ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರವಣಬೆಳಗೊಳದಲ್ಲಿ 2018ಕ್ಕೆ ಮಹಾಮಸ್ತಕಾಭಿಷೇಕ

|
Google Oneindia Kannada News

ಹಾಸನ, ಮೇ 25 : ಶ್ರವಣಬೆಳಗೊಳದಲ್ಲಿ ನಡೆಯಲಿರುವ 84ನೇ ಮಹಾಮಸ್ತಕಾಭಿಷೇಕದ ದಿನಾಂಕವನ್ನು ಪ್ರಕಟಿಸಲಾಗಿದೆ. 2018ರ ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಮಹಾಮಸ್ತಕಾಭಿಷೇಕವನ್ನು ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ.

ಶ್ರವಣಬೆಳಗೊಳದ ಆಡಳಿತ ಮಂಡಳಿಯ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಬಾಹುಬಲಿಗೆ 2018ರ ಫೆಬ್ರವರಿ ಮೊದಲ ವಾರದಲ್ಲಿ ಮಹಾ ಮಸ್ತಕಾಭಿಷೇಕ ನಡೆಯಲಿದೆ ಎಂದು ತಿಳಿಸಿದ್ದಾರೆ. [ಹಾಸನ ಸಾಹಿತ್ಯ ಸಮ್ಮೇಳನದ ಚಿತ್ರಗಳು]

Shravanabelagola

ಈ ಮಹೋತ್ಸವದಲ್ಲಿ ದೇಶ, ವಿದೇಶಗಳ ಜನರು ಪಾಲ್ಗೊಳ್ಳುವುದರಿಂದ ಅವರಿಗೂ ಸಮಯ ಹೊಂದಿಸಿಕೊಳ್ಳಲು ಅನುಕೂಲವಾಗುವಂತೆ ಬೇಗ ಮಸ್ತಕಾಭಿಷೇಕದ ಸಮಯ ನಿಗದಿಪಡಿಸಲಾಗಿದೆ ಎಂದು ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಹೇಳಿದರು. [ಕಾರ್ಕಳ : ಮಹಾ ಮಸ್ತಕಾಭಿಷೇಕದಲ್ಲಿ ಕಂಗೊಳಿಸಿದ ಬಾಹುಬಲಿ]

ಗಂಗ ಸಾಮ್ರಾಜ್ಯದ ಸೇನಾಧಿಪತಿ ಚಾವುಂಡರಾಯ ಕ್ರಿ.ಶ. 981ರಲ್ಲಿ 58.8 ಅಡಿ ಎತ್ತರದ ಬಾಹುಬಲಿ ಮೂರ್ತಿಯನ್ನು ಸ್ಥಾಪಿಸಿದ್ದ. ಮೂರ್ತಿ ಸ್ಥಾಪನೆಗೊಂಡ ಬಳಿಕ ನಡೆಯಲಿರುವ 87ನೇ ಮಹಾಮಸ್ತಕಾಭಿಷೇಕ ಇದಾಗಿದೆ. [ಶ್ರವಣಬೆಳಗೊಳದ ಬಗ್ಗೆ ಓದಿ]

ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಜೈನ ಧರ್ಮದ ಕಾಶಿ ಶ್ರವಣಬೆಳಗೊಳ ಮಸ್ತಕಾಭಿಷೇಕದ ಸಂದರ್ಭದಲ್ಲಿ ವಿಶ್ವದ ಗಮನ ಸೆಳೆಯುತ್ತದೆ. ಈ ಹಿಂದೆ 2006ರಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು.

ಅಕ್ಷರ ಜಾತ್ರೆ ನಡೆದಿತ್ತು : 2015ರ ಫೆಬ್ರವರಿಯಲ್ಲಿ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. 'ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ ಆಗಬೇಕು' ಎಂಬ ಒಂದೇ ನಿರ್ಣಯವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಗಿತ್ತು. 82ನೇ ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರು ನಗರದಲ್ಲಿ ನಡೆಯಲಿದೆ.

English summary
The Mahamastakabhisheka of Gomateshwara at Shravanabelagola, Hassan district will be held on 2018 February said, Charukeerthi Bhattaraka Swamiji of Srikshetra Shravanabelagola.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X