ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈಕೋರ್ಟಿನಲ್ಲಿ ನ್ಯಾ. ವೈ ಭಾಸ್ಕರ್ ರಾವ್ ಅರ್ಜಿ ವಜಾ

ಲೋಕಾಯುಕ್ತದಲ್ಲಿ ಅಧಿಕಾರ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಪಡೆದುಕೊಂಡಿದ್ದ ನ್ಯಾ. ವೈ ಭಾಸ್ಕರ್ ರಾವ್ ಅವರಿಗೆ ಸಂಕಷ್ಟ, ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಹೈಕೋಟಿಗೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 22: ಲೋಕಾಯುಕ್ತದಲ್ಲಿ ಅಧಿಕಾರ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಪಡೆದುಕೊಂಡಿದ್ದ ನ್ಯಾ. ವೈ ಭಾಸ್ಕರ್ ರಾವ್ ಅವರಿಗೆ ಸಂಕಷ್ಟ ಮುಂದುವರೆದಿದೆ. ತಮ್ಮ ಮೇಲಿನ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಹೈಕೋಟಿಗೆ ಸಲ್ಲಿಸಿದ್ದ ಅರ್ಜಿ ಮಂಗಳವಾರ ವಜಾಗೊಂಡಿದೆ.

ಈ ಪ್ರಕರಣದಲ್ಲಿ ಇಲ್ಲಿ ತನಕ 11 ಜನ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ನ್ಯಾ.ವೈ ಭಾಸ್ಕರ್ ರಾವ್ ಅವರು 7ನೇ ಆರೋಪಿಯಾಗಿದ್ದಾರೆ.[ಲೋಕಾಯುಕ್ತದಲ್ಲಿ ಭ್ರಷ್ಟ್ರಾಚಾರ : ಅಶ್ವಿನ್‌ರಾವ್‌ಗೆ ಜಾಮೀನು]

Lokayukta extortion scandal. Justice Y Bhaskar Ra in Trouble

ಭಾಸ್ಕರ್ ರಾವ್ ಅವರ ಆರೋಪಗಳೇನು?: ಲೋಕಾಯುಕ್ತ ಸ್ಥಾನ, ಅಧಿಕಾರದ ದುರ್ಬಳಕೆ, ಲೋಕಾಯುಕ್ತ ಕಚೇರಿಯನ್ನು ಭ್ರಷ್ಟಾಚಾರಕ್ಕಾಗಿ ಬಳಕೆ ಮಾಡಿಕೊಂಡಿರುವುದು, ಭಾಸ್ಕರ್ ರಾವ್ ಅವರ ಪುತ್ರನಿಂದ ಕಚೇರಿ, ಅಧಿಕೃತ ನಿವಾಸದ ದೂರವಾಣಿಯಿಂದಲೇ ಹಲವರಿಗೆ ಬೆದರಿಕೆ ಕರೆ ಮಾಡಿ ಹಣ ವಸೂಲಿ ಆರೋಪ.

ತನಿಖೆ, ಚಾರ್ಜ್ ಶೀಟ್ : ಮೊದಲಿಗೆ ಈ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿ ಲೋಕಾಯುಕ್ತ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರ ನೇತೃತ್ವದ ತಂಡ ವಹಿಸಿಕೊಂಡಿತ್ತು. ನಂತರ ಉಪ ಲೋಕಾಯುಕ್ತ ಸುಭಾಷ್ ಬಿ ಆಡಿ ಅವರಿಂದ ತನಿಖೆ, ಆಮೇಲೆ ವಿಶೇಷ ತನಿಖಾ ತಂಡ(ಎಸ್ ಐಟಿ)ಕ್ಕೆ ಪ್ರಕರಣದ ತನಿಖೆ ಜವಾಬ್ದಾರಿ.[ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್‌ಗೆ ಸಮನ್ಸ್]

ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ಬಂಧನ, ಜಾಮೀನಿನ ಮೇಲೆ ಬಿಡುಗಡೆ, ಆಗಸ್ಟ್ ತಿಂಗಳಿನಲ್ಲಿ ಸಲ್ಲಿಸಲಾದ ದೋಷಾರೋಪಣ ಪಟ್ಟಿಯಲ್ಲಿ ವೈ ಭಾಸ್ಕರ್ ರಾವ್ ಅವರು 7ನೇ ಆರೋಪಿ. ಹೈಕೋರ್ಟಿನಿಂದ ಭಾಸ್ಕರ್ ರಾವ್ ಗೆ ಸಮನ್ಸ್ ಜಾರಿ.

ಎಸ್ ಐಟಿ ಸಲ್ಲಿಸಿದ ಚಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದ ನ್ಯಾ. ವೈ ಭಾಸ್ಕರ್ ರಾವ್ ಅವರು ನ್ಯಾಯಮೂರ್ತಿಗಳ ರಕ್ಷಣಾ ಕಾಯ್ದೆ ಉಲ್ಲೇಖಿಸಿದರೂ ಪ್ರಯೋಜನವಾಗಲಿಲ್ಲ. ವಿಶೇಷ ಅಭಿಯೋಜಕ ಪಿಎಸ್ ಜಾಧವ್ ಅವರ ವಾದ ಪುರಸ್ಕರಿಸಿದ ಹೈಕೋರ್ಟ್ ನ್ಯಾ ಆನಂದ್ ಭೈರಾರೆಡ್ಡಿ ಅವರು ವೈ ಭಾಸ್ಕರ್ ರಾವ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದಾರೆ.

English summary
Karnataka High Court Justice Anand Byrareddy today rejected plea by Justice Y Bhaskar Rao seeking an order to quash additional charge sheet filed by the SIT. Justice Rao is accused number 7 in the Lokayukta extortion scandal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X