ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಕಿಮ್ಮನೆ ಕಾರು ಚಾಲಕನ ಮಾನವೀಯತೆಗೆ ಸಲಾಂ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31 : ಮೂರ್ಛೆ ರೋಗದಿಂದಾಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಮನೆಗೆ ಸೇರಿಸಿ ಸಚಿವ ಕಿಮ್ಮನೆ ರತ್ನಾಕರ್ ಕಾರಿನ ಚಾಲಕ ಮಾನವೀಯತೆ ಮೆರೆದಿದ್ದಾರೆ. ಹಿಂದೆ ಕೆರೆಗೆ ಬಿದ್ದಿದ್ದ ಕಾರಿನಲ್ಲಿ ಸಿಲುಕಿದ್ದ ಕುಟುಂಬವನ್ನು ಸಚಿವರ ಸಿಬ್ಬಂದಿ ರಕ್ಷಿಸಿದ್ದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕಾರು ಚಾಲಕ ಚಂದ್ರು ಅವರು ಮೂರ್ಛೆ ರೋಗದಿಂದ ರಸ್ತೆಯಲ್ಲಿ ಬಿದ್ದಿದ್ದ ಮುಬಾರಕ್ ಎಂಬ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಸಚಿವರನ್ನು ವಿಧಾನಸೌಧಕ್ಕೆ ಬಿಟ್ಟು ವಾಪಸ್ ಬರುವಾಗ ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿ ಮುಬಾರಕ್ ಅವರನ್ನು ರಕ್ಷಿಸಿದ್ದಾರೆ. [ಆರು ಮಂದಿ ಜೀವ ಉಳಿಸಿದ ಸಚಿವರ ಸಿಬ್ಬಂದಿಗಳು]

kimmane rathnakar

ಮೂರ್ಛೆ ರೋಗದಿಂದಾಗಿ ಮುಬಾರಕ್ ರಸ್ತೆಯಲ್ಲಿ ಬಿದ್ದಿದ್ದರು ಆದರೆ, ದಾರಿಹೋಕರು ಯಾರೂ ಅವರಿಗೆ ಸಹಾಯ ಮಾಡುತ್ತಿರಲಿಲ್ಲ. ಇದನ್ನು ಗಮನಿಸಿದ ಚಂದ್ರು ಅವರು ಕಾರು ನಿಲ್ಲಿಸಿ ಮುಬಾರಕ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಿದ್ದಾರೆ. [ಸಚಿವ ಖಾದರ್ ಮಾನವೀಯತೆಗೆ ಸಲಾಂ]

ಹಿಂದೆಯೂ ರಕ್ಷಣೆ ಮಾಡಿದ್ದರು : 2013ರಲ್ಲಿ ಸಚಿವರ ಕಾರನ್ನು ಹಿಂದಿಕ್ಕುವ ರಭಸದಲ್ಲಿ ಕಾರು ಸಮೇತ ಕೆರೆಗೆ ಬಿದ್ದಿದ್ದ ಆರು ಮಂದಿಯನ್ನು ಕಿಮ್ಮನೆ ರತ್ನಾಕರ್ ಅವರ ಕಾರು ಚಾಲಕ ಚಂದ್ರು ಮತ್ತು ಬೆಂಗಾವಲು ಪಡೆ ಸಿಬ್ಬಂದಿ ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿಯಲ್ಲಿ ರಕ್ಷಣೆ ಮಾಡಿದ್ದರು.

English summary
Karnataka Primary and secondary education minister Kimmane Ratnakar driver rescued man suffering from seizure at road side near Vidhana Soudha, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X