ರಾಮನಗರ: ತನ್ನ 2 ಮಕ್ಕಳನ್ನು ನೀರಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ

ಪತಿಯ ಅನಾರೋಗ್ಯಕ್ಕೆ ಮನನೊಂದು ಪತ್ನಿ ತನ್ನ ಎರಡು ಮಕ್ಕಳನ್ನು ನೀರಿನ ಸಂಪಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಮಾಡಿಕೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ.

Written by:
Subscribe to Oneindia Kannada

ರಾಮನಗರ, ಫೆಬ್ರವರಿ. 12 : ಮಕ್ಕಳನ್ನು ನೀರಿನ ತೊಟ್ಟಿಗೆ ತಳ್ಳಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅಪ್ಪಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.

ರೇಖಾ (31), ನೂತನ (7) ಹಾಗೂ ಮಾನ್ಯ ಶ್ರೀ (6) ಮೃತ ದುರ್ದೈವಿಗಳು. ರೇಖಾ ಪತಿ ನವೀನ್ ಕಾಮಾಲೆ ರೋಗ ಪೀಡಿತನಾಗಿದ್ದು, ವೈದ್ಯರು ಜಾಂಡೀಸ್ ಮೀರಿ ಹೊಗಿದ್ದು,ಈತ ಬದುಕುಳಿಯುವುದು ಕಷ್ಟ ಎಂದು ಎಂದಿದ್ದಾರೆ.

ಇದರಿಂದ ಮನನೊಂದ ರೇಖಾ ತನ್ನ ಮಕ್ಕಳನ್ನು ಮನೆ ಬಳಿ ಇರುವ ನೀರಿನ ಸಂಪ್ ಗೆ ತಳ್ಳಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Mother and two Children suicide in Appagere ramanagara

ರೇಖಾ ಮತ್ತು ನವೀನ್ ಮೂಲತಃ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದವರಾಗಿದ್ದು, ಅಪ್ಪಗೆರೆಯಲ್ಲಿ ನೆಲೆಸಿ, ಚನ್ನಪಟ್ಟಣದಲ್ಲಿ ರಸ್ತೆಬದಿಯಲ್ಲಿ ಹೊಟೇಲ್ ಇಟ್ಟು ವ್ಯಾಪಾರ ಮಾಡಿ, ಜೀವನ ನಡೆಸುತ್ತಿದ್ದರು.

ಪತಿ ನವೀನ್ ಕಾಮಾಲೆ ರೋಗದಿಂದ ಬಳಲುತ್ತಿದ್ದು, ರೋಗ ಉಲ್ಭಣಗೊಂಡು ಪತಿಯೇ ಬದುಕದಿದ್ದ ಮೇಲೆ ನಾವು ಇದ್ದು ಪ್ರಯೋಜವೇನು ಎಂದು ಬೇಸತ್ತು ನೀರಿನ ತೊಟ್ಟಿಗೆ ಮಕ್ಕಳನ್ನು ತಳ್ಳಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿನಿಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

English summary
Getting Embarrassed over the disease of her husband suffering from, a house wife committed suicide along with her two of her children in Appagere village, Ramnagar District on Sunday.
Please Wait while comments are loading...