ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಂಎಫ್‌ನಿಂದ ಗರ್ಭಿಣಿಯರಿಗೆ ಹಾಲು, ತುಪ್ಪದ ಭಾಗ್ಯ?

|
Google Oneindia Kannada News

ಬೆಂಗಳೂರು, ನವೆಂಬರ್ 08 : 'ಕರ್ನಾಟಕ ಹಾಲು ಮಹಾಮಂಡಳದ ವತಿಯಿಂದ ಗರ್ಭಿಣಿಯರಿಗೆ ಉಚಿತವಾಗಿ ಹಾಲು ಮತ್ತು ತುಪ್ಪ ಒದಗಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ' ಎಂದು ಪಶುಸಂಗೋಪನಾ ಸಚಿವ ಎ.ಮಂಜು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಎ.ಮಂಜು ಅವರು, 'ಗರ್ಭಿಣಿಯರಿಗೆ ವಾರದಲ್ಲಿ 3 ದಿನ ಉಚಿತವಾಗಿ ಹಾಲು ಮತ್ತು ಪ್ರತಿ ತಿಂಗಳು 2 ಕೆಜಿ ತುಪ್ಪ ನೀಡುವ ಪ್ರಸ್ತಾವನೆ ಸರ್ಕಾರದ ಮಂದಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮಾತುಕತೆ ನಡೆಸಿದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದರು ಹೇಳಿದರು. [ಕುರಿ ಮಾಂಸ ಪ್ರಿಯರಿಗೆ ಸುದ್ದಿ: ಜಿಲ್ಲೆ ಜಿಲ್ಲೆಗಳಲ್ಲಿ ಮಟನ್ ಕೇಂದ್ರ!]

arkalagud manju

ಮೊಸರಿನ ದರ ಇಳಿಕೆ : ಗ್ರಾಹಕರ ಸಲಹೆಯಂತೆ ಕೆಎಂಎಫ್ 8 ರೂ.ಗಳ ಪ್ಯಾಕೆಟ್‌ನಲ್ಲಿಯೇ ಮೊಸರನ್ನು ಸರಬರಾಜು ಮಾಡಲು ಒಪ್ಪಿಗೆ ನೀಡಿದೆ. ಅಕ್ಟೋಬರ್ 21ರಿಂದ ಹೊಸ ವಿನ್ಯಾದ ಪ್ಯಾಕೆಟ್‌ನಲ್ಲಿ 200ರ ಬದಲು 250 ಎಂಎಲ್ ಮೊಸರನ್ನು ಕೆಎಂಎಫ್ ಒದಗಿಸುತ್ತಿತ್ತು. [ಕ್ಷೀರಭಾಗ್ಯ ಯೋಜನೆ ಐದು ದಿನಗಳಿಗೆ ವಿಸ್ತರಣೆ]

250 ಎಂಎಲ್ ಮೊಸರಿಗೆ 10 ರೂ. ದರ ಪಡೆಯಲಾಗುತ್ತಿತ್ತು. ಆದರೆ, ಗ್ರಾಹಕರು ಹಳೆ ಪ್ಯಾಕೆಟ್‌ಗಳಲ್ಲಿಯೇ ಮೊಸರನ್ನು ನೀಡುವಂತೆ ಕೆಎಂಎಫ್‌ಗೆ ಸಲಹೆ ನೀಡಿದ್ದರು. ಇದಕ್ಕೆ ಕೆಎಂಎಫ್ ಒಪ್ಪಿಗೆ ನೀಡಿದ್ದು, ಮೊಸರಿನ ದರ ಪುನಃ 8 ರೂ.ಗಳಾಗಲಿದೆ. [ನಂದಿನಿ ತುಪ್ಪದ ಘಮಲು ಕಳೆದುಕೊಂಡ ತಿರುಪತಿ ಲಡ್ಡು!]

ಹೊಸ ವಿನ್ಯಾಸದ ಪ್ಯಾಕೆಟ್‌ನಲ್ಲಿ ಬದಲಾವಣೆ ತರುವಂತೆ ಗ್ರಾಹಕರು ನೀಡಿದ ಸಲಹೆಯನ್ನು ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕೆಎಂಎಫ್ ನಿರ್ದೇಶಕ (ಮಾರುಕಟ್ಟೆ) ರವಿ ಕುಮಾರ್ ಕಾಕಡೆ ತಿಳಿಸಿದ್ದಾರೆ.

English summary
Minister for Animal Husbandry A. Manju said, Karnataka Milk Federation (KMF) plans to distribute milk three days a week and 2 kg of ghee a month to pregnant women from below poverty line (BPL) families in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X