ಮದುವೆ ಒಲ್ಲೆ ಎಂದಿದ್ದಕ್ಕೆ ಪ್ರೇಯಸಿ ಮನೆ ಎದುರೇ ವಿಷ ಕುಡಿದ

Written by: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಕೊಪ್ಪಳ, ಅಕ್ಟೋಬರ್ 12: ಪ್ರೇಮ ವೈಫಲ್ಯದ ನೋವಿಗೆ ಸಿಲುಕಿದ ಯುವಕನೊಬ್ಬ ಮೊಬೈಲ್ ಫೋನ್ ನಲ್ಲಿ ವಿಡಿಯೋ ಮಾಡಿ, ತನ್ನ ಬೇಸರ ಹೇಳಿಕೊಂಡು, ಆ ನಂತರ ಪ್ರಿಯತಮೆಯ ಮನೆ ಎದುರೇ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾವತಿ ತಾಲೂಕು ಕಲ್ಗುಡಿಯ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವನು.

ಕಿರಣ್ ಹಾಗೂ ಕೊಪ್ಪಳ ತಾಲೂಕು ಮುನಿರಾಬಾದ್ ನ ಯುವತಿಯೊಬ್ಬಳು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಿರಣ್ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಸಂಬಂಧಿಕರಾಗಿದ್ದು, ಹುಬ್ಬಳ್ಳಿಯಲ್ಲಿ ಜೊತೆಯಾಗಿಯೇ ವಾಸವಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿಚಾರ ಹುಡುಗಿಯ ಕುಟುಂಬದವರಿಗೆ ಗೊತ್ತಾಗಿತ್ತು.[ಚೈತ್ರಾ ಸಾವು ಪ್ರಕರಣ: ಪ್ರಿಯಕರ, ಮತ್ತಿಬ್ಬರು ಯುವಕರ ಮೇಲೆ ದೂರು]

Love rejection: Young man commit suicide in Gangavati

ಆ ನಂತರ ಆಕೆಗೆ ಬೇರೆ ಸಂಬಂಧ ಗೊತ್ತು ಮಾಡಲು ನಿರ್ಧರಿಸಿದ್ದರು. ಆ ಹುಡುಗಿಯೂ ಮದುವೆಗೆ ಒಪ್ಪಿದ್ದಳು. ಈ ವಿಚಾರ ಗೊತ್ತಾದ ನಂತರ ಕಿರಣ್, ಆಕೆಯ ಮನೆ ಬಳಿಗೆ ಹೋಗಿ ಜಗಳ ಮಾಡಿದ್ದ. ಆಗ ಕಿರಣ್ ಜತೆಗೆ ಮದುವೆಯಾಗುವುದಕ್ಕೆ ಹುಡುಗಿ ಸ್ಪಷ್ಟವಾಗಿ ನಿರಾಕರಿಸಿದ್ದಳು.[ಬೇಗ ಮದುವೆಯಾಗು ಎಂದ ಅಪ್ಪ, ನೇಣಿಗೆ ಶರಣಾದ ಟೆಕ್ಕಿ]

ಆತ್ಮಹತ್ಯೆ ಮಾಡಿಕೊಂಡ ಕಿರಣ್, ಅದಕ್ಕೂ ಮುನ್ನ 'ನನ್ನ ಸಾವಿಗೆ ಯುವತಿ ಮತ್ತು ಅವಳ ಕುಟುಂಬಸ್ಥರೇ ಕಾರಣ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ತನ್ನ ತಾಯಿಯಲ್ಲಿ ಕ್ಷಮೆ ಕೋರಿದ್ದಾನೆ. ಆ ನಂತರ ವಿಡಿಯೋವನ್ನು ತನ್ನ ಅಕ್ಕನ ಮೊಬೈಲ್ ಫೋನಿಗೆ ಕಳುಹಿಸಿ, ಯುವತಿಯ ಮನೆ ಮುಂದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Kalgudi Kirankumar commit suicide before his lover house in Gangavathi taluk, Koppal district. After she rejected to marry him, he made a video, recorded reason fo the suicide and sent to his sister. Case registered in Munirabad police station.
Please Wait while comments are loading...