ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ- ಆಸ್ತಿ ಅಪ್ ಮೂಲಕ ಇ ಖಾತಾ ಪಡೆಯಿರಿ: ರೋಹಿಣಿ

By Mahesh
|
Google Oneindia Kannada News

ಮಂಡ್ಯ, ಜುಲೈ 24: ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಅವರು ಗ್ರಾಮೀಣ ಭಾಗದಲ್ಲಿ ಆಸ್ತಿ ಪತ್ರ ಪಡೆಯಲು ಈಗ ಸುಲಭ ಹಾಗೂ ಸರಳ ವಿಧಾನವನ್ನು ಪರಿಚಯಿಸಿದ್ದಾರೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಆಸ್ತಿ ಪಾಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಳ್ಳಬಹುದಾಗಿದೆ.

ಎಂ ಆಸ್ತಿ ಎಂಬ ಹೆಸರಿನ ಮೊಬೈಲ್ ಅಪ್ಲಿಕೇಷನ್ ಸದ್ಯಕ್ಕೆ ಆಂಡ್ರಾಯ್ಡ್ ಮೊಬೈಲ್ ಫೋನಿನಲ್ಲಿ ಲಭ್ಯವಿದ್ದು, ಸುಲಭವಾಗಿ ಆಸ್ತಿ ಪಾಸ್ತಿ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗಳಿಂದ ಪಡೆದುಕೊಳ್ಳಬಹುದಾಗಿದೆ ಎಂದು ರೋಹಿಣಿ ಹೇಳಿದ್ದಾರೆ. [ಮಂಡ್ಯದ ಮಾಜಿ ಸಂಸದೆ ರಮ್ಯಾ , ಶಾಸಕಿಯಾಗೋಲ್ಲ ಬಿಡಿ!]

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಅಪ್ಲಿಕೇಷನ್ ಇದಾಗಿದೆ. ಈ ಎಂ -ಆಸ್ತಿ ಅಪ್ಲಿಕೇಷನ್ ಬಳಸಿಕೊಂಡು ಸುಲಭವಾಗಿ ಇ ಖಾತಾವನ್ನು ಪಡೆದುಕೊಳ್ಳಬಹುದು ಎಂದು ರೋಹಿಣಿ ವಿವರಿಸಿದರು. [ಮಂಡ್ಯ ರಸ್ತೆ ಅಭಿವೃದ್ಧಿಗೆ 192 ಕೋಟಿ ಕೊಟ್ಟ ಸಿಎಂ]

ಮಂಡ್ಯ ಜಿಲ್ಲೆಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಹೊಸ ಯಶಸ್ಸು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಸಿಇಒ ರೋಹಿಣಿ ಅವರು ಮಾನ್ಯತೆ ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಎಂ-ಆಸ್ತಿ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್ ಇಲ್ಲಿದೆ

 ಯಾವ ಯಾವ ದಾಖಲೆಗಳನ್ನು ಪಡೆಯಬಹುದು

ಯಾವ ಯಾವ ದಾಖಲೆಗಳನ್ನು ಪಡೆಯಬಹುದು

ಭೂ ಮಾಲೀಕತ್ವದ ಅರ್ಜಿ ನಮೂನೆ 9, ಅಸ್ತಿ ತೆರಿಗೆ ದಾಖಲೆಯುಳ್ಳ ಅರ್ಜಿ 11, ಇ ಖಾತಾ ಪತ್ರಗಳನ್ನು ಅರ್ಜಿ ಸಲ್ಲಿಸಿದ 15 ದಿನದೊಳಗೆ ವಿವರಗಳು ಲಭ್ಯವಾಗಲಿದೆ.

ಹೇಗೆ ದಾಖಲೆ ಪಡೆಯುವುದು?

ಹೇಗೆ ದಾಖಲೆ ಪಡೆಯುವುದು?

ಆಂಡ್ರಾಯ್ಡ್ ಮೊಬೈಲಿನಲ್ಲಿ ಗೂಗಲ್ ಪ್ಲೇ ಸ್ಟೋರಿಗೆ ಹೋಗಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ನಂತರ ನಿಮ್ಮ ಜಿಲ್ಲೆ, ತಾಲೂಕು, ಜಿಲ್ಲಾ ಪಂಚಾಯತ್, ಗ್ರಾಮ, ಸರ್ವೇ ನಂಬರ್, ಎಕರೆ, ಗುಂಟಾ ವಿವರಗಳನ್ನು ಸಲ್ಲಿಸಬೇಕು. ಸದ್ಯಕ್ಕೆ ಅರ್ಜಿ 11, ಅರ್ಜಿ 9 ದಾಖಲೆಗಳನ್ನು ಪಡೆಯಬಹುದು.

‘ಕೃಷಿಯಿಂದ ಖುಷಿ - ರೈತರಿಗೆ ರೈತರೇ ಮಾದರಿ’ ಸಂವಾದ

‘ಕೃಷಿಯಿಂದ ಖುಷಿ - ರೈತರಿಗೆ ರೈತರೇ ಮಾದರಿ’ ಸಂವಾದ

ಕೃಷಿ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳಲ್ಲಿ ಉತ್ತಮ ಹವ್ಯಾಸಗಳುಳ್ಳ ರೈತರು ಹಾಗೂ ಇತರ ರೈತರ ನಡುವೆ ವಿಚಾರ ವಿನಿಮಯ ಆಗುವಂತೆ 'ಕೃಷಿಯಿಂದ ಖುಷಿ ಕಂಡವರು-ರೈತರಿಗೆ ರೈತರೇ ಮಾದರಿ' ಎಂಬ ಸಂವಾದ ಕಾರ್ಯಕ್ರಮವನ್ನು ಜುಲೈ 27 ರಂದು ಮಂಡ್ಯದ ರೈತ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಂವಾದ

ರೈತರಿಗೆ ಆತ್ಮಸ್ಥೈರ್ಯ ತುಂಬಲು ಸಂವಾದ

ರೈತರು ಏಕ ರೀತಿಯ ಬೆಳೆಗಳ ಮೇಲೆ ಹೆಚ್ಚು ಹೆಚ್ಚು ಅವಲಂಬಿತರಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಹವಾಮಾನ ಹಾಗೂ ಮಾರುಕಟ್ಟೆ ಏರುಪೇರುಗಳಿಂದ ಸಂಕಷ್ಟಗಳಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಅವರಲ್ಲಿ ಆತ್ಮಸ್ಥೈರ್ಯ ತುಂಬಲು ಹಾಗೂ ಕೃಷಿಯನ್ನು ಸುಸ್ಥಿತರಗೊಳಿಸಲು ಇರುವ ಅವಕಾಶಗಳನ್ನು, ಅಂತಹ ವಿಧಾನಗಳನ್ನು ಅಳವಡಿಸಿಕೊಂಡ ರೈತರ ಬಗ್ಗೆ ಇತರರಿಗೆ ಮನವರಿಕೆ ಮಾಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಅವರು ಹೇಳಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು

ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು

ಸಭೆಯಲ್ಲಿ ನಬಾರ್ಡ್ ನ ಸಹಾಯಕ ಮಹಾ ಪ್ರಬಂಧಕರಾದ ಬಿಂದುಮಾಧವ ವಡವಿ, ಮಂಡ್ಯ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್.ರವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಮಲಿಂಗೇಗೌಡ, ಕೃಷಿ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್, ಪಶು ಸಂಗೋಪನೆ ಉಪ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ, ತೋಟಗಾರಿಕೆ ಉಪ ನಿರ್ದೇಶಕ ಕೆ. ರುದ್ರೇಶ್, ವಾರ್ತಾಧಿಕಾರಿ ಆರ್. ರಾಜು, ಕೃಷಿ ಇಲಾಖೆ ಸಲಹೆಗಾರ ರವೀಂದ್ರ, ವಿಕಸನ ಸಂಸ್ಥೆ ನಿರ್ದೇಶಕ ಮಹೇಶ್ಚಂದ್ರಗುರು ಮತ್ತಿತರರು ಉಪಸ್ಥಿತರಿದ್ದರು.

English summary
Mandya ZP CEO Rohini Sindhuri launches M-Aasthi app to issue land records and to put and end to delay in providing land records to rural areas. M aasthi is an Android-based mobile application in the district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X