ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ಮಿನಿ ವಿಮಾನ ನಿಲ್ದಾಣ ಅಭಿವೃದ್ಧಿ, ಸಚಿವರ ಭರವಸೆ

|
Google Oneindia Kannada News

ಬೆಂಗಳೂರು, ಫೆ.5 : ಕಲಬುರಗಿ, ಶಿವಮೊಗ್ಗ, ಬಳ್ಳಾರಿ, ವಿಜಯಪುರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸಣ್ಣ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಉದ್ದೇಶಿಸಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ರೋಷನ್ ಬೇಗ್ ಹೇಳಿದ್ದಾರೆ.

ಬುಧವಾರದ ವಿಧಾನಸಭೆ ಕಲಾಪದಲ್ಲಿ ಬೀದರ್ ಕ್ಷೇತ್ರದ ಶಾಸಕ ಡಾ. ಗುರುಪಾದಪ್ಪ ನಾಗಮಾರಪಲ್ಲಿ ಅವರ ಪ್ರಶ್ನೆಗೆ ಲಿಖಿತ ರೂಪದ ಉತ್ತರ ನೀಡಿದರ ಸಚಿವರು, ರಾಜ್ಯ ಸರ್ಕಾರ ಮಿನಿ ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ 2011-12 ನೇ ಸಾಲಿನಲ್ಲಿ 1.48 ಕೋಟಿ ರೂ. 2012-13 ನೇ ಸಾಲಿನಲ್ಲಿ 3.68 ಕೋಟಿ ರೂ ಹಾಗೂ 2013-14 ನೇ ಸಾಲಿನಲ್ಲಿ 8.10 ಕೋಟಿ ರೂ. ವೆಚ್ಚಮಾಡಿದೆ ಎಂದರು.

Roshan Baig

ಈ ವಿಮಾನ ನಿಲ್ದಾಣಗಳಲ್ಲಿ ಯಾವ ನಿಲ್ದಾಣದ ಕಾಮಗಾರಿಯೂ ಪೂರ್ಣಗೊಂಡಿರುವುದಿಲ್ಲ. ಇದರಲ್ಲಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪಡೆದವರು ಈ ಯೋಜನೆ ತಾಂತ್ರಿಕವಾಗಿ ಮತ್ತು ಆರ್ಥಿಕವಾಗಿ ಕಾರ್ಯ ಸಾಧುವಲ್ಲವೆಂಬ ಕಾರಣ ನೀಡಿ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿಸಿದರು. [ವಿಮಾನ ನಿಲ್ದಾಣದ ಕನಸು ನನಸಾಗೋಲ್ಲ]

ಕಲಬುರಗಿ ಮತ್ತು ಶಿವಮೊಗ್ಗ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಟೆಂಡರ್ ಪಡೆದವರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಸರ್ಕಾರದ ಮನವೊಲಿಕೆ ಪ್ರಯತ್ನಗಳು ವಿಫಲವಾದ್ದರಿಂದ ಅವರು ನೀಡಿದ್ದ ಬ್ಯಾಂಕ್ ಖಾತ್ರಿಯನ್ನು ಮುಟ್ಟುಗೋಲು ಹಾಕಿಕೊಂಡು ಟೆಂಡರ್ ರದ್ದುಪಡಿಸಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು. [ಜಿಲ್ಲೆಗಳ ಮಿನಿ ಏರ್ ಪೋರ್ಟ್ ಕನಸು ದೂರ!]

ಹಾಸನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಟೆಂಡರ್ ಪಡೆದವರು ಯೋಜನಾ ವರದಿಯನ್ನು ನೀಡಿದ್ದಾರೆ. ಈ ವರದಿಯು ಪರಿಶೀಲನೆ ನಡೆಯುತ್ತಿದೆ. ಬಳ್ಳಾರಿ ನಿಲ್ದಾಣದ ಅಭಿವೃದ್ಧಿ ಜಮೀನನ್ನು ಕಾಮಗಾರಿಗಾಗಿ ಹಸ್ತಾಂತರಿಸುವ ಕಾರ್ಯಪ್ರಗತಿಯಲ್ಲಿದೆ ಎಂದು ಹೇಳಿದರು. [ಬುಧವಾರದ ಕಲಾಪದ ಮುಖ್ಯಾಂಶಗಳು]

English summary
Minister for Infrastructure Development R. Roshan Baig said, government will develop mini airport inShivamogga, Vijayapur, Kalaburagi, Ballari and Hassan districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X