ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ?

|
Google Oneindia Kannada News

ಮಂಡ್ಯ, ಜುಲೈ 15 : ಮಂಡ್ಯ ಕಾಂಗ್ರೆಸ್‌ನಲ್ಲಿ ಮತ್ತೊಮ್ಮೆ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ನಡುವಿನ ಮುನಿಸು ಮಂಡ್ಯಕ್ಕೆ ತಲುಪಿದ್ದು, ಅಂಬರೀಶ್ ವಿರುದ್ಧ ಜಿಲ್ಲಾ ಕಾಂಗ್ರೆಸಿಗರು ತಿರುಗಿಬಿದ್ದಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ನೇಮಕ ಮಾಡಬೇಕು ಎಂದು ಅಂಬರೀಶ್ ಪ್ರಯತ್ನ ನಡೆಸಿದ್ದು, ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಮುನಿಸಿಕೊಂಡಿದ್ದಾರೆ. ಮಂಗಳವಾರ ನಡೆದ ಸಂಧಾನಸಭೆಯೂ ಮುರಿದುಬಿದ್ದಿದೆ. [ಅಂಬರೀಶ್ ಸಾಧನೆ ಶೂನ್ಯ ಅಂದ್ರು ಸಿಎಂ]

ambareesh

ಮನವೊಲಿಕೆ ಯತ್ನ ನಡೆಸುತ್ತಿರುವ ಸಹಕಾರ ಸಚಿವ ಮಹದೇವಪ್ರಸಾದ್ ಅವರು ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ನೇಮಕಗೊಂಡಿರುವ ಜೋಗಿಗೌಡ ಅವರಿಗೆ ರಾಜೀನಾಮೆ ನೀಡುವಂತೆ ಸೂಚನೆ ಕೊಟ್ಟಿದ್ದಾರೆ. ಇದು ಜಿಲ್ಲಾ ಕಾಂಗ್ರೆಸಿಗರ ಅಸಮಾಧಾನಕ್ಕೆ ಕಾರಣವಾಗಿದ್ದು, ಅಂಬರೀಶ್ ವಿರುದ್ಧ ಮುನಿಸಿಕೊಂಡಿದ್ದಾರೆ. [ಇದು ಕಾಂಗ್ರೆಸ್ ಪಕ್ಷಕ್ಕೆ ಪಾಠವಾಗಬೇಕು : ಅಂಬರೀಶ್]

ಜೋಗಿಗೌಡ ಅವರು ರಾಜೀನಾಮೆ ನೀಡಿದರೆ ಜಿಲ್ಲಾ ಕಾಂಗ್ರೆಸ್‌ನ ಎಲ್ಲಾ ಪದಾಧಿಕಾರಿಗಳು ರಾಜೀನಾಮೆ ನೀಡುತ್ತೇವೆ ಎಂದು ಸದಸ್ಯರು ಹೇಳುತ್ತಿದ್ದಾರೆ. ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರು ರಾಜೀನಾಮೆ ನೀಡುವಂತೆ ಜೋಗಿಗೌಡರ ಮನವೊಲಿಸಲು ಮುಂದಾಗಿದ್ದಾರೆ.

ಜೋಗಿಗೌಡರು ಹೇಳುವುದೇನು? : ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ ಅವರು ರಾಜೀನಾಮೆ ನೀಡುವ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅಂಬರೀಶ್ ಮನೆಯಲ್ಲಿಯೇ ನಾನು ನಿರ್ದೇಶಕನಾಗುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರು ಹೇಳಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಓದುಗರ ಪ್ರತಿಕ್ರಿಯೆ : 'ನಿಗಮ ಮಂಡಳಿ ಸ್ಥಾನಗಳಿಗಾಗಿ ಕಿತ್ತಾಟ ಇಲ್ಲದಿದ್ದರೆ, ಅವನನ್ನು ಇವನು ಮುಗಿಸಲು (ರಾಜಕೀಯವಾಗಿ) ಇವನನ್ನು ಅವನು ಮುಗಿಸಲು ಷಡ್ಯಂತ್ರ ನಡೆಸದಿದ್ದರೆ, ಪಕ್ಷದಲ್ಲಿಯೇ ಆಂತರಿಕವಾಗಿ ಭಿನ್ನಮತ ಭುಗಿಲೇಳದಿದ್ದರೆ ಅದೆಂಥ ರಾಜಕೀಯ? ನಡೆಯಲಿ ನಡೆಯಲಿ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

English summary
Mandya Congress leaders unhappy over style of functioning district in charge minister M.H.Ambareesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X