ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ಸಂಸದರು ಆಯ್ಕೆಮಾಡಿಕೊಂಡ ಗ್ರಾಮಗಳು

|
Google Oneindia Kannada News

ಬೆಂಗಳೂರು, ನ.25 : ಪ್ರತಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮವೊಂದನ್ನು ದತ್ತು ತೆಗೆದುಕೊಂಡು ಅದನ್ನು ಅಭಿವೃದ್ಧಿಗೊಳಿಸುವ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರೋತ್ಸವದ ಭಾಷಣದಲ್ಲಿ ಪ್ರಕಟಿಸಿದ್ದರು. ಅದರಂತೆ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.

ಕರ್ನಾಟಕದ 23 ಲೋಕಸಭಾ ಸದಸ್ಯರು ಹಾಗು 9 ಮಂದಿ ರಾಜ್ಯಸಭಾ ಸದಸ್ಯರು 'ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಗೆ' ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ಗ್ರಾಮಗಳ ಹೆಸರನ್ನು ಪ್ರಕಟಿಸಿದ್ದಾರೆ. ಇನ್ನೂ ಕೆಲವು ಸಂಸದರು ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ. [ಕರ್ನಾಟಕದ ಸಂಸದರು ಯಾರು? ಇಲ್ಲಿದೆ ಪಟ್ಟಿ]

Narendra Modi

ಕೇಂದ್ರ ಕಾನೂನು ಸಚಿವ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಅವರು ಯಶವಂತಪುರ ವಿಧಾನಸಭಾ ಕ್ಷೇತ್ರದ ಸೋಮನಹಳ್ಳಿ ಗ್ರಾಮ ಪಂಚಾಯತ್‌ನ ಮೂರು ಗ್ರಾಮಗಳನ್ನು ದತ್ತು ಪಡೆದಿದ್ದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತಕುಮಾರ್ ಅವರು, ಆನೇಕಲ್ ತಾಲೂಕಿನ ರಾಗಿಹಳ್ಳಿ ಗ್ರಾಮ ಪಂಚಾಯತಿಯ 9 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಮ್ಮ ಸಂಸದರು ಆಯ್ಕೆ ಮಾಡಿಕೊಂಡ ಗ್ರಾಮಗಳ ಪಟ್ಟಿ ಇಲ್ಲಿದೆ

ಸಂಸದರು ಕ್ಷೇತ್ರ ಆಯ್ಕೆ ಮಾಡಿಕೊಂಡ ಗ್ರಾಮ
ಬಿ.ಎಸ್.ಯಡಿಯೂರಪ್ಪ ಶಿವಮೊಗ್ಗ ಕೆರಾಡಿ (ಕುಂದಾಪುರ ತಾಲೂಕು)
ಪಿ.ಸಿ.ಮೋಹನ್ ಬೆಂಗಳೂರು ಕೇಂದ್ರ
ಯರಪ್ಪನಹಳ್ಳಿ (ಮಹಾದೇವಪುರ ವಿಧಾನಸಭಾ ಕ್ಷೇತ್ರ)
ಬಿ.ಶ್ರೀರಾಮುಲು ಬಳ್ಳಾರಿ ತಂಬ್ರಳ್ಳಿ (ಹಗರಿಬೊಮ್ಮನಹಳ್ಳಿ ತಾಲೂಕು)
ಪ್ರಹ್ಲಾದ್ ಜೋಶಿ
ಧಾರವಾಡ ಹಾರೋಬೆಳವಾಡಿ
ಪ್ರತಾಪ್ ಸಿಂಹ
ಮೈಸೂರು-ಕೊಡಗು
ಕರಿಮುದ್ದೇನಹಳ್ಳಿ (ಹುಣಸೂರು ತಾಲೂಕು)
ಸಿ.ಎಸ್.ಪುಟ್ಟರಾಜು
ಮಂಡ್ಯ ಕೆರೆ ತೊಣ್ಣೂರು (ಪಾಂಡವಪುರ ತಾಲೂಕು)
ಬಿ.ವಿ.ನಾಯಕ್ ರಾಯಚೂರು
ಜಾಗೀರ ವೆಂಕಟಾಪುರ (ರಾಯಚೂರು ತಾಲೂಕು)
ಎಚ್.ಡಿ.ದೇವೇಗೌಡ ಹಾಸನ
ಚನ್ನಂಗಿಹಳ್ಳಿ (ಹಾಸನ ತಾಲೂಕು)
ಧ್ರುವ ನಾರಾಯಣ
ಚಾಮರಾಜನಗರ
ಬಿ.ಬಿ.ಕುಪ್ಪೆ (ಎಚ್.ಡಿ.ಕೋಟೆ ತಾಲೂಕು)
ನಳೀನ್ ಕುಮಾರ್ ಕಟೀಲ್
ಮಂಗಳೂರು
ಬಳ್ಪ (ಸುಳ್ಯ ತಾಲೂಕು)
ಶಿವಕುಮಾರ್ ಉದಾಸಿ
ಹಾವೇರಿ
ಯಳವಟ್ಟಿ (ಶಿರಹಟ್ಟಿ ತಾಲೂಕು)
ಶೋಭಾ ಕರಂದ್ಲಾಜೆ
ಉಡುಪಿ -ಚಿಕ್ಕಮಗಳೂರು
ದಾರದಹಳ್ಳಿ (ಮೂಡಿಗೆರೆ ತಾಲೂಕು)
ಭಗವಂತ ಖೂಬ
ಬೀದರ್
ಗೋರ್ಟಾ (ಬಸವಕಲ್ಯಾಣ ತಾಲೂಕು)
ಅನಂತ ಕುಮಾರ ಹೆಗಡೆ
ಉತ್ತರ ಕನ್ನಡ
ಕಾನಗೋಡ್ (ಸಿದ್ಧಾಪುರ ತಾಲೂಕು)
ರಮೇಶ್ ಜಿಗಜಿಣಗಿ
ವಿಜಯಾಪುರ ಮಣಕಪುರ್ (ವಿಜಯಾಪುರ ತಾಲೂಕು)
ಡಿ.ಕೆ.ಸುರೇಶ್ ಬೆಂಗಳೂರು ಗ್ರಾಮಾಂತರ
ಮಡಿಕೆಹಳ್ಳಿ (ಕುಣಿಗಲ್ ತಾಲೂಕು)
ಮುದ್ದಹನುಮೇಗೌಡ ತುಮಕೂರು ಚಿಕ್ಕಗಾಳವಟ್ಟ (ಮಧುಗಿರಿ ತಾಲೂಕು)
ಕೆ.ಎಚ್.ಮುನಿಯಪ್ಪ
ಕೋಲಾರ
ಬೆಟ್ಟಕಾಮದೇನಹಳ್ಳಿ (ಬಂಗಾರಪೇಟೆ ತಾಲೂಕು)
ಪ್ರಕಾಶ್ ಹುಕ್ಕೇರಿ
ಚಿಕ್ಕೋಡಿ
ಶಿರದವಾಡ (ಚಿಕ್ಕೋಡಿ)
ರಾಜೀವ್ ಚಂದ್ರಶೇಖರ್
ರಾಜ್ಯಸಭೆ ಹೆಗ್ಗನಹಳ್ಳಿ (ದೇವನಹಳ್ಳಿ ಸಮೀಪ)
ಆಸ್ಕರ್ ಫರ್ನಾಂಡೀಸ್
ರಾಜ್ಯಸಭೆ ಶಿರೂರು (ಉಡುಪಿ ತಾಲೂಕು)
ರಾಜೀವ್ ಗೌಡ
ರಾಜ್ಯಸಭೆ ತಾಯಿಲೂರು (ಮುಳಬಾಗಲು)
ಕುಪೇಂದ್ರ ರೆಡ್ಡಿ ರಾಜ್ಯಸಭೆ
ಕಬ್ಳಿ (ಹೊಳೆನರಸೀಪುರ ತಾಲೂಕು)
ಬಿ.ಜಯಶ್ರೀ ರಾಜ್ಯಸಭೆ
ಹೆಬ್ಬೂರು (ತುಮಕೂರು ತಾಲೂಕು)
ಬಸವರಾಜ ಪಾಟೀಲ್ ಸೇಡಂ
ರಾಜ್ಯಸಭೆ ಕುಕ್ಕುಂದ (ಸೇಡಂ ತಾಲೂಕು)
ಆಯನೂರು ಮಂಜುನಾಥ್
ರಾಜ್ಯಸಭೆ
ತಮ್ಮಡಿಹಳ್ಳಿ (ಶಿವಮೊಗ್ಗ ತಾಲೂಕು)
ಪ್ರಭಾಕರ ಕೋರೆ
ರಾಜ್ಯಸಭೆ
ಜನವಾಡ (ಚಿಕ್ಕೋಡಿ ತಾಲೂಕು)
ವೆಂಕಯ್ಯ ನಾಯ್ಡು
ರಾಜ್ಯಸಭೆ
ಉಪ್ಪಾಡ (ಆಂಧ್ರಪ್ರದೇಶ)
English summary
Pradhan Mantri Adarsh Gram Yojana (PMAGY) aims to achieve integrated development of selected villages through convergent implementation of all relevant Central and State schemes. 23 Karnataka MPs, including Congress have selected village of their choice in various parts of the state. 9 MPs are yet to disclose their choice of village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X