲಿರುವ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಗಳು, ಗ್ರಾಮಪಂಚಾಯತಿಗಳು ಹಾಗೂ ಎಲ್ಲ ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಎಲ್ ಇಡಿ ಬಲ್ಬ್ ಗಳನ್ನು ಬಳಸಲು ತಿಳಿಸಲಾಗುವುದು ಹಾಗೂ ಕೈಗಾರಿಕೆಗಳು ವಿದ್ಯುತ್ ಉಳಿತಾಯ ಮಾಡುವಂತೆ ಸೂಚಿಸಲಾಗುವುದು ಎಂದರು

ಇಂಧನ ಇಲಾಖೆಯಲ್ಲಿರುವ ವಿದ್ಯುತ್ ಸಾಮಗ್ರಿಗಳನ್ನು ಲೆಕ್ಕಪರಿಶೋಧನೆಗೆ ಒಳಪಡಿಸಲಾಗುವುದು, ಅಲ್ಲದೆ ಇಂಧನ ಇಲಾಖೆಯಲ್ಲಿ 6000 ಲೈನ್ಮನ್ ಹುದ್ದೆ ಸೇರಿದಂತೆ 8000 ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆಂದು ತಿಳಿಸಿದರು.

English summary
Nanjundappa project is not scientific told by S.M Jamadar in Hubballi on Thursday, January 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X