ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಬದಲು ಮರದ ತುಂಡು ಮನೆಗೆ ಬಂತು!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಉಡುಪಿ, ಏ. 27 : ಮೊಬೈಲ್ ತೆಗೆದುಕೊಳ್ಳಲು ಬಯಸಿದ್ದ ಪವನ್ ಎಂಬುವವರು ಫ್ಲಿಪ್ ಕಾರ್ಟ್ ಮೂಲಕ ಬುಕ್ ಮಾಡಿದ್ದರು. ಆದರೆ, ಮನೆಗೆ ಬಂದ ಬಾಕ್ಸ್‌ನಲ್ಲಿ ಮೊಬೈಲ್ ಬದಲಿಗೆ ಮರದ ತುಂಡಿತ್ತು. ಆದರೆ, ಇದು ಫ್ಲಿಪ್ ಕಾರ್ಟ್ ತಪ್ಪಲ್ಲ, ಕೋರಿಯರ್‌ನವರ ಕೈವಾಡ.

ಉಡುಪಿಯ ಉದ್ಯಾವರದ ಪವನ್ ಅವರು ಕೆಲವು ದಿನಗಳ ಹಿಂದೆ 5,000 ರೂ. ಬೆಲೆಯ ಮೊಬೈಲ್‌ಗಾಗಿ ಆನ್‌ಲೈನ್ ಮೂಲಕ ಬುಕ್ ಮಾಡಿದ್ದರು. ಶನಿವಾರ ಅವರಿಗೆ ಬಂದ ಕೋರಿಯರ್‌ನಲ್ಲಿ ಮರದ ತುಂಡುಗಳಿದ್ದವು. ಕೋರಿಯರ್‌ನವರನ್ನು ತರಾಟೆಗೆ ತೆಗೆದುಕೊಂಡಾಗ ಇದು ಅವರ ಕೈವಾಡ ಎಂದು ತಿಳಿದಿದೆ.

mobile

ಈ ಬಗ್ಗೆ ಕೋರಿಯರ್‌ ಸಿಬ್ಬಂದಿ ಜೊತೆ ಮಾತನಾಡಿರುವ ಪವನ್ ನಷ್ಟ ತುಂಬಿಕೊಡುವಂತೆ ಆಗ್ರಹಿಸಿದ್ದಾರೆ. ಇಲ್ಲವಾದರೆ ಪೊಲೀಸರಿಗೆ ದೂರು ಕೊಡುವುದಾಗಿ ಹೇಳಿದ್ದಾರೆ. ಕೊನೆಗೆ ಸತ್ಯ ಒಪ್ಪಿಕೊಂಡ ಕೋರಿಯರ್ ಸಿಬ್ಬಂದಿಗಳು ಹಣವನ್ನು ವಾಪಸ್ ನೀಡುತ್ತೇವೆ ದೂರು ಕೊಡಬೇಡಿ ಎಂದು ವಿವಾದವನ್ನು ಬಗೆಹರಿಸಿದ್ದಾರೆ. [ಫ್ಲಿಪ್ ಕಾರ್ಟಿಗೆ ದಂಡ! ಸುಳ್ಳೇ ಸುಳ್ಳು]

ಪವನ್ ಕೆಲಸ ಮಾಡುತ್ತಿದ್ದರು : ಅಚ್ಚರಿಯ ವಿಷಯವೆಂದರೆ ಪವನ್ ಇದೇ ಕೋರಿಯರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು. ಅದೇ ಕೋರಿಯರ್‌ನವರು ಪವನ್‌ಗೆ ಮೊಬೈಲ್ ಬದಲು ಮರದ ತುಂಡು ಕಳಿಸಿದ್ದಾರೆ.

Udupi

ಉಡುಪಿ ಮತ್ತು ಮಂಗಳೂರಿನಲ್ಲಿ ಆನ್‌ಲೈನ್ ಮೂಲಕ ಬರುವ ಸರಕನ್ನು ಬದಲಾವಣೆ ಮಾಡಿಕೊಡುವ ವ್ಯವಸ್ಥಿತ ಜಾಲ ನಡೆಯುತ್ತಿದೆ ಎಂದು ಪವನ್ ಶಂಕೆ ವ್ಯಕ್ತಪಡಿಸಿದ್ದು, ಈ ಜಾಲವನ್ನು ಪತ್ತೆ ಹಚ್ಚಬೇಕು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

English summary
Udupi : Pavan from Udyavar ordered for smart phone worth Rs 5,000 from Flipkart. On Saturday, he was happy to have received a courier parcel at his door. After paying money he found only a wooden block cut.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X