ಆಷಾಢದ ಕೊನೆ ಸೋಮವಾರ ಸಾರ್ಥಕ ನಂದಿಗಿರಿ ಪ್ರದಕ್ಷಿಣೆ

Posted By:
Subscribe to Oneindia Kannada

ನಂದಿಬೆಟ್ಟ (ಚಿಕ್ಕಬಳ್ಳಾಪುರ), ಜುಲೈ 17 : ಆಷಾಢ ಮಾಸದ ಕೊನೆ ಸೋಮವಾರ ಅಂದರೆ ರಾಜ್ಯದ ನಾನಾ ಭಾಗಗಳಿಂದ ನಂದಿ ಬೆಟ್ಟಕ್ಕೆ ಬೆಳ್ಳಂಬೆಳಗ್ಗೆ ಬರುತ್ತಾರೆ. ಇಡೀ ನಂದಿಗಿರಿಯನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ, ಸಾರ್ಥಕ್ಯದ ಅನುಭವ ಪಡೆಯುತ್ತಾರೆ.

ನಂದಿ ಬೆಟ್ಟದ ಮಂಜು, ಸೊಗಸು ಕಾಣುವ ರೋಮಾಂಚಕ ಅನುಭವ

ಇಲ್ಲಿ ಅಧ್ಯಾತ್ಮದ ಜತೆಗೆ ಆರೋಗ್ಯದ ಉದ್ದೇಶವೂ ಇದೆ. ಜುಲೈ ಹದಿನೇಳರ ಸೋಮವಾರ ನಡೆದದ್ದು ಎಪ್ಪತ್ತೊಂಬತ್ತನೆ ವರ್ಷದ ನಂದಿಗಿರಿ ಪ್ರದಕ್ಷಿಣೆ. ಹದಿನೈದು ಕಿಲೋಮೀಟರ್ ನಷ್ಟು ದೂರವನ್ನು ಗುಂಪು-ಗುಂಪಾಗಿ, ಭಜನೆ ಮಾಡುತ್ತಾ, ದೇವರ ಸ್ತೋತ್ರ ಮಾಡುತ್ತಾ ಸಾಗುವವರು ಉದ್ದಕ್ಕೂ ಕಾಣಲು ಸಿಕ್ಕರು.

Nandi giri pradakshine on Ashadha last Monday

ಸೋಮವಾರ ಬೆಳಗ್ಗೆ ಭೋಗನಂದೀಶ್ವರ ದೇವರಿಗೆ ಪೂಜೆ ಮಾಡಿದ ನಂತರ ಪ್ರದಕ್ಷಿಣೆ ಆರಂಭವಾಯಿತು. ಕಾಲ್ನಡಿಗೆಯಲ್ಲಿ ಸಾಗುವ ಹಾದಿಯ ಉದ್ದಕ್ಕೂ ಕುಡಿಯುವ ನೀರು, ಹಣ್ಣು, ಮಜ್ಜಿಗೆ, ಖರ್ಜೂರ, ತಿಂಡಿ ವ್ಯವಸ್ಥೆ ಹೀಗೆ ಕೊರತೆ ಅನ್ನಿಸಿದ ಹಾಗೆ ಪ್ರದಕ್ಷಿಣೆ ಪೂರ್ಣಗೊಳ್ಳಲು ಬೇಕಾದ ಅನುಕೂಲಗಳನ್ನು ವಿವಿಧ ಸಂಘಗಳು ಮಾಡಿದ್ದವು.

ಶಂಕರ್ ನಾಗ್ ಕನಸಿನ ನಂದಿ ಬೆಟ್ಟ ರೋಪ್ ವೇ ಸಾಕಾರಕ್ಕೆ ಮುಂದಾದ ಸರಕಾರ

ಸಾವಿರಾರು ಮಂದಿ ಸೇರುತ್ತಾರೆ ಆದ್ದರಿಂದ ಪೊಲೀಸರ ವ್ಯವಸ್ಥೆಯಂತೂ ಇದ್ದೇ ಇತ್ತು. ಹೆಣ್ಣುಮಕ್ಕಳು, ನವ ವಿವಾಹಿತರು, ಸಣ್ಣದೊಂದು ಪ್ರವಾಸಕ್ಕೆ ಎಂಬಂತೆ ಬಂದಿದ್ದವರು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಒಟ್ಟಾರೆ ಅಧ್ಯಾತ್ಮದ ಜತೆಗೆ ಸಂಭ್ರಮ-ಸಂತಸ ಎದ್ದು ಕಾಣುತ್ತಿತ್ತು.

Chamundi Hills, Mysore: KSRTC operates additional service for Ashada Friday on 30th|Oneindia Kannada
English summary
On the occasion of Ashadha last Monday Nandi Giri Pradakshine oraganised in Chikkaballapur district on July 17th.
Please Wait while comments are loading...