ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ.1ರಿಂದ ಆನ್ ಲೈನ್ ಮಾರುಕಟ್ಟೆಯಲ್ಲಿ ಮಂಡ್ಯದ ಸಿಹಿ ಬೆಲ್ಲ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಂಡ್ಯ,ಮಾರ್ಚ್,30: ಸಕ್ಕರೆ ನಾಡು ಮಂಡ್ಯದ ಸಿಹಿಬೆಲ್ಲ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಾಕಷ್ಟು ಸ್ವಾದಿಷ್ಟವಾದ ಮಂಡ್ಯದ ಬೆಲ್ಲವನ್ನು ಜನರು ಇಂದಿಗೂ ಮುಗಿಬಿದ್ದು ಕೊಳ್ಳುತ್ತಾರೆ ಎಂದರಿತ ಜಿಲ್ಲಾಡಳಿತ ಮೇ.1ರಿಂದ ಆನ್‍ ಲೈನ್ ನಲ್ಲೂ ಮಾರಾಟ ಮಾಡಲು ನಿರ್ಧರಿಸಿದೆ.

ಕಾಳಸಂತೆಯಲ್ಲಿ ಮಾರಾಟ ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಲು ನಿರ್ಧರಿಸಿದ ಜಿಲ್ಲಾಡಳಿತ ಆನ್ ಲೈನಿನಲ್ಲಿ ಮಂಡ್ಯದ ಬೆಲ್ಲವನ್ನು ಮಾರಾಟ ಮಾಡಲು ಎಪಿಎಂಸಿ (Agricultural Produce Market Committee)ಗೆ ಸೂಚಿಸಿದೆ.[ಬೇಸಿಗೆಗೆ ಅಮೆಜಾನ್ ಕೊಡುಗೆಗಳ ಸುರಿಮಳೆ]

Mandya APMC restart online trading of jaggery from May 1st

ರಾಜ್ಯ ಸರ್ಕಾರವು ಬೆಲ್ಲದ 'ಆನ್‍ ಲೈನ್' ಮಾರಾಟ ವ್ಯವಸ್ಥೆಯನ್ನು 2014ರಲ್ಲಿ ಜಾರಿಗೆ ತಂದಿತ್ತು. ಆದರೆ, ಪಾರದರ್ಶಕತೆ ಹಾಗೂ ನೇರ ಖರೀದಿಯಲ್ಲಿ ಮುಕ್ತ ಅವಕಾಶ ಇರುವುದರಿಂದ ಮಾರುಕಟ್ಟೆಯಲ್ಲಿ ಮಾರಾಟ ಅಸಾಧ್ಯ ಎನ್ನುವ ಭೀತಿಯಿಂದ ಕೆಲವು ವರ್ತಕರು ಷಡ್ಯಂತ್ರ ನಡೆಸಿ ಪ್ರತಿಭಟನೆ ಮಾಡಿ ತಾತ್ಕಾಲಿಕ ನಿಲುಗಡೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಮೂಲದ ಪ್ರಕಾರ ಮಂಡ್ಯ ಜಿಲ್ಲೆಯಲ್ಲಿ ನೋಂದಾಯಿತ 530 ಆಲೆಮನೆಗಳಿದ್ದು, ಈ ಅಲೆಮನೆಗಳಿಂದ ಶೇ. 80ರಷ್ಟು ಬೆಲ್ಲ ಉತ್ಪಾದನೆಯಾಗುತ್ತಿದೆ. ಪ್ರತಿನಿತ್ಯ ಎಪಿಎಂಸಿಗೆ ಸುಮಾರು 15 ಲೋಡ್ ನಷ್ಟು ಬೆಲ್ಲ ಬರುತ್ತಿದೆ. ರೈತರು ಅಲೆಮನೆಯಲ್ಲಿ ಬಕೆಟ್, ಅಚ್ಚು ಮತ್ತು ಕುರಿಕಾಲ ಅಚ್ಚು ರೂಪದಲ್ಲಿ ಬೆಲ್ಲವನ್ನು ಉತ್ಪಾದಿಸುತ್ತಿದ್ದಾರೆ.[ಆನ್ ಲೈನ್ ಖರೀದಿಗೆ ಇಲ್ಲಿವೆ ಟಾಪ್ 10 ಆಫರ್ ಗಳು]

ಮಂಡ್ಯದ ಬೆಲ್ಲಕ್ಕೆ ಎಲ್ಲೆಲ್ಲಿದೆ ಬೇಡಿಕೆ?

ಮಂಡ್ಯದಿಂದ ಉತ್ಪಾದನೆಯಾಗುವ ಬೆಲ್ಲಕ್ಕೆ ರಾಜಸ್ತಾನ, ಗುಜರಾತ್ ಹಾಗೂ ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಭಾರೀ ಬೇಡಿಕೆಯಿದೆ. ಮಂಡ್ಯ ಬೆಲ್ಲಕ್ಕೆ ತನ್ನದೇ ಆದ ಸೊಗಡು ಮತ್ತು ಸಾಂಪ್ರದಾಯಿಕತೆ ಇರುವುದರಿಂದ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರಿದೆ. ಹೀಗಾಗಿ ಕೆಲವು ವರ್ತಕರು, ಮಧ್ಯವರ್ತಿಗಳು ಕಡಿಮೆ ಬೆಲೆಗೆ ರೈತರಿಂದ ಬೆಲ್ಲ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಜನರಿಗೆ ವಂಚಿಸುತ್ತಿದ್ದರು.[ವಧುವರರಿಂದ ಪೂಜಾ ಸಾಮಗ್ರಿವರೆಗೆ ಎಲ್ಲವೂ ಬೆರಳ ತುದಿಯಲ್ಲಿ!]

ಆನ್ ಲೈನ್ ಮಾರಾಟದಿಂದ ಯಾರಿಗೆ ಲಾಭ?

ಆನ್ ಲೈನಿನಲ್ಲಿ ಬೆಲ್ಲ ಮಾರಾಟ ಜಾರಿಗೆ ಬಂದರೆ ಮಧ್ಯವರ್ತಿಗಳಿಗೆ ತೊಂದರೆಯಾಗಲಿದ್ದು, ವರ್ತಕರಿಗೆ ಅನುಕೂಲವಾಗಲಿದೆ. ಆನ್‍ ಲೈನ್ ಪದ್ಧತಿ ಜಾರಿಗೆ ಬಂದರೆ ಬೆಲ್ಲ ಮುಕ್ತ ಖರೀದಿಗೆ ಅವಕಾಶ ಇರುವುದರಿಂದ ಉತ್ಪಾದಕರಿಗೆ ಅತ್ಯುತ್ತಮ ದರ ಮತ್ತು ಅವರ ಖಾತೆಗೆ ನೇರ ಹಣ ವರ್ಗಾವಣೆಯಾಗಲಿದೆ.[ಚೆಸ್ಕಾಂ ನಿರ್ಲಕ್ಷ್ಯದಿಂದ ಕಬ್ಬು ನಾಶ, ರೈತನಿಗೆ ತೀರದ ನೋವು]

English summary
Agricultural Produce Market Committee (APMC) plans to reintroduce 'online-trading in Mandya from May 01st. Jaggery produce goes to Gujarat, Rajasthan, Madhya Pradesh, Maharashtra among others.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X