ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಯನ ಪ್ರವಾಸ ಹೊರಟ ಮಂಡ್ಯ ನಗರ ಸಭೆ ಸದಸ್ಯರು

|
Google Oneindia Kannada News

ಮಂಡ್ಯ, ಆಗಸ್ಟ್ 18 : ಬರಗಾಲ ಮತ್ತು ರೈತರ ಸರಣಿ ಆತ್ಮಹತ್ಯೆ ನಡುವೆಯೇ ಮಂಡ್ಯ ನಗರ ಸಭೆಯ ಸದಸ್ಯರು ಅಧ್ಯಯನ ಪ್ರವಾಸಕ್ಕಾಗಿ ಗುಜರಾತ್‌ಗೆ ಭೇಟಿ ನೀಡಲಿದ್ದಾರೆ. ಸುಮಾರು 12 ಲಕ್ಷ ರೂ.ವೆಚ್ಚದಲ್ಲಿ ನಾಲ್ಕು ದಿನದ ಪ್ರವಾವನ್ನು ಕೈಗೊಳ್ಳಲಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ 40ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇವುಗಳ ನಡುವೆಯೇ ನಗರಸಭೆ ಸದಸ್ಯರು ಅಧ್ಯಯನ ಪ್ರವಾಸ ಹೊರಟಿದ್ದಾರೆ. [ಕೈಕೊಟ್ಟ ಮುಂಗಾರು, KRSನಲ್ಲಿ ಎಷ್ಟು ನೀರಿದೆ?]

mandya

ಕೆಲವು ದಿನಗಳ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಯಾವುದೇ ಒಬ್ಬ ಸದಸ್ಯರು ಪ್ರವಾಸ ಬೇಡ ಎಂದು ವಿರೋಧಿಸಿಲ್ಲ. ಸಾಮಾನ್ಯ ಸಭೆಯ ನಿರ್ಣಯಕ್ಕೆ ಸರ್ಕಾರ ಕೂಡ ಒಪ್ಪಿಗೆ ನೀಡಿದ್ದು, 12. 5 ಲಕ್ಷ ರೂ. ಖರ್ಚು ಮಾಡಿ ಪ್ರವಾಸ ಹೋಗಲು ಒಪ್ಪಿಗೆ ನೀಡಿದೆ. [ಬರಪೀಡಿತ ತಾಲೂಕುಗಳ ಪಟ್ಟಿ]

ಸಮಯವನ್ನು ಉಳಿತಾಯ ಮಾಡಲು ವಿಮಾನದ ಮೂಲಕ ಪ್ರಯಾಣಿಸುವಂತೆ ಟ್ರಾವೆಲ್‌ ಏಜೆಂಟ್‌ಗಳು ಸದಸ್ಯರಿಗೆ ಸಲಹೆ ನೀಡಿದ್ದಾರೆ. ಒಟ್ಟು ನಾಲ್ಕು ದಿನಗಳ ಪ್ರವಾಸದಲ್ಲಿ ಸದಸ್ಯರು ಎರಡು ದಿನ ಅಧ್ಯಯನ ನಡೆಸಲಿದ್ದು, ಉಳಿದ ಎರಡು ದಿನ ಗುಜರಾತ್ ಸುತ್ತಮುತ್ತಲಿನ ಸ್ಥಳಗಳನ್ನು ವೀಕ್ಷಣೆ ಮಾಡಲಿದ್ದಾರೆ.

ಆ.22ರಂದು ಮಂಡ್ಯ ಬಂದ್‌ಗೆ ಕರೆ : ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಜನಪರ ಕ್ರಿಯಾ ವೇದಿಕೆ ಆ. 22ರಂದು ಮಂಡ್ಯ ನಗರ ಬಂದ್‌ಗೆ ಕರೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ವೇದಿಕೆಯ ಎಂ.ಬಿ. ನಾಗಣ್ಣಗೌಡ ಅವರು, ಮಂಡ್ಯ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ನೆರವಿಗೆ ಬರುವಂತಹ ಪರಿಣಾಮಕಾರಿ ಕ್ರಮಗಳನ್ನು ಸರ್ಕಾರಗಳು ಕೈಗೊಂಡಿಲ್ಲ. ಆದ್ದರಿಂದ ಬಂದ್ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

English summary
Mandya : Though drought has cast a shadow over the district. But, Mandya City Municipal Council (CMC) Councillors getting ready for a study tour to Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X