ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಜಿಲ್ಲಾ ಅಮೃತ ಮಹೋತ್ಸವಕ್ಕೆ ಬನ್ನಿ : ಅಂಬರೀಷ್

By Mahesh
|
Google Oneindia Kannada News

ಮಂಡ್ಯ, ಫೆ.19: ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಡ್ಯ ಜಿಲ್ಲಾ ಅಮೃತ ಮಹೋತ್ಸವ ಕಾರ್ಯಕ್ರಮ ಫೆಬ್ರವರಿ 20, 21 ಮತ್ತು 22 ರಂದು ವೈವಿಧ್ಯಮ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಅಂಬರೀಷ್ ಅವರು ಸಾರ್ವಜನಿಕರಿಗೆ ನೀಡಿರುವ ಆಹ್ವಾನದ ಸಾರಾಂಶ ಈ ಕೆಳಗಿನಂತಿದೆ...

ನಮಸ್ಕಾರ
ಮಂಡ್ಯ ಜಿಲ್ಲೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದ್ದು, ಇದನ್ನು ಸಕ್ಕರೆಯ ನಾಡು ಎಂದು ಕರೆಯಲಾಗುತ್ತದೆ. ವಿಶ್ವಪ್ರಸಿದ್ಧ ದೇವಾಲಯಗಳು, ಫಲವತ್ತಾದ ಕೃಷಿ ಭೂಮಿ ಮಂಡ್ಯ ಜಿಲ್ಲೆಯಲ್ಲಿದೆ.

ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರ ದೂರದೃಷ್ಠಿ ಹಾಗೂ ದಿವಾನ್ ಸರ್.ಎಂ.ವಿಶ್ವೇಶ್ವರಯ್ಯನವರ ಹೊಂಗನಸಿನಂತೆ 1939 ರಲ್ಲಿ ಮಂಡ್ಯ ಜಿಲ್ಲೆ ಉದಯವಾಯಿತು. ಇಂದಿಗೆ ಜಿಲ್ಲೆ 75 ಸಂವತ್ಸರಗಳನ್ನು ಕಂಡಿದೆ.

ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಂಸ್ಮರಣಾರ್ಥ ಸರ್ಕಾರವು ಮಂಡ್ಯ ಜಿಲ್ಲೆಯ ಅಮೃತ ಮಹೋತ್ಸವವನ್ನು ನಡೆಸಲು ನಿರ್ಧರಿಸಿದೆ. ಫೆ. 20, 21 ಮತ್ತು 22 ರಂದು ಮಂಡ್ಯದಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

MH Ambareesh invites public to Mandya 75 Platinum jubilee celebration

ಈ ಕಾರ್ಯಕ್ರಮದ ಪ್ರಚಾರಕ್ಕಾಗಿ "ಅಮೃತ ರಥ" ಕ್ಕೆ ಫೆ.10 ರಂದು ಆದಿಚುಂಚನಗಿರಿ ಮಠದ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳು ನಾಗಮಂಗಲದ ಇತಿಹಾಸ ಪ್ರಸಿದ್ಧ ಸೌಮ್ಯಕೇಶವ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಿದ್ದು, ರಥವು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸುತ್ತಿದ್ದು ಕಾರ್ಯಕ್ರಮದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದೆ. [ಅಮೃತ ಮಹೋತ್ಸವ: ಮುಖ್ಯ ವೇದಿಕೆ ಚಿತ್ರಗಳು]

ಅಮೃತ ಮಹೋತ್ಸವದ ಅಂಗವಾಗಿ ಫೆ.17 ರಿಂದ 22 ರವರೆಗೆ ಮಂಡ್ಯದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಾಟಕೋತ್ಸವ ಏರ್ಪಡಿಸಲಾಗಿದೆ. ಈಗಾಗಲೇ ಮಂಡ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾಮಟ್ಟದ ಕ್ರೀಡಾ ಸ್ಪರ್ಧೆಗಳು ನಡೆದಿರುತ್ತವೆ.

ವಿಚಾರ ಸಂಕಿರಣ: ಫೆ.18 ಮತ್ತು 19 ರಂದು 'ವಿಚಾರ ಸಂಕಿರಣ'ವನ್ನು ಮಂಡ್ಯ ನಗರದ ರೈತಸಭಾಂಗಣದಲ್ಲಿ ಏರ್ಪಡಿಸಲಾಗಿದ್ದು 06 ಗೋಷ್ಠಿಗಳಲ್ಲಿ ಕೃಷಿ, ತೋಟಗಾರಿಕೆ, ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಮೂಲಭೂತ ಸೌಕರ್ಯಗಳನ್ನು ಕುರಿತ ವಿಚಾರಗಳನ್ನು ತಜ್ಞರು ಮಂಡಿಸಲಿದ್ದು, ಪ್ರಶ್ನೋತ್ತರಕ್ಕೂ ಅವಕಾಶ ಕಲ್ಪಿಸಲಾಗಿದೆ.

Mandya 75 Platinum jubilee celebration

ವಸ್ತು ಪ್ರದರ್ಶನ: ಜಿಲ್ಲೆಯು ನಡೆದುಬಂದ ದಾರಿಯನ್ನು ಗುರುತಿಸುವ ಸಲುವಾಗಿ "ಅಮೃತ ಮಹೋತ್ಸವ ವಸ್ತು ಪ್ರದರ್ಶನ" ಫೆ. 19 ರಿಂದ 24 ರವರೆಗೆ ಮಂಡ್ಯದ ಸರ್ಕಾರಿ ಬಾಲಕರ ಕಾಲೇಜು ಆವರಣದಲ್ಲಿ ನಡೆಯಲಿದ್ದು, ಇದರಲ್ಲಿ ಮಂಡ್ಯ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವೈಶಿಷ್ಟ್ಯತೆಯನ್ನು ತಿಳಿಸುವ ಮಳಿಗೆಗಳು ಇರಲಿವೆ. ಅಲ್ಲದೆ ಸಾಕಷ್ಟು ವಾಣಿಜ್ಯ ಮಳಿಗೆಗಳು ಇರುತ್ತವೆ ವಸ್ತು ಪ್ರದರ್ಶನದ ಆವರಣದಲ್ಲಿ ವೈವಿದ್ಯಮಯ ತಿನಿಸುಗಳ "ಆಹಾರ ಮೇಳ"ವು ಸಹ ನಡೆಯಲಿದೆ. [ಮಂಡ್ಯ 75 ವೆಬ್ ಸೈಟ್ ನಲ್ಲಿ ಏನೇನಿದೆ]

ಕಾರ್ಯಕ್ರಮದ ಅಂಗವಾಗಿ ಫೆ. 20 ರಂದು ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಿಂದ ಬೃಹತ್ ಮೆರವಣಿಗೆ ಏರ್ಪಡಿಸಲಾಗಿದ್ದು, ಇದರಲ್ಲಿ ರಾಜ್ಯದ ಹಲವಾರು ಜಿಲ್ಲೆಗಳ ಕಲಾತಂಡಗಳು ಭಾಗವಹಿಸಲಿವೆ. ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಮುಖ್ಯ ಕಾರ್ಯಕ್ರಮ ನಡೆಯುವ ಸ್ಥಳವಾದ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣವನ್ನು ತಲುಪಲಿದೆ.

ಎಸ್ ಎಂ ಕೃಷ್ಣ ರಿಂದ ಉದ್ಘಾಟನೆ: ಮುಖ್ಯ ಕಾರ್ಯಕ್ರಮ ಫೆ.20 ರಂದು ಸಂಜೆ 5.30 ಕ್ಕೆ ನಡೆಯಲಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರದ ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಿರ್ಮಲಾನಂದನಾಥ ಸ್ವಾಮಿಜಿ,ವಿಶ್ವೇಶತೀರ್ಥ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಮೈಸೂರು ರಾಜ ವಂಶಸ್ಥರಾದ ಶ್ರೀಮತಿ ಪ್ರಮೊದಾದೇವಿ ಒಡೆಯರ್ ರವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

Mandya 75 Platinum jubilee celebration stage

ರಾಜ್ಯದ ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಎಚ್. ಅಂಬರೀಷ್ ರವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಮಾಜಿ ಮುಖ್ಯಮಂತ್ರಿಗಳು, ವಿಧಾನ ಪರಿಷತ್ ಸಭಾಪತಿಗಳು, ವಿಧಾನ ಸಭೆಯ ಸಭಾಧ್ಯಕ್ಷರು, ರಾಜ್ಯದ ಹಲವಾರು ಸಚಿವರು ಜನ ಪ್ರತಿನಿಧಿಗಳು ಭಾಗವಹಿಸಲಿದ್ದು ಕೊನೆಯಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಫೆ.21ರಂದು ಸಂಜೆ ನಡೆಯಲಿರುವ 'ಸಾಧಕರಿಗೆ ಸನ್ಮಾನ' ಕಾರ್ಯಕ್ರಮದಲ್ಲಿ ಕೇಂದ್ರದ ಕಾನೂನು ಮತ್ತು ನ್ಯಾಯ ಸಚಿವಮಾನ್ಯ ಡಿ.ವಿ ಸದಾನಂದಗೌಡ, ಭಾರತದ ಮಾಜಿ ಪ್ರಧಾನ ಮಂತ್ರಿಎಚ್.ಡಿ. ದೇವೇಗೌಡ ರವರು ಭಾಗವಹಿಸಲಿದ್ದು ಶಿವಾನಂದಪುರಿ ಸ್ವಾಮಿಜಿ, ಪೂಜ್ಯ ಮನೋರಖ್ಖಿತ ಬಂತೇಜಿ, ಮೌಲಾನ ಅಲಾಜ್ ಮಹಮದ್ ಉಸ್ಮಾನ ಷರಿಫ್ ಹಾಗೂ ರೆವರೆಂಡ್ ವಿ ದೇವಕುಮಾರ್ ಬಿ.ಡಿ. ಭಾಗವಹಿಸಲಿದ್ದಾರೆ.

Mandya 75 Platinum jubilee celebration stage 1

ಸಮಾರೋಪ ಸಮಾರಂಭ : ಫೆ.22ರಂದು ನಡೆಯಲಿದ್ದು ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ಧರಾಮಯ್ಯನವರು ಸಮಾರೋಪ ಭಾಷಣ ಮಾಡಲಿದ್ದು,ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ ಶ್ರೀಮತಿ ಉಮಾಶ್ರೀ ರವರು 'ಅಮೃತ ಮಹೋತ್ಸವ ಸ್ಮರಣ ಸಂಚಿಕೆ' ಬಿಡುಗಡೆ ಮಾಡಲಿದ್ದಾರೆ. [ಮಂಡ್ಯ 75 ಜಿಲ್ಲಾ ವೈಭವ ಸಾರಲು 'ಅಮೃತ ರಥ']

ಈ ಕಾರ್ಯಕ್ರಮದ ನಂತರ ಖ್ಯಾತ ಚಲನಚಿತ್ರ ನಟನಟಿಯರಿಂದ ತಾರಾ ಮೇಳ ಹಾಗೂ ಖ್ಯಾತ ಸಂಗೀತ ಗಾಯಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಕಾರ್ಯಕ್ರಮದ ಮಾಹಿತಿಗಳನ್ನು ನೀಡಲು ವೆಬ್ ಸೈಟ್ ಆರಂಭಿಸಿದ್ದು www.mandya75.com ನಲ್ಲಿ ವಿವರಗಳನ್ನು ವೀಕ್ಷಿಸಬಹುದಾಗಿದೆ.

ಈ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಎಲ್ಲ ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.

ಡಾ. ಎಂಎಚ್ ಅಂಬರೀಷ್
ವಸತಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು

English summary
The Mandya district administration is all set to celebrate the platinum jubilee of the formation of Mandya district. Mandya District in charge Minister MH Ambareesh has invited one and all to this big event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X