ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ : ರಾಜಗೋಪುರ ಕುಂಭಾಭಿಷೇಕಕ್ಕೆ ಸಜ್ಜು

By Mahesh
|
Google Oneindia Kannada News

ಶೃಂಗೇರಿ, ಜೂ.2: ಶ್ರೀಶಾರದಾ ಪೀಠದಲ್ಲಿ ಸುಮಾರು 16 ಕೋಟಿ ರು ವೆಚ್ಚದಲ್ಲಿ ನಿರ್ಮಾಣಗೊಂಡಿರುವ 127 ಅಡಿ ಎತ್ತರದ ರಾಜಗೋಪುರ ಜೂ.8ರಂದು ಲೋಕಾರ್ಪಣೆಗೊಳ್ಳಲಿದೆ. ಭಾರತೀತೀರ್ಥ ಸ್ವಾಮೀಜಿಗಳು ರಾಜಗೋಪುರದಕ್ಕೆ ಕುಂಭಾಭಿಷೇಕ ಮಾಡಲಿದ್ದಾರೆ. ಜೂ.1 ರಿಂದ ಜೂ.13ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದೆ.

ಜೂ.8ರಂದು ಮಹಾಕುಂಭಾಭಿಷೇಕದ ಜತೆಗೆ ತೋರಣ ಗಣಪತಿ ದೇಗುಲದ ಪ್ರಾಣ ಪ್ರತಿಷ್ಠಾಪನೆ ಕಾರ್ಯವೂ ನೆರವೇರಲಿದೆ. ಎರಡು ವಾರಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀಮಠದ ಆಡಳಿತಾಧಿಕಾರಿ ವಿ.ಆರ್ ಗೌರಿ ಶಂಕರ್ ಹೇಳಿದ್ದಾರೆ.

2008ರ ಫೆಬ್ರವರಿ ತಿಂಗಳಿನಲ್ಲಿ ಈ ರಾಜಗೋಪುರದ ನಿರ್ಮಾಣ ಕಾರ್ಯ ಆರಂಭಗೊಂಡಿತ್ತು. ದ್ರಾವಿಡ ಚೆಟ್ಟಿನಾಡು ಶೈಲಿಯ ಗೋಪುರಕ್ಕೆ 48 ಅಡಿ ತಳಪಾಯವಿದೆ. ಅಂದು ದಕ್ಷಿಣಾಮ್ನಯ ಶ್ರೀಶಾರದಾ ಪೀಠ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು. ರಾಜಗೋಪುರದ ಚಿತ್ರಗಳು, ಧಾರ್ಮಿಕ ವಿಧಿ ವಿಧಾನದ ವಿವರಗಳು ಮುಂದಿವೆ [ಚಿತ್ರಗಳು: ಶ್ರೀರಾಮ, ಕೊಡೂರು, ಶೃಂಗೇರಿ ಹಾಗೂ ಶೃಂಗೇರಿ.ನೆಟ್]

ರಾಜಗೋಪುರ ನಿರ್ಮಾಣ ಹಂತಗಳ ವಿವರ

ರಾಜಗೋಪುರ ನಿರ್ಮಾಣ ಹಂತಗಳ ವಿವರ

* ಫೆಬ್ರವರಿ 8, 2008 : ದಕ್ಷಿಣಾಮ್ನಯ ಶ್ರೀಶಾರದಾ ಪೀಠ ಶೃಂಗೇರಿಯ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಗಳು ಶಂಕುಸ್ಥಾಪನೆ ನೆರವೇರಿಸಿದ್ದರು. ದ್ರಾವಿಡ ಚೆಟ್ಟಿನಾಡು ಶೈಲಿಯಲ್ಲಿ ಒಟ್ಟು ನಾಲ್ಕು ಹಂತಗಳಲ್ಲಿ ರಾಜಗೋಪುರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಯಿತು.
* ಡಿಸೆಂಬರ್ 12, 2008 : ಗೋಪುರಕ್ಕೆ 48 ಅಡಿ ತಳಪಾಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶಿಲನ್ಯಾಸ ನೆರವೇರಿಸಲಾಯಿತು.
* ನವೆಂಬರ್ 12, 2010 : ರಾಜಗೋಪುರದ ವಿಶೇಷ ಜೋಡಣೆಗಳಿಗೆ ಪೂಜೆ ನೆರವೇರಿಸಿದ ಜಗದ್ಗುರುಗಳಿಂದ ವಿಶೇಷ ಪೂಜೆ.
* ಸೆಪ್ಟೆಂಬರ್ 26 2012: ಗ್ರಾನೈಟ್ ಅಡಿಪಾಯಕ್ಕೆ ಮತ್ತೊಮ್ಮೆ ವಿಶೇಷ ಪೂಜೆ ಸಲ್ಲಿಸಲಾಯಿತು.
* ಮೇ 31, 2014 : ರಾಜಗೋಪುರ ಕುಂಭಾಭಿಷೇಕ ದಿನಾಂಕ ಪ್ರಕಟ ಹಾಗೂ ಭಕ್ತಾದಿಗಳಿಂದ ವಿವಿಧ ರೂಪದಲ್ಲಿ ಕಾಣಿಕೆ ಅರ್ಪಣೆ

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವಿವರ

ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ವಿವರ

ಜೂ.1: ಲಕ್ಷ ಮೋದಕ ಗಣಪತಿ ಹೋಮ.
ಜೂ.2 ರಿಂದ ಜೂ.13 ರ ತನಕ : ಅತಿ ರುದ್ರ ಮಹಾ ಯಾಗ.
ಜೂ.2 ರಿಂದ ಜೂ.12 ರ ತನಕ : ಶಾರದಾಂಬೆಗೆ ಕೋಟಿ ಕುಂಕುಮಾರ್ಚನೆ
ಜೂ.4 ರಿಂದ ಜೂ.8 ರ ತನಕ : ರಾಜಗೋಪುರ ಕುಂಭಾಭಿಷೇಕಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ
ಜೂ.6 ರಿಂದ ಜೂ.10 ರ ತನಕ : ಸಹಸ್ರ ಚಂಡಿಕಾ ಮಹಾಯಾಗ
ಜೂ.8 ಭಾನುವಾರ: 127 ಅಡಿ ಎತ್ತರದ ರಾಜಗೋಪುರ ಲೋಕಾರ್ಪಣೆ. ತೋರಣ ಗಣಪತಿ ದೇಗುಲದ ಪ್ರಾಣ ಪ್ರತಿಷ್ಠಾಪನೆ

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಜೂ.1 ರಂದು ಶಿವಮೊಗ್ಗದ ಕುಮಾರಸ್ವಾಮಿ ಹಾಗೂ ತಂಡದಿಂದ ಪರ್ಕುಷನ್ ವಾದ್ಯಗೋಷ್ಠಿ, ಜೂ.2 ರಂದು ವಿದ್ವಾನ್ ಪ್ರವೀಣ್ ಗೋಡ್ಖಿಂಡಿ ಹಾಗೂ ತಂಡದಿಂದ ವೇಣುವಾದನ
ಜೂ.3: ವಿದ್ವಾನ್ ಆರ್ ಕುಮಾರೇಶ್(ಪಿಟೀಲು), ಡಾ. ಜಯಂತಿ(ವೀಣೆ), ಅರ್ಜುನ್ ಕುಮಾರ್(ಮೃದಂಗಂ), ತಿರುಚ್ಚಿ ಕೃಷ್ಣ (ಘಟಂ)
ಜೂ.4 : ವಿದುಷಿ ಬಾಂಬೆ ಜಯಶ್ರೀ(ಹಾಡುಗಾರಿಕೆ), ವಿದ್ವಾನ್ ಕೆ ದಿಲೀಪ್ (ಪಿಟೀಲು), ಸುಮೇಶ್ ನಾರಾಯಣ್(ಮೃದಂಗ), ಕೃಷ್ಣ(ಘಟಂ)
ಜೂ.5 : ವಿದ್ವಾನ್ ವಿಜಯಶಿವ (ಹಾಡುಗಾರಿಕೆ), ಅಮೃತಾ ಮುರಳಿ (ಪಿಟೀಲು), ಮನೋಜ್ ಶಿವ( ಮೃದಂಗ) ಚಂದ್ರಶೇಖರ ಶರ್ಮ (ಘಟಂ)
ಇನ್ನಷ್ಟು ವಿವರ, ಚಿತ್ರಗಳನ್ನು ನಿರೀಕ್ಷಿಸಿ

ಸಾಂಸ್ಕೃತಿಕ ಕಾರ್ಯಕ್ರಮಗಳ ಇನ್ನಷ್ಟು ವಿವರ

ಸಾಂಸ್ಕೃತಿಕ ಕಾರ್ಯಕ್ರಮಗಳ ಇನ್ನಷ್ಟು ವಿವರ

ಜೂ. 6: ಭಕ್ತಿ ಸಂಗೀತ ಕಾರ್ಯಕ್ರಮ : ವಿದುಷಿ ಸಂಗೀತಾ ಕುಲಕರ್ಣಿ ಕಟ್ಟಿ ಮತ್ತು ತಂಡ
ಜೂ.7: ಪದ್ಮಶ್ರೀ ವಿದುಷಿ ಅರುಣಾ ಸಾಯಿರಾಮ್ (ಹಾಡುಗಾರಿಕೆ), ವಿದ್ವಾನ್ ಅನಂತಕೃಷ್ಣನ್( ಪಿಟೀಲು), ಗಿರಿಧರ್ (ಮೃದಂಗಂ), ಎಸ್ ವಿ ರಮಣಿ(ಘಟಂ)
ಜೂ. 9: ಉನ್ನಿಕೃಷ್ಣನ್ (ಹಾಡುಗಾರಿಕೆ), ವಿಠಲ್ ರಾಮಮೂರ್ತಿ(ಪಿಟೀಲು), ಎಂ ರಾಜರಾವ್ (ಮೃದಂಗಂ)
ಜೂ.10: ಸಂಗೀತ ಕಲಾನಿಧಿ ಕದ್ರಿ ಗೋಪಾಲನಾಥ್ (ಸ್ಯಾಕ್ಸೋಫೋನ್), ಕನ್ಯಾಕುಮಾರಿ(ಪಿಟೀಲು), ಪ್ರವೀಣ್(ಮೃದಂಗಂ), ರಾಜೇಂದ್ರ ನಾಕೋಡ್ (ತಬಲಾ), ಬಿ ರಾಜಶೇಖರ್ (ಮೋರ್ಸಿಂಗ್)

ವಿವಿಧ ರೀತಿಯ ಸಾಂಸ್ಕೃತಿಕ ವೈಭವ

ವಿವಿಧ ರೀತಿಯ ಸಾಂಸ್ಕೃತಿಕ ವೈಭವ

ಜೂ.11: ವಿದ್ವಾನ್ ರಾಮಕೃಷ್ಣಮೂರ್ತಿ(ಹಾಡುಗಾರಿಕೆ), ಪಿ ಸುಂದರ್ ರಾಜನ್ (ಪಿಟೀಲು) , ಯು ಕೆ ಶಿವರಾಮ್ (ಮೃದಂಗಂ)
ಜೂ.12 : ಲಯ ಲಹರಿ ವಿದ್ವಾನ್ ಶಿವಶಂಕರಸ್ವಾಮಿ ಹಾಗೂ ತಂಡ ಮೈಸೂರು
ಜೂ.13 : ವಿದ್ವಾನ್ ಶೆನ್ ಕೊಟ್ಟೈ ಹರಿಹರ ಸುಬ್ರಮಣ್ಯಂ ಭಾಗವತರ್ ಹಾಗೂ ತಂಡದಿಂದ ಭಜನೆ
* ತ್ರಿಜನ್ಮಮೋಕ್ಷ ಯಕ್ಷಗಾನ ಪ್ರಸಂಗ
ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಕಲಾ ಸಂಗ, ಮಲ್ಲ, ಕಾಸರಗೋಡು,

rn

ಲಕ್ಷ ಮೋದಕ ಗಣಪತಿ ಹೋಮ.

ಲಕ್ಷ ಮೋದಕ ಗಣಪತಿ ಹೋಮ ಬೆಳಗ್ಗೆ 7.30ಕ್ಕೆ ಶ್ರೀಮಠದ ವ್ಯವಸ್ಥಾಪಕರಾದ ಗೌರಿಶಂಕರ್ ಅವರು ಲೋಕ ಕಲ್ಯಾಣಾರ್ಥವಾಗಿ ಸಂಕಲ್ಪ ಕೈಗೊಂಡ ಮೇಲೆ ಹೋಮ ಆರಂಭಗೊಂಡಿತ್ತು. ದೇಶದೆಲ್ಲೆಡೆಯಿಂದ ಬಂದಿರುವ 111 ವೈದಿಕರು 10 ಹವನ ಕುಂಡದಲ್ಲಿ ಮಹಾಗಣಪತಿಗೆ ಮೋದಕ ಅರ್ಪಿಸಿದರು. 111 X 1000 ಮೋದಕ ಅರ್ಪಣೆಯಾಯಿತು. 12.30ಕ್ಕೆ ಭಾರತೀತೀರ್ಥಸ್ವಾಮೀಜಿಗಳ ಉಪಸ್ಥಿತ್ಯೊಂದಿಗೆ ಪೂರ್ಣಾಹುತಿ ನೇರವೇರಿತು. ವಿಡಿಯೋ ಕ್ಲಿಪ್ಪಿಂಗ್ ನೋಡಿ

ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮ ನೇರ ಪ್ರಸಾರ

ಹೆಚ್ಚಿನ ಮಾಹಿತಿ ಹಾಗೂ ಕಾರ್ಯಕ್ರಮ ನೇರ ಪ್ರಸಾರ

ಹೆಚ್ಚಿನ ಮಾಹಿತಿಯನ್ನು ಶ್ರೀಶಾರದಾಪೀಠ, ಶೃಂಗೇರಿ, ಚಿಕ್ಕಮಗಳೂರು ಜಿಲ್ಲೆ - 577 139
ದೂರವಾಣಿ : 08265- 250123, 250192
ವೆಬ್ : www.sringeri.net
ಶ್ರೀ ಶಂಕರ ಟಿವಿಯಲ್ಲಿ ಪ್ರತಿದಿನ ಸಂಜೆ ಶೃಂಗೇರಿ ಕಾರ್ಯಕ್ರಮ ನೇರ ಪ್ರಸಾರವಿರುತ್ತದೆ.

English summary
The Maha-kumbhabhishekam of the 127 feet majestic Rajagopuram will be performed by Jagadguru Shankaracharya Sri Sri Bharati Tirtha Mahaswamiji, on the 8th of June 2014. The cultural and ritual celebrations started from the 1st of June 2014 to the 13th of June 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X