ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದ ಸರ್ವ ಧರ್ಮ ಸಮ್ಮೇಳನದ ಚಿತ್ರಗಳು

By ಸಚ್ಚಿದಾನಂದ ಆಚಾರ್ಯ, ಧರ್ಮಸ್ಥಳ
|
Google Oneindia Kannada News

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಪುನಸ್ಕಾರದ ಜತೆಗೆ ಸರ್ವಧರ್ಮ ಸಮ್ಮೇಳನ, ವಿಜ್ಞಾನ ಮತ್ತು ತಂತ್ರಜ್ಞಾನ ವಸ್ತು ಪ್ರದರ್ಶನ, ಲಕ್ಷದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದೆ. ಸರ್ವಧರ್ಮ ಸಮ್ಮೇಳನದ ವರದಿ ಇಲ್ಲಿದೆ.

ಧರ್ಮ ಎಂದರೆ ಕೇವಲ ಆಚರಣೆಯಲ್ಲ. ಸತ್ಯ ಧರ್ಮದಲ್ಲಿ ಬದುಕುವುದಾಗಿದೆ ಎಂದು ರಾಜ್ಯಪಾಲ ವಜುಭಾಯಿ ರುಡಭಾಯಿ ವಾಲಾ ಹೇಳಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿಯಲ್ಲಿ ಲಕ್ಷ ದೀಪೋತ್ಸವ ಪ್ರಯುಕ್ತ ನಡೆದ ಸರ್ವ ಧರ್ಮ ಸಮ್ಮೇಳನದ 82ನೇ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲ ಧರ್ಮ, ಸಿದ್ಧಾಂತಗಳು ಮಾನವೀಯತೆಯ ಚಿಂತನೆಯ ಸಾರಿವೆ ಎಂದು ಹೇಳಿದರು. [ಲಕ್ಷದೀಪೋತ್ಸವದ ಚಿತ್ರಗಳು]

ಶುಕ್ರವಾರ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದ ರಾಜ್ಯಪಾಲರು, ಯುವಜನತೆ ನಮ್ಮ ಸನಾತನ ಸಂಸ್ಕೃತಿಯನ್ನು ಬಿಟ್ಟು ಭೌತಿಕ ಚಿಂತನೆಗೆ, ಆರ್ಥಿಕತೆಯ ಸಂಸ್ಕೃತಿಯೆಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದರಿಂದ ಹಲವಾರು ಸಮಸ್ಯೆ ಉಂಟಾಗುತ್ತಿದೆ ಎಂದು ರಾಜ್ಯಪಾಲರು ಆತಂಕ ವ್ಯಕ್ತಪಡಿಸಿದರು. [ಚಿತ್ರಗಳು : ಜನನಿ ಧರ್ಮಸ್ಥಳ]

ಧಾರ್ಮಿಕ ನಾಯಕರು ಮಕ್ಕಳಿಗೂ ಸಂಸ್ಕೃತಿಯ ಸಂದೇಶ ನೀಡುವ ಮೂಲಕ ಅವರನ್ನು ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದ ರಾಜ್ಯಪಾಲರು, ಆದರ್ಶಗಳು ಕೇವಲ ಹೇಳುವುದಕ್ಕಲ್ಲ. ಪ್ರತಿಯೊಬ್ಬರೂ ಜೀವನದಲ್ಲಿ ಅದನ್ನು ಅಳವಡಿಸಿಕೊಂಡು ಆತ್ಮ ಸಾಕ್ಷಿಗೆ ಅನುಗುಣವಾಗಿ ಬದುಕಬೇಕು ಎಂದು ಕರೆ ನೀಡಿದರು.

ಎಲ್ಲಾ ಧರ್ಮಗಳ ಧಾರ್ಮಿಕ ನಾಯಕರೇ ಎಲ್ಲರ ಏಳಿಗೆಗಾಗಿ ದುಡಿಯುವವರಾಗಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಸೇವಾ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರು ಅಭಿನಂದನೆ ಸಲ್ಲಿಸಿದರು.

ಸರ್ವಧರ್ಮ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯಾವರು, ಧರ್ಮವನ್ನು ಅರ್ಥ ಮಾಡಿಕೊಳ್ಳದೆ ಅದರ ಹೆಸರಿನಲ್ಲಿ ಕಲಹ ಮಾಡುವ ಜನರ ನಡುವೆ ಪ್ರೀತಿ, ಸಾಮರಸ್ಯ ಮೂಡಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಾರತವು ಎಲ್ಲ ಧರ್ಮಗಳಿಗೂ ಅವಕಾಶ ನೀಡಿದ ಪುಣ್ಯ ಭೂಮಿಯಾಗಿದೆ. ನಮ್ಮ ಅಭಿಮತಕ್ಕೆ ಹೊಂದಿಕೆಯಾಗುವ ಧರ್ಮವನ್ನು ಸ್ವತಂತ್ರವಾಗಿ ಆಯ್ಕೆ ಮಾಡಿಕೊಳ್ಳಬಹುದು. ನಮ್ಮ ದೃಷ್ಟಿಗೆ ಸರಿ ಎನಿಸುವ ವಿಮರ್ಶೆ ಮಾಡಬಹುದು ಎಂದರು.

ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದ ಹೆಗ್ಗಡೆಯವರು, ಹಿಂದೂ ಧರ್ಮವು ಅತ್ಯಂತ ಪ್ರಾಚೀನ ಧರ್ಮವಾಗಿದ್ದು ಭಾರತ ಜ್ಞಾನ ವೃದ್ಧ ದೇಶವೂ ಆಗಿದೆ. ಅಪಾರ ಜ್ಞಾನದ ಒಡೆಯರಾದ ಅನೇಕ ಋಷಿ ಮುನಿಗಳು, ಸಾಹಿತಿಗಳು ಇಲ್ಲಿ ಬೆಳೆದು ಬಂದಿದ್ದಾರೆ ಎಂದು ಬಣ್ಣಿಸಿದರು.

ಸರ್ವಧರ್ಮ ಸಮ್ಮೇಳನದಲ್ಲಿ 'ಕ್ರೈಸ್ತ ಧರ್ಮದಲ್ಲಿ ಸಮನ್ವಯತೆಯ ದೃಷ್ಟಿ' ಎಂಬ ವಿಷಯದಲ್ಲಿ ಮಂಗಳೂರು ಸೈಂಟ್ ಜೋಸೆಫ್ ಸೆಮಿನರಿಯ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ. ಕ್ಲಿಫರ್ಡ್ ಫರ್ನಾಂಡಿಸ್ ವಿಷಯ ಮಂಡಿಸಿದರು. ಬೆಂಗಳೂರಿನ ಮಹಾಬೋಧಿ ಸೊಸೈಟಿಯ ನಿರ್ದೇಶಕ ಡಾ. ಬಿ.ವಿ. ರಾಜಾರಾಮ್ ಅವರು 'ಬೌದ್ಧ ಧರ್ಮದಲ್ಲಿ ಸಮನ್ವಯದ ಬಗ್ಗೆ' ಮಾತನಾಡಿದರು.

All Religion Conference

ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕ ಬಿ.ಎಂ. ಹನೀಫ್ ಅವರು 'ಇಸ್ಲಾಂ ಧರ್ಮದಲ್ಲಿ ಸಮನ್ವಯ'ದ ಬಗ್ಗೆ ಉಪನ್ಯಾಸ ನೀಡಿದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

English summary
The Laksha Deepotsava is a spectacular annual event at Sri Kshetra, Dharmasthala which also hosts All Religion Conference. Karnataka governor Vajubhai Vala inaugurated the 82nd Sarva Dharma Sammelana on Friday November 21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X