ಆರ್‌ಟಿಓ ಚೆಕ್‌ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

Subscribe to Oneindia Kannada

ಬೆಂಗಳೂರು, ಆಗಸ್ಟ್ 23 : ಮಂಗಳವಾರ ಮುಂಜಾನೆ ರಾಜ್ಯದ 5 ಕಡೆ ಲೋಕಾಯುಕ್ತ ದಾಳಿ ನಡೆದಿದೆ. ಮೂರು ಆರ್‌ಟಿಓ ಚೆಕ್‌ಪೋಸ್ಟ್ ಮತ್ತು ಎರಡು ತೆರಿಗೆ ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.

ಉಪಲೋಕಾಯುಕ್ತ ನ್ಯಾ. ಸುಭಾಷ್‌ ಅಡಿ ಅವರ ನಿರ್ದೇಶನದಂತೆ ರಾಜ್ಯದ 5 ಕಡೆ ಮಂಗಳವಾರ ಮುಂಜಾನೆ 5 ಗಂಟೆಗೆ ಲೋಕಾಯುಕ್ತ ದಾಳಿ ನಡೆದಿದೆ. ಬೇರೆ ಜಿಲ್ಲೆಯ ಎಸ್ಪಿಗಳನ್ನು ಬಳಕೆ ಮಾಡಿಕೊಂಡು ಈ ದಾಳಿ ನಡೆಸಿರುವುದು ವಿಶೇಷ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ 7ನೇ ಆರೋಪಿ]

Lokayukta

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ, ಹುಬ್ಬಳ್ಳಿ-ಬಳ್ಳಾರಿ ಹೆದ್ದಾರಿ ಸೇರಿದಂತೆ ಮೂರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಓ) ಚೆಕ್‌ಪೋಸ್ಟ್‌ ಮತ್ತು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ವಡ್ಡಹಳ್ಳಿ, ಬಳ್ಳಾರಿಯ ಹಗರಿ ವಾಣಿಜ್ಯ ತೆರಿಗೆ ಇಲಾಖೆ ಚೆಕ್‌ಪೋಸ್ಟ್‌ ಮೇಲೆ ದಾಳಿ ನಡೆಸಲಾಗಿದೆ.[ಭ್ರಷ್ಟಾಚಾರ ನಿಗ್ರಹ ದಳದಿಂದ ವೆಬ್ ಸೈಟ್, ಫೇಸ್ಬುಕ್ ಪುಟ]

ಬಾಗೇಪಲ್ಲಿ ಚೆಕ್‌ಪೋಸ್ಟ್‌ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಅಬ್ದುಲ್ ಅಹದ್ ನೇತೃತ್ವದಲ್ಲಿ ದಾಳಿ ನಡೆದಿದ್ದು 1.5 ಲಕ್ಷ ರೂ. ನಗದು ಪತ್ತೆಯಾಗಿದೆ. ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದು, ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

English summary
The Lokayukta police raided the Regional Transport Office check-post at Bagepalli, Hubli - Ballary highway on August 23, 2016 morning.
Please Wait while comments are loading...