ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರದಲ್ಲಿ ಸಿಕ್ಕಿದ್ದು ಎಷ್ಟು ಚಿನ್ನದ ನಾಣ್ಯ?

|
Google Oneindia Kannada News

ಚಾಮರಾಜನಗರ, ಡಿ. 3 : ಚಾಮರಾಜನಗರ ತಾಲೂಕಿನ ಹರದನಹಳ್ಳಿಯಲ್ಲಿ ಶೌಚಾಲಯದ ಗುಂಡಿ ತೆಗೆಯುವ ಸಿಕ್ಕಿದ ಚಿನ್ನದ ನಾಣ್ಯಗಳೆಷ್ಟು? ಎಂಬುವ ಪ್ರಶ್ನೆ ಈಗ ಎದುರಾಗಿದೆ. ಸೋಮವಾರ 34 ಚಿನ್ನದ ನಾಣ್ಯಗಳು ಸಿಕ್ಕಿದ್ದವು, ಇಂದು ಪೊಲೀಸರು 600ಕ್ಕೂ ಅಧಿಕ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಹರದನಹಳ್ಳಿಯ ಕುಮಾರ್ ಎಂಬುವವರ ಮನೆಯಲ್ಲಿ ಇಬ್ಬರು ಕಾರ್ಮಿಕರು ಶೌಚಾಲಯ ನಿರ್ಮಾಣಕ್ಕಾಗಿ ಗುಂಡಿಯನ್ನು ತೆಗೆಯುತ್ತಿದ್ದರು. ಈ ಸಂದರ್ಭದಲ್ಲಿ 32 ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ರಾಮಸಮುದ್ರ ಪೊಲೀಸರು ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡು, ಮನೆಯ ಮಾಲೀಕ ಸೇರಿ ಮೂವರನ್ನು ವಿಚಾರಣೆ ನಡೆಸುತ್ತಿದ್ದರು.

Gold

ವಿಚಾರಣೆ ವೇಳೆ 900ಕ್ಕೂ ಅಧಿಕ ನಾಣ್ಯಗಳು ದೊರಕಿದ್ದವು ಎಂದು ಆರೋಪಿಗಳು ಒಪ್ಪಿಕೊಂಡಿದ್ದು, ಸಿಕ್ಕಿದ ನಾಣ್ಯಗಳನ್ನು ಅವರು ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಬುಧವಾರ ಬೆಳಗ್ಗೆ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದ ಪೊಲೀಸರು 600ಕ್ಕೂ ಅಧಿಕ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ.[ಚಾಮರಾಜನಗರದಲ್ಲಿ 34 ಚಿನ್ನದ ನಾಣ್ಯಗಳು ಪತ್ತೆ]

ಪೊಲೀಸರ ವಶದಲ್ಲಿರುವ ಸುರೇಶ್, ನಂಜುಡ ಮತ್ತು ಮನೆಯ ಮಾಲೀಕ ಕುಮಾರ್ ವಿಚಾರಣೆ ನಡೆಸಿದಾಗ 900ಕ್ಕೂ ಅಧಿಕ ನಾಣ್ಯಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸೋಮವಾರ ದೊರೆತ ಚಿನ್ನದ ನಾಣ್ಯಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈ ಚಿನ್ನದ ನಾಣ್ಯಗಳು ಹೈದರಾಲಿ ಮತ್ತು ತಾಂಜಾವೂರಿನ ಮರಾಠರ ಕಾಲಕ್ಕೆ ಸೇರಿದ್ದು ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ಇತ್ತ ಆರೋಪಿಗಳ ವಿಚಾರಣೆ ಮುಂದುವರೆದಿದೆ.

English summary
More than 600 gold coins were found in Chamarajanagar taluk Haradanahalli village, Karnataka. Ramasamudra police sized gold coins and arrested three persons.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X