ಕರಾವಳಿ ಬಂದರಿಗೆ ಬೊಂಬಾಟ್ ಬೂತಾಯಿ!

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಮಂಗಳೂರು, ಜೂನ್ 11 : ಒಂದೆಡೆ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಸಾರಲಾಗಿದೆ. ಮತ್ತೊಂದೆಡೆ ನಾಡದೋಣಿಗಳು ತೂಫಾನ್‌ಗಾಗಿ ಕಾದು ಕೂತಿದೆ. ಇವುಗಳ ಜತೆಯಲ್ಲಿ ಬಂದರಿಗೆ ಬೂತಾಯಿ ಮೀನುಗಳು ಭರ್ಜರಿಯಾಗಿ ಬರುತ್ತಿವೆ.

ಈ ವರ್ಷದ ಮೀನುಗಾರಿಕಾ ವರ್ಷದಲ್ಲಿ ಬೂತಾಯಿ ಮೀನು ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಕರಾವಳಿಯ ಮೀನುಗಾರರಿಗೆ ದೊರಕಿತ್ತು. ಇದರಿಂದಾಗಿ ಓಮನ್ ದೇಶದ ಬೂತಾಯಿಗಳು ಗುಜರಾತ್ ಬಂದರಿನ ಮೂಲಕ ಕರಾವಳಿ ಬಂದರಿಗೆ ಬರುತ್ತಿದ್ದವು.[ಕರಾವಳಿಗೆ ಬಂತು ಒಮಾನ್ ಬೂತಾಯಿ ಮೀನು!]

fish

ಮೀನುಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ 2014-15 ರಲ್ಲಿ 26034 ಸಾವಿರ ಟನ್ ಬೂತಾಯಿಗಳನ್ನು ಹಿಡಿಯಲಾಗಿತ್ತು. ಅದೇ 2015-16 ರಲ್ಲಿ 10644 ಸಾವಿರ ಟನ್ ಮೀನುಗಳನ್ನು ಹಿಡಿಯಲಾಗಿತ್ತು. ಈ ಎಲ್ಲ ಲೆಕ್ಕಾಚಾರದ ಪ್ರಕಾರ ಈ ವರ್ಷ ಬೂತಾಯಿ ಮೀನುಗಳ ಸಂಖ್ಯೆ ಬಹಳಷ್ಟು ಕ್ಷೀಣಿಸಿತ್ತು. [ಹಾರಂಗಿಯಲ್ಲಿ ದೇವರ ಮೀನಿನ ರಕ್ಷಣೆಗೆ ಮತ್ಸ್ಯಧಾಮ]

'ಕರಾವಳಿಯ ಬಂದರಿನಲ್ಲಿ ಬೂತಾಯಿ ಹಾಗೂ ಬಂಗುಡೆ ಈ ಹಿಂದೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮೀನುಗಾರರಿಗೆ ದೊರಕುತ್ತಿತ್ತು' ಎನ್ನುವುದು ಮಂಗಳೂರು ಮೀನುಗಾರಿಕಾ ಇಲಾಖೆಯ ಪ್ರಭಾರ ಉಪನಿರ್ದೇಶಕ ಗಣೇಶನ್ ಅವರ ಮಾತು. [ಉಡುಪಿಯಲ್ಲಿ ಗಗನಕ್ಕೇರಿದ ಮೀನಿನ ಬೆಲೆ]

ನೆರೆರಾಜ್ಯಗಳ ಬೂತಾಯಿ : ಕರಾವಳಿಯ ಬಂದರುಗಳಿಗೆ ಇಲ್ಲಿಯ ವರೆಗೆ ಓಮನ್ ದೇಶದಿಂದ ಬೂತಾಯಿಗಳು ಬರುತ್ತಿತ್ತು. ದೊಡ್ಡ ಗಾತ್ರದ ಓಮನ್ ಮೀನುಗಳಿಗೆ ಕೆಜಿ ಯೊಂದಕ್ಕೆ ಭರ್ತಿ 130 ರಿಂದ 140ರ ವರೆಗೆ ದರವಿತ್ತು.

ಈಗ ಕೇರಳ, ಮದ್ರಾಸ್ ಹಾಗೂ ಆಂಧ್ರದಿಂದ ಮೀನುಗಳು ಬರುತ್ತಿವೆ. ಈ ಸಮಯದಲ್ಲಿ ಅವರಿಗೆ ಮೀನುಗಾರಿಕೆಗೆ ಅವಕಾಶವಿದೆ. ವಿಶೇಷವಾಗಿ ಬೂತಾಯಿ ಬಾಕ್ಸ್ ರೂಪದಲ್ಲಿ ಅಂದರೆ 40 ಕೆಜಿ ಬೂತಾಯಿ 3 ಸಾವಿರಕ್ಕೆ ಮಾರಾಟವಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಈ ದರಗಳಲ್ಲಿ ಏರಿಳಿತಗಳು ಕಾಣಿಸಿಕೊಳ್ಳಬಹುದು.

ತೂಫಾನ್ ಬಂದಿಲ್ಲ : ತೂಫಾನ್ ಬಂದ ನಂತರ ನಾಡ ದೋಣಿ ಮೀನುಗಾರಿಕೆ ಆರಂಭವಾಗುತ್ತದೆ. ಈ ಬಾರಿಯ ತೂಫಾನ್ ಇನ್ನೂ ಕೂಡಾ ಸರಿಯಾಗಿ ನಿಗದಿಯಾಗಿಲ್ಲ. ಜೂನ್ ತಿಂಗಳ ಕೊನೆ ಭಾಗದಲ್ಲಿ ತೂಫಾನ್ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ನಾಡಡೋಣಿ ಮೀನುಗಾರಿಕೆ ಆರಂಭವಾದ ನಂತರ ಕರಾವಳಿಯ ಮೀನುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ.

English summary
Increased demand for Buthai fish in Mangaluru market. Fish supply raised in the market.
Please Wait while comments are loading...