ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೇಪಾಳ ಭೂಕಂಪ 85ಕ್ಕೂ ಹೆಚ್ಚು ಕನ್ನಡಿಗರು ಸಂಕಷ್ಟದಲ್ಲಿ

|
Google Oneindia Kannada News

ಬೆಂಗಳೂರು, ಏ. 25 : ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ಬಗ್ಗೆ ಮಾಹಿತಿ ಪಡೆಯಲು ಕರ್ನಾಟಕ ಸರ್ಕಾರ ತುರ್ತು ಸಹಾಯವಾಣಿಯನ್ನು ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮುಯ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರೊಂದಿಗೆ ಸಭೆ ನಡೆಸುತ್ತಿದ್ದು ರಕ್ಷಣಾ ಕಾರ್ಯಕ್ಕೆ ಐಎಎಸ್ ಅಧಿಕಾರಿಯನ್ನು ನೇಮಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ತುರ್ತು ಸಹಾಯವಾಣಿ ಸಂಖ್ಯೆಗಳು 1070 -22340676, 22032582, 22353980

ಹಿಂದಿನ ಸುದ್ದಿ : ನೇಪಾಳದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನ್ನಡಿಗರು ಸಿಲುಕಿದ್ದಾರೆ. ಬೆಂಗಳೂರು, ದಾವಣಗೆರೆಯಿಂದ ಪ್ರವಾಸಕ್ಕೆ ತೆರಳಿದ್ದ 85 ಜನರು ಸಿಲುಕಿಹಾಕಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ನೇಪಾಳದಲ್ಲಿ 7.9 ತೀವ್ರತೆಯ ಭೂಕಂಪ ಉಂಟಾಗಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ. [ನೇಪಾಳ, ಭಾರತ ಭೂಕಂಪ ಪೀಡಿತರಿಗೆ ಸಹಾಯವಾಣಿ]

ನೇಪಾಳದ ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಸುಮಾರು 80 ಜನರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಖಾಸಗಿ ಟ್ರಾವೆಲ್ಸ್ ಮೂಲಕ ಇವರು ನೇಪಾಳಕ್ಕೆ ತೆರಳಿದ್ದರು. ದಾವಣೆಗೆರೆಯ 5 ಜನರು ಸಿಲುಕಿದ್ದಾರೆ. [ನೇಪಾಳದಲ್ಲಿ ಭೂಕಂಪ Live]

Nepal earthquake

ದಾವಣಗೆರೆ ನಗರದ ಡಿಸಿಎಂ ಟೌನ್‌ಶಿಪ್ ನಿವಾಸಿಗಳು ಕಠ್ಮಂಡುವಿನ ಮುಕ್ತಿನಾಗರ ಪ್ರವಾಸಕ್ಕೆ ತೆರಳಿದ್ದರು. ಇಂದು ಬೆಳಗ್ಗೆ 11 ಗಂಟೆಗೆ ಕುಟುಂದವರೊಂದಿಗೆ ಅವರು ಮಾತನಾಡಿದ್ದು ನಂತರ ಮೊಬೈಲ್ ಸಂಪರ್ಕ ಸಿಗುತ್ತಿಲ್ಲ. ಪರಿಮಳ, ರಾಘವೇಂದ್ರ, ಶ್ರೀಕಾಂತ್, ಸೌಮ್ಯ, ಸುಶೀಲ ಮತ್ತು ಇಬ್ಬರು ಮಕ್ಕಳು ಸೇರಿ ಒಟ್ಟು 7 ಜನರು ಪ್ರವಾಸಕ್ಕೆ ಹೋಗಿದ್ದರು. [ಚಿತ್ರಗಳಲ್ಲಿ : ನೇಪಾಳ ಭೂಕಂಪ]

19 ಜನರು ಸಿಲುಕಿದ್ದಾರೆ : ಬೆಂಗಳೂರಿನ 19 ಜನರ ತಂಡವೊಂದು ಪಶುಪತಿ ದೇವಾಲಯದಲ್ಲಿ ಸಿಲುಕಿಕೊಂಡಿದೆ. ಬೊಮ್ಮನಹಳ್ಳಿ, ಹೊಸಕೆರೆಹಳ್ಳಿಯಿಂದ ಪ್ರವಾಸಕ್ಕೆ ತೆರಳಿದವರು ಪಶುಪತಿ ದೇವಾಲಯದಲ್ಲಿ ಸಿಲುಕಿ ಕೊಂಡಿದ್ದೇವೆ ಎಂದು ರಾಜೇಂದ್ರ ಅವರು ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.

ರಾಜೇಂದ್ರ ಅವರ ಜೊತೆ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ 9 ಜನರಿದ್ದಾರೆ. ಮತ್ತೊಂದು ಕನ್ನಡಿಗರ ತಂಡ ಅವರಿಗೆ ದೇವಾಲಯದ ಬಳಿ ಸಿಕ್ಕಿತ್ತು ಎಂದು ಅವರು ತಿಳಿಸಿದ್ದಾರೆ. ಬೆಳಗ್ಗೆ ಪಶುಪತಿ ದೇವಾಲಯದಲ್ಲಿ ದರ್ಶನ ಮುಗಿಸಿ ವಾಪಸ್ ಬರುವಾಗ ಈ ಭೂಕಂಪ ಸಂಭವಿಸಿದೆ ಎಂದು ಹೇಳಿದ್ದಾರೆ.

ಭೂಕಂಪದಿಂದ ದೇವಾಲಯಕ್ಕೆ ಯಾವುದೇ ಹಾನಿಉಂಟಾಗಿಲ್ಲ. ಆದರೆ, ಸಮೀಪದಲ್ಲೇ ನಡೆಯುತ್ತಿದ್ದ ರಕ್ತದಾನ ಶಿಬಿರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ರಾಜೇಂದ್ರ ಅವರು ತಿಳಿಸಿದ್ದಾರೆ.

English summary
A powerful earthquake has rocked central Nepal, causing extensive damage to buildings, eyewitnesses say. More than 85 Kannadigas stuck in earthquake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X