ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ದಿನಗಳ ರಜೆ ಪಡೆದ ಭಾಸ್ಕರ ರಾವ್

|
Google Oneindia Kannada News

ಬೆಂಗಳೂರು, ಜುಲೈ 29 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್ ಅವರನ್ನು ಕೋರ್ಟ್ 9 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಿದೆ. ಇತ್ತ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್ ಅವರು 15 ದಿನಗಳ ರಜೆ ಪಡೆದಿದ್ದಾರೆ.

ಮಂಗಳವಾರ ಅಶ್ವಿನ್‌ ರಾವ್ ಅವರನ್ನು ಎಸ್‌ಐಟಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆಗಸ್ಟ್‌ 6ರವರೆಗೆ ಎಸ್‌ಐಟಿ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಮಂಗಳವಾರ ಲೋಕಾಯುಕ್ತ ಕಚೇರಿಗೆ ಆಗಮಿಸದ ಭಾಸ್ಕರ ರಾವ್ ರಜೆ ಮೇಲೆ ತೆರಳಿದ್ದಾರೆ. [ಅಶ್ವಿನ್ ರಾವ್ SIT ವಶಕ್ಕೆ]

y bhaskar rao

ಲಭ್ಯವಾದ ಮಾಹಿತಿಯಂತೆ ಲೋಕಾಯುಕ್ತದ ಉಸ್ತುವಾರಿ ರಿಜಿಸ್ಟ್ರಾರ್ ಟಿ.ಗೋಪಾಲಕೃಷ್ಣ ರೈ ಅವರಿಗೆ ಪತ್ರ ಬರೆದಿರುವ ಭಾಸ್ಕರ ರಾವ್ ಅವರು ರಜೆ ಮೇಲೆ ತೆರಳಿದ್ದಾರೆ. ಬೆಂಗಳೂರಿನ ನಿವಾಸದಲ್ಲಿಯೂ ಭಾಸ್ಕರ ರಾವ್ ಅವರಿಲ್ಲ. ಆಂಧ್ರಪ್ರದೇಶಕ್ಕೆ ತೆರಳಿರುವ ಸಾಧ್ಯತೆ ಇದೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]

ಮೂರು ದಿನ ರಜೆ ಹಾಕಿದ್ದರು : ಲೋಕಾಯುಕ್ತ ನ್ಯಾ.ಭಾಸ್ಕರ ರಾವ್ ರಾಜೀನಾಮೆ ನೀಡಬೇಕು ಎಂದು ರಾಜ್ಯದಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿದ್ದರೂ ಅವರು ಕಚೇರಿಗೆ ಹಾಜರಾಗಿದ್ದರು. ಕಳೆದ ಜು.15ರಿಂದ ಮೂರು ದಿನ ರಜೆ ಹಾಕಿದ್ದ ಅವರು, ಉಪ ಲೋಕಾಯುಕ್ತ ಎಸ್.ಬಿ.ಮಜಗೆ ಅವರು ನಿವೃತ್ತಿ ಹೊಂದಿದಾಗ ಕಚೇರಿಗೆ ಆಗಮಿಸಿ ಬೀಳ್ಕೊಟ್ಟಿದ್ದರು.

ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಪುತ್ರನ ಬಂಧನವಾಗುತ್ತಿದ್ದಂತೆಯೇ 15 ದಿನಗಳ ರಜೆ ಹಾಕಿದ್ದಾರೆ. ಭಾಸ್ಕರ ರಾವ್ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. [ಭಾಸ್ಕರರಾವ್ ರಾಜೀನಾಮೆ ನೀಡಬೇಕೆ?]

English summary
Karnataka Lokayukta Justice Bhaskar Rao went on leave. Special Investigation Team (SIT) arrested Bhaskar Rao son Ashwin Rao in connection with the alleged corruption case in Lokayukta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X