ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ : ಜನಪರ ಜಿಲ್ಲಾಧಿಕಾರಿ ಹಾವೇರಿಯ ವೆಂಕಟೇಶ್

ಹಾವೇರಿ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ನಾವೂ ಕೂಡಾ ನಿಮ್ಮಂತೆ ಮಣ್ಣಿನ ಮಕ್ಕಳೇ ಎಂಬುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಿದ್ದಾರೆ. ಇತರ ಎಲ್ಲ ಅಧಿಕಾರಿಗಳಿಗೂ ಸ್ಫೂರ್ತಿದಾಯಕವಾದ ಈ ವರದಿಯ ವಿವರ ಇಲ್ಲಿದೆ.

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಸರ್ಕಾರದ ಪ್ರತಿನಿಧಿಗಳು ಸರ್ಕಾರದ ಎಲ್ಲಾ ಅಧಿಕಾರಿಗಳು ಜನಸಾಮಾನ್ಯರೊಟ್ಟಿಗೆ ಬೆರೆತು ಅವರ ವಿಶ್ವಾಸ ಗೆದ್ದು ಸರ್ಕಾರದ ಯೋಜನೆಗಳನ್ನು ಯಶಸ್ವಿಯಾಗಿ ಅರ್ಹರಿಗೆ ತಲುಪಿಸುತ್ತಿಲ್ಲ ಎಂಬ ಕೊರಗು ಎಲ್ಲೆಡೆ ಸಾಮಾನ್ಯವಾಗಿ ಕಂಡು ಬರುತ್ತದೆ.

ಆದ್ರೆ ಈ ಭಾವನೆಗಳಿಗೆ ವಿರುದ್ಧವಾಗಿ ಹಾವೇರಿ ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್ ನೇತೃತ್ವದ ಅಧಿಕಾರಿಗಳ ತಂಡ ನಾವೂ ಕೂಡಾ ನಿಮ್ಮಂತೆ ಮಣ್ಣಿನ ಮಕ್ಕಳೇ ಎಂಬುದನ್ನು ಸಾರ್ವಜನಿಕವಾಗಿ ಸಾಬೀತುಪಡಿಸಿದ್ದಾರೆ. [ಮುಂಗಾರು ಸಮಯದಲ್ಲಿ ತೋಟಗಾರಿಕೆ ಬೆಳೆಗಾರರೇ ಹೀಗೆ ಮಾಡಿ]

ಹಾವೇರಿ ಜಿಲ್ಲೆಯ ದೇವಿಹೊಸೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ದೊಡ್ಡಕೆರೆಯಲ್ಲಿ ಹಳ್ಳಿಯ ಜನರೊಟ್ಟಿಗೆ ತಾವೂ ಕೈ ಜೋಡಿಸಿ ಕೆಲಸ ಮಾಡಿ ಎಲ್ಲರ ವಿಶ್ವಾಸ ಗೆದ್ದಿದ್ದಾರೆ. ಇತರ ಎಲ್ಲ ಅಧಿಕಾರಿಗಳಿಗೂ ಸ್ಫೂರ್ತಿದಾಯಕವಾದ ಈ ವರದಿಯ ವಿವರ ಇಲ್ಲಿದೆ.

ಭೂ ಸೇವೆಗೆ ನಿಂತ ಅಧಿಕಾರಿಗಳ ತಂಡ : ದೇವಿಹೊಸೂರ ದೊಡ್ಡ ಕೆರೆಯಲ್ಲಿ ಅಧಿಕಾರಿಗಳ ತಂಡ ಶ್ರಮದಾನ ನಡೆಸಿದೆ. ಬರಗಾಲದಿಂದ ತತ್ತರಿಸಿದ ಜನತೆಗೆ ಉದ್ಯೋಗಾವಕಾಶಗಳ ಅರಿವು, ಸಾಕ್ಷರತೆ ಅಗತ್ಯತೆ, ಆರೋಗ್ಯದ ಮಹತ್ವದ ಜೊತೆಗೆ ಪಾರಂಪರಿಕ ಕೆರೆಗಳ ಪುನಶ್ಚೇತನದ ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡಲು ಯಶಸ್ವಿಯಾಯಿತು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ನೇತೃತ್ವದ ಅಧಿಕಾರಿಗಳ ತಂಡ ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಕೆರೆ ಅಂಗಳದಲ್ಲಿ ಗುರುವಾರ ಶ್ರಮದಾನ ನಡೆಸಿತು.[ಮಾಹಿತಿ ಹಾಗೂ ಚಿತ್ರಕೃಪೆ: ಕರ್ನಾಟಕ ವಾರ್ತೆ]

ಕೆರೆ ಹೂಳೆತ್ತುವ ಕೆಲಸದಲ್ಲಿ ಕೂಲಿಕಾರರೊಂದಿಗೆ

ಕೆರೆ ಹೂಳೆತ್ತುವ ಕೆಲಸದಲ್ಲಿ ಕೂಲಿಕಾರರೊಂದಿಗೆ

ರೋಜಗಾರ್ ದಿವಸ್ ಕಾರ್ಯಕ್ರಮದ ಅಂಗವಾಗಿ ಕೆರೆ ಹೂಳೆತ್ತುವ ಕೆಲಸದಲ್ಲಿ ಕೂಲಿಕಾರರೊಂದಿಗೆ ಜಿಲ್ಲಾಧಿಕಾರಿ ಡಾ.ವೆಂಕಟೇಶ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಅಂಜನಪ್ಪ ಅವರ ನೇತೃತ್ವದಲ್ಲಿ ನೂರಾರು ಪುರುಷ ಹಾಗೂ ಮಹಿಳಾ ಅಧಿಕಾರಿಗಳು ಒಂದು ಗಂಟೆಕಾಲ ಶ್ರಮದಾನ ನಡೆಸಿ ಮಣ್ಣಿನ ಬುಟ್ಟಿಹೊತ್ತು ಟ್ರ್ಯಾಕ್ಟರ್ ತುಂಬಿಸುವುದು, ಗುದ್ದಲಿ ಹಿಡಿದು ಮಣ್ಣು ಅಗಿಯುವ ಕಾಯಕ ನಡೆಸಿದರು.

ಅಧಿಕಾರಿಗಳೊಂದಿಗೆ ಕೂಲಿಕಾರರು ಸಂಭ್ರಮದಿಂದ ಮಣ್ಣು ಅಗೆಯುವ ಕೆಲಸದಲ್ಲಿ ತೊಡಗಿದ್ದು ಕ್ಷಣಕಾಲ ಕೂಲಿಕಾರ, ಅಧಿಕಾರಿ ಎಂಬ ಬೇಧ ಮರೆತು ಎಲ್ಲರೂ ಸಮಾನರು ಎಂಬ ಚಿತ್ರಣ ಮೂಡಿಬಂದಿತು.

ಮಣ್ಣು ತುಂಬಿದ ಟ್ರ್ಯಾಕ್ಟರ್‍ನ್ನು ಚಾಲನೆ

ಮಣ್ಣು ತುಂಬಿದ ಟ್ರ್ಯಾಕ್ಟರ್‍ನ್ನು ಚಾಲನೆ

ಶ್ರಮದಾನಮಾಡುತ್ತಲೇ ಮಣ್ಣು ತುಂಬಿದ ಟ್ರ್ಯಾಕ್ಟರ್‍ನ್ನು ಚಾಲನೆಮಾಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಲ್ಲರ ಗಮನಸೆಳೆದರು. ಶ್ರಮದಾನದ ಜೊತೆಜೊತೆಗೆ ಕೂಲಿಕಾರ ಸಮಸ್ಯೆಗಳನ್ನು ಅರಿಯಲು ಅವರೊಂದಿಗೆ ಸಂವಾದ ನಡೆಸಿದರು. ಸರಿಯಾಗಿ ಕೂಲಿ ಹಣ ತಲುಪುತ್ತಿದೆಯಾ, ಕೆಲಸದ ಸ್ಥಳದಲ್ಲಿ ಕುಡಿಯುವ ನೀರು, ಅಕ್ಷರ ಕಲಿಕೆ, ನೆರಳಿನ ವ್ಯವಸ್ಥೆ ಮಾಡಲಾಗುತ್ತಿದೆಯೇ, ಎಷ್ಟು ದಿನಕ್ಕೆ ನಿಮಗೆ ಪಗಾರ ಬಂದರೆ ಅನುಕೂಲವಾಗುತ್ತದೆ ಎಂದು ಮಾಹಿತಿ ಪಡೆದಿದ್ದಲ್ಲದೆ ಗ್ರಾಮದ ಸಮಸ್ಯೆಗಳನ್ನು ಕೂಲಿಕಾರರಿಂದ ಕೇಳಿ ತಿಳಿದುಕೊಂಡರು.
ತಮ್ಮ ಸಮಸ್ಯೆ ಆಲಿಸಲು ಮುಂದಾದ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲು ಮಹಿಳಾ ಕೂಲಿಕಾರರು ಗಂಡಂದಿರ ಕುಡಿತದ ಹವ್ಯಾಸದಿಂದ ಸಂಸಾರ ಹಾಳಾಗುತ್ತಿದ್ದು, ಇದನ್ನು ತಡೆಯುವಂತೆ ಒಕ್ಕೊರಲಿನಿಂದ ಮನವಿಮಾಡಿಕೊಂಡರು.

ಕೂಲಿ ಹಣ ಪಾವತಿಯಾಗುವಂತೆ ಕ್ರಮ

ಕೂಲಿ ಹಣ ಪಾವತಿಯಾಗುವಂತೆ ಕ್ರಮ

ಏಳರಿಂದ ಹತ್ತು ದಿನದೊಳಗಾಗಿ ಕೂಲಿ ಹಣ ಪಾವತಿಯಾಗುವಂತೆ ಕ್ರಮ ತೆಗೆದುಕೊಳ್ಳಿ ಎಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಜ್ಯೋತಿ ಕಮ್ಮಾರ ಅವರಿಗೆ ಸೂಚನೆ ನೀಡಿದರು. ಗ್ರಾಮದ ನಿರಂತರ ಜ್ಯೋತಿ ಬೆಳಕಿನ ವ್ಯವಸ್ಥೆ ಕುರಿತಂತೆ ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಎರಡು ತಿಂಗಳೊಳಗಾಗಿ ನಿರಂತರ ಜ್ಯೋತಿ ವಿದ್ಯುತ್ ಬರುತ್ತದೆ. ಸಮಸ್ಯೆ ಬಗೆಹರಿಯದಿದ್ದರೆ ನನ್ನ ಗಮನಕ್ಕೆ ತನ್ನಿ. ಆದರೆ ಕೂಲಿಯ ಜೊತೆಗೆ ನಿಮ್ಮ ಊರಿಗೆ ಅನುಕೂಲವಾಗುವ ಕೆರೆ ಹೂಳೆತ್ತುವ ಕಾಮಗಾರಿಗಳನ್ನು, ಅಂತರ್ಜಲ ಹೆಚ್ಚಳ ಮಾಡುವ ಕಾಮಗಾರಿಗಳನ್ನು, ಸಸಿನೆಡುವ ಕಾರ್ಯವನ್ನು ಕಾಳಜಿಯಿಂದ ಮಾಡಿ. ಇದರಿಂದ ಪದೆ ಪದೆ ಬರ ಪರಸ್ಥಿತಿ ಎದುರಿಸುವುದು ತಪ್ಪುತ್ತದೆ ಎಂದು ಸಲಹೆ ನೀಡಿದರು.

ಕೂಲಿಕಾರರಿಗೆ ತರಬೇತಿ ನೀಡಿ

ಕೂಲಿಕಾರರಿಗೆ ತರಬೇತಿ ನೀಡಿ

ಬ್ಯಾಂಕಿನ ವ್ಯವಹಾರ ಕಲಿಯಲು ಅಕ್ಷರ ಕಲಿಯಿರಿ. ಬ್ಯಾಂಕ್ ವ್ಯವಹಾರ ಹಾಗೂ ಎ.ಟಿ.ಎಂ. ಬಳಕೆ ಕುರಿತಂತೆ ಉದ್ಯೋಗಖಾತ್ರ ಕೂಲಿಕಾರರಿಗೆ ತರಬೇತಿ ನೀಡಿ ಎಂದು ಸಾಕ್ಷರತಾ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದರು.
ಉದ್ಯೋಗ ನೀಡಿಕೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಕುರಿತಂತೆ ಕೂಲಿಕಾರರಿಂದ ಮಾಹಿತಿ ಪಡೆದು ನಿಮಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಲಾಗುವುದು. ಉದ್ಯೋಗ ಅರಸಿ ಬೇರೆ ಕಡೆ ಗುಳೆ ಹೋಗುವುದು ಅಗತ್ಯವಿಲ್ಲ. ನೀವು ವಾಸಿಸುವ ಊರಲ್ಲೇ ಕೆಲಸ ನೀಡಲಾಗುವುದು. ಯಾವುದೇ ಸಂದರ್ಭದಲ್ಲಿ ನೀವು ಕೆಲಸ ಬೇಡಿ ಬಂದರೆ ದುಡಿಯಲು ಕೆಲಸ ನೀಡುವುದಾಗಿ ಭರವಸೆ ನೀಡಿದರು.

ನಾವು ಬೇಡಿದಷ್ಟು ಕೆಲಸ ಇಲ್ಲೆ ಸಿಗುತ್ತಿದೆ

ನಾವು ಬೇಡಿದಷ್ಟು ಕೆಲಸ ಇಲ್ಲೆ ಸಿಗುತ್ತಿದೆ

ಉದ್ಯೋಗಖಾತ್ರಿ ಕೂಲಿನಿರತ ಮಹಿಳೆಯರಾದ ಸರೋಜಮ್ಮ ಸುಣಗಾರ, ಬೀಬಿಜಾನ್ ಮಾತನಾಡಿ, ನಾವು ಬಡವರು ಉದ್ಯೋಗಖಾತ್ರಿ ಕೆಲಸ ಸಿಗದಿದ್ದರೆ ದೂರದ ಗೋವಾ, ಮುಂಬೈ, ಬೆಂಗಳೂರಿಗೆ ಗುಳೆಹೋಗಿ ದುಡಿಯಬೇಕಾಗಿತ್ತು. ಈಗ ನಾವು ಬೇಡಿದಷ್ಟು ಕೆಲಸ ಇಲ್ಲೆ ಸಿಗುತ್ತಿದೆ ಬೆಳಿಗ್ಗೆ 5 ರಿಂದ 11 ಗಂಟೆವರೆಗೆ ಕೆಲಸ ಮಾಡಿದರೆ ದಿನವೊಂದಕ್ಕೆ ರೂ.350 ರಿಂದ ರೂ.400 ದುಡಿಯುತ್ತೇವೆ. ಖಾಸಗಿ ಕೆಲಸಕ್ಕೆ ಹೋಗಿದ್ದರೆ ದಿನಕ್ಕೆ ರೂ.150 ದೊರಕುತ್ತಿತ್ತು. ಈಗ ಇಲ್ಲಿಯೇ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಆದರೆ ಏಳು ದಿನಕ್ಕೆ ಕೂಲಿ ಹಣ ಬರಬೇಕು, ಬ್ಯಾಂಕಿನವರು ನಮಗೆ ಕಿಮ್ಮತ್ತು ನೀಡುವುದಿಲ್ಲ. ಬ್ಯಾಂಕಿನವರು ನಮ್ಮೊಂದಿಗೆ ಸಹನೆಯಿಂದ ನಡೆದುಕೊಳ್ಳುವಂತೆ ಆದರೆ ನಮಗೆ ಅನುಕೂಲವೆಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

English summary
Meet Haveri DC Venkatesh M V who successfully implemented Government Schemes and worked with public in upliftment of lakes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X