ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಆಡಳಿತಕ್ಕೆ ಕಾಲಿಡಲಿರುವ ಸಿದ್ದರಾಮಯ್ಯ ಸರ್ಕಾರ

By Mahesh
|
Google Oneindia Kannada News

ಬೆಂಗಳೂರು, ಡಿ.7: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಗೆ ಸೋಮವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ತಂತ್ರಜ್ಞಾನ ಬಳಕೆ ಮೂಲಕ ಸರ್ಕಾರಿ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೊಬೈಲ್ ಆಡಳಿತಕ್ಕೆ ಸಿದ್ದರಾಮಯ್ಯ ಅವರು ನಾಳೆಯಿಂದ ಕಾಲಿಡಲಿದ್ದಾರೆ. ಬಹುನಿರೀಕ್ಷಿತ ಎಂ ಒನ್ ಅಪ್ಲಿಕೇಷನ್ ಲೋಕಾರ್ಪಣೆಗೆ ಸಜ್ಜಾಗಿದೆ.

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ ಮಧ್ಯಾಹ್ನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಮೊಬೈಲ್ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ. ಇ-ಆಡಳಿತದಲ್ಲಿ ಯಶಸ್ಸು ಸಾಧಿಸಿರುವ ಕರ್ನಾಟಕ ಸರ್ಕಾರ ಮೊಬೈಲ್ ಆಡಳಿತ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮುಂದಾಗಿದೆ.

ಸಾರ್ವಜನಿಕರು ಕುಳಿತಲ್ಲಿಯೇ ತಮ್ಮ ಮೊಬೈಲ್ ಮೂಲಕ ನೀರು, ವಿದ್ಯುತ್, ದೂರವಾಣಿ ಬಿಲ್‌ಗಳನ್ನು ಪಾವತಿಸಬಹುದು. ಬಸ್ ಮಾರ್ಗಗಳು, ಸಮಯದ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಸಂಚಾರಿ ನಿಯಮ ಉಲ್ಲಂಘನೆ ದಂಡ ಪಾವತಿ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸೇವೆಗಳನ್ನು ಮೊಬೈಲ್ ಆಡಳಿತದ ಮೂಲಕ ಒದಗಿಸಲು ರಾಜ್ಯಸರ್ಕಾರ ಮುಂದಾಗಿದೆ.

CM Siddaramaiah's brainchild Mobile governance project M One launch on Dec 8

ದೇಶದಲ್ಲೇ ಪ್ರಥಮ: 2013ರಲ್ಲಿ ಆನ್ ಮೊಬೈಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಜ್ಯಸರ್ಕಾರ ಮೊಬೈಲ್ ಆಡಳಿತವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಎಲ್ಲ ಸೇವೆಗಳಿಗೂ ವಿಸ್ತರಣೆ ಮಾಡಲು ಮುಂದಾಗಿದೆ.

ಮೊಬೈಲ್ ಆಡಳಿತ (ಎಂ-ಆಡಳಿತ)ದ ಮೂಲಕ ಜನರ ಸಮಯ ಉಳಿಸುವುದರ ಜತೆಗೆ ಕರಾರುವಕ್ಕು ಮತ್ತು ಉತ್ಕೃಷ್ಟ ಸೇವೆ ಒದಗಿಸಬಹುದು. ದೇಶದಲ್ಲೇ ಮೊದಲ ಬಾರಿಗೆ ಎಂ-ಆಡಳಿತವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿನಲ್ಲಿ ಮೂರು ಗಂಟೆ ಸುಮಾರಿಗೆ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ರಾಷ್ಟ್ರಪತಿಯವರು ಮಧ್ಯಾಹ್ನ 2.15ಕ್ಕೆ ಯಲಹಂಕದ ವಾಯುಸೇನೆ ನೆಲೆಗೆ ಆಗಮಿಸಲಿದ್ದಾರೆ. ನಾಳಿನ ಐತಿಹಾಸಿಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಟಿ.ಬಿ.ಜಯಚಂದ್ರ, ಎಸ್.ಆರ್.ಪಾಟೀಲ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.

ಮೊಬೈಲ್‌ ಒನ್‌ ಕುರಿತು ಒಂದಷ್ಟು : ಸರ್ಕಾರ, ಖಾಸಗಿ ವಲಯದ ವಿವಿಧ ರೀತಿಯ ಸೇವೆ­ಯನ್ನು ಮೊಬೈಲ್‌ ಮೂಲಕ ನೀಡುವ ಯೋಜನೆ ಇದಾಗಿದೆ. ಸರ್ಕಾರದ 37 ಇಲಾಖೆಗಳ 637 ಸೇವೆಗಳು G2C) ಮೊಬೈಲ್‌ ಮೂಲಕವೇ ಲಭ್ಯವಾಗಲಿವೆ. ಜೊತೆಗೆ ಉದ್ಯಮಿಗಳಿಂದ ಗ್ರಾಹಕರನ್ನು ತಲುಪಲು B2C ವಿಭಾಗದಲ್ಲಿಸುಮಾರು 3,644 ಸೇವೆಗಳನ್ನು ಒದಗಿಸಲಾಗುತ್ತಿದೆ. ಇದು ಬಹುಶಃ ವಿಶ್ವದಲ್ಲೇ ಅತ್ಯಧಿಕ ಸೇವೆ ನೀಡುತ್ತಿರುವ ಅಪ್ಲಿಕೇಷನ್ ಆಗಿದ್ದು, ಎಲ್ಲವೂ ಸಮರ್ಥವಾಗಿ ಕಾರ್ಯ ನಿರ್ವಹಿಸಿದರೆ ಸಿದ್ದರಾಮಯ್ಯ ಅವರು ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಸಂಶಯವೇ ಇಲ್ಲ.

ಮೋದಿ ಮಾದರಿ ಭಾಷಣ ಪ್ರಸಾರ : 'ಕರ್ನಾ­ಟಕ ಮೊಬೈಲ್‌ ಒನ್‌' ಸೇವೆ ಉದ್ಘಾಟನಾ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವ ಭಾಷಣವನ್ನು ಮೈಸೂರಿನಲ್ಲಿ 3ಡಿ ತಂತ್ರಜ್ಞಾನದ ಮೂಲಕ ಪ್ರಸಾರ ಮಾಡಲು ಸಿದ್ದತೆ ನಡೆಸಲಾಗಿತ್ತು. ಅದರೆ, ಈ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.

ಪ್ರಧಾನಿ ಕಿವಿಗೂ ಬಿದ್ದ ಎಂ ಒನ್ ಅಪ್: ದೇಶದ ಎಲ್ಲಾ ಮುಖ್ಯಮಂತ್ರಿಗಳ ಸಭೆ ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನಾ ಆಯೋಗ ಬದಲಾಯಿಸಿ ಹೊಸ ಮಾದರಿ ಮೂರು ಸ್ತರದ ಟೀಂ ಇಂಡಿಯಾ ಕಟ್ಟುವ ಕಲ್ಪನೆಯನ್ನು ಹೊರಹಾಕಿದರು. ಇದಕ್ಕೆ ನಿರೀಕ್ಷೆಯಂತೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳ ಸಿಎಂಗಳು ವಿರೋಧ ವ್ಯಕ್ತಪಡಿಸಿ ಹಲವು ದಶಕಗಳಿಂದ ಜಾರಿಯಲ್ಲಿರುವ ನೆಹರೂ ಅವರ ಕನಸಿನ ಯೋಜನಾ ಆಯೋಗವನ್ನು ಮುಂದುವರೆಸುವಂತೆ ಮನವಿ ಮಾಡಿದರು.

ಸಭೆ ಬಳಿಕ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಾತನಾಡಿ ಅವರಿಗೆ ಕರ್ನಾಟಕ ಮೊಬೈಲ್ ಆಡಳಿತ ಯೋಜನೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

English summary
Karnataka’s M-One Project To Bring Single Mobile App Offering 4281 Govt Services. Mobile governance project will be launched this Dec 8th by President Pranab Mukherjee in Bengaluru. This is the fist of its kind which enables citizens to use government services on their handheld devices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X