ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಗಾರು ಪ್ರವೇಶ ವಿಳಂಬ, ಬೆಂಗಳೂರಲ್ಲಿ ಜೋರು ಮಳೆ ಸದ್ಯಕ್ಕಿಲ್ಲ!

ನಿರೀಕ್ಷೆಗಿಂತ ಹೆಚ್ಚು ವಿಳಂಬವಾಗಿರುವ ಮುಂಗಾರು, ನಿತ್ಯ ಮಳೆ ಅನುಭವಿಸಿರುವ ಬೆಂಗಳೂರು, ಕರಾವಳಿ, ಮಲೆನಾಡಿನಲ್ಲಿ ಮಳೆ ಜೋರು, ಕೃಷಿ ಚಟುವಟಿಕೆ ವೇಳಾಪಟ್ಟಿ ಏರು ಪೇರು.

By Mahesh
|
Google Oneindia Kannada News

ಬೆಂಗಳೂರು, ಜೂನ್ 11: ಈ ಬಾರಿ ನಿರೀಕ್ಷೆಗಿಂತ ಹೆಚ್ಚು ವಿಳಂಬವಾಗಿದೆ. ರಾಜ್ಯದ ಕರಾವಳಿ, ಮಲೆನಾಡು ಭಾಗಗಗಳಲ್ಲಿ ಮಳೆ ಕಾಣಿಸಿಕೊಂಡಿದ್ದರೂ ಕರ್ನಾಟಕಕ್ಕೆ ಮುಂಗಾರು ಪ್ರವೇಶವಾಗಿದೆ ಎಂಬ ಅಧಿಕೃತ ಹೇಳಿಕೆ ನೀಡಲು ಹಿಂದು ಮುಂದು ನೋಡುವಂತಾಗಿದೆ.

ಜೂನ್ 15ರ ತನಕ ರಾಜ್ಯದ ವಿವಿಧೆಡೆ ಜೋರು ಮಳೆ ನಿರೀಕ್ಷಿತವಾಗಿದೆ. ಬೆಂಗಳೂರಿನಲ್ಲಿ ಎಂದಿನಂತೆ ಸಂಜೆ ವೇಳೆ ಸಾಧಾರಾಣ ಮಳೆ ಬೀಳಲಿದೆ.

Monsoon 2017 : Onset of monsoon in Karnataka further delayed

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ದಕ್ಷಿಣ ಒಳನಾಡಿನ ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ, ಕಲಬುರಗಿ, ಬೀದರ್, ಹೈದರಾಬಾದ್ -ಕರ್ನಾಟಕದಲ್ಲಿ ಮಳೆ ಚುರುಕಾಗಲಿದೆ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ವಾರ ಜೋರು ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿಗೆ ಮುನ್ಸೂಚನೆ : ಸಾಧಾರಾಣ ಮಳೆ ಜೂನ್ 14ರ ತನಕ ನಿರೀಕ್ಷಿಸಬಹುದು. ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಜೂನ್ 12ರಿಂದ ಎರಡು ದಿನ ಗುಡುಗು ಸಹಿತ ಮಳೆ ಬೀಳುವ ಸಾಧ್ಯತೆಯೂ ಇದೆ.

ಕರ್ನಾಟಕದ ಕರಾವಳಿ, ಮಳೆನಾಡು, ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ, ಉತ್ತರ ಹಾಗೂ ಕೇಂದ್ರ ಭಾಗಗಳಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಕೇಂದ್ರದ ನಿರ್ದೇಶಕ ಜಿಎಸ್ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.(ಐಎಎನ್ಎಸ್)

English summary
The onset of southwest monsoon in Karnataka has been delayed a few more days, said a senior official on Saturday."Karnataka may receive heavy rain during the next three to four days, But, heavy rain is not expected in Bengaluru like the one going on over the coastal parts of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X