ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ ಚುನಾವಣೆ : ಹೆಬ್ಬಾಳ 46, ದೇವದುರ್ಗದಲ್ಲಿ 61ರಷ್ಟು ಮತದಾನ

|
Google Oneindia Kannada News

ಬೆಂಗಳೂರು, ಫೆಬ್ರವರಿ 13 : ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಹೆಬ್ಬಾಳ, ದೇವದುರ್ಗ ಮತ್ತು ಬೀದರ್ ಕ್ಷೇತ್ರಗಳಲ್ಲಿ ಉಪ ಚುನಾವಣೆಗೆ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಫೆ.16ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಹೆಬ್ಬಾಳದ ಶಾಸಕರಾಗಿದ್ದ ಜಗದೀಶ್ ಕುಮಾರ್ (ಬಿಜೆಪಿ), ಬೀದರ್ ಶಾಸಕರಾಗಿದ್ದ ಗುರುಪಾದಪ್ಪ ನಾಗಮಾರಪಲ್ಲಿ (ಕೆಜೆಪಿ) ಮತ್ತು ದೇವದುರ್ಗದ ಶಾಸಕರಾಗಿದ್ದ ವೆಂಕಟೇಶ್ ನಾಯಕ್ ಅವರ ಅಕಾಲಿಕ ಮರಣದಿಂದಾಗಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ಎದುರಾಗಿತ್ತು.[ಹೆಬ್ಬಾಳದಲ್ಲಿ 2 ಲಕ್ಷ ಮತದಾರರರು]

venkatesh nayak

ಮೂರು ಕ್ಷೇತ್ರಗಳ ಪೈಕಿ ಹೆಬ್ಬಾಳದಲ್ಲಿ ಶೇ 46ರಷ್ಟು ಅಂದರೆ ಅತಿ ಕಡಿಮೆ ಮತದಾನವಾಗಿದ್ದು, ದೇವದುರ್ಗದಲ್ಲಿ ಶೇ 61ರಷ್ಟು ಮತದಾನವಾಗಿದೆ. ಬೀದರ್‌ ಕ್ಷೇತ್ರದಲ್ಲಿ ಶೇ 56ರಷ್ಟು ಮತದಾನವಾಗಿದೆ. ಫೆ.16ರ ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

ಸಮಯ 7 ಗಂಟೆ : ಮೂರು ಕ್ಷೇತ್ರಗಳ ಉಪ ಚುನಾವಣೆಗೆ ತೆರೆ ಬಿದ್ದಿದ್ದು ಹೆಬ್ಬಾಳದಲ್ಲಿ ಶೇ 46 ರಷ್ಟು, ದೇವದುರ್ಗದಲ್ಲಿ ಶೇ 61 ರಷ್ಟು ಮತ್ತು ಬೀದರ್‌ನಲ್ಲಿ ಶೇ 56 ರಷ್ಟು ಮತದಾನವಾಗಿದೆ.

ಸಮಯ 3 ಗಂಟೆ : ಹೆಬ್ಬಾಳ ಉಪ ಚುನಾವಣೆ ಸಚಿವ ದಿನೇಶ್ ಗುಂಡೂರಾವ್ ದಂಪತಿಯಿಂದ ಮತದಾನ

ಸಮಯ 2 ಗಂಟೆ : ಮೂರು ಕ್ಷೇತ್ರಗಳ ಉಪ ಚುಣಾವಣೆಗೆ ಮತದಾನ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆಗೆ ಶೆ 35ರಷ್ಟು ಮತದಾನವಾಗಿದೆ.

ಸಮಯ 1 ಗಂಟೆ : 'ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಶಾಂತಿಯುತವಾಗಿ ನಡೆಯುತ್ತಿದೆ ಎಂದು ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಹೇಳಿದರು. ಮತಗಟ್ಟೆ ಸಂಖ್ಯೆ50ರಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, 'ಮತಗಟ್ಟೆ ಸಂಖ್ಯೆ 88, 103ರಲ್ಲಿ ಮತಯಂತ್ರ ದೋಷ ಉಂಟಾಗಿತ್ತು. ತಕ್ಷಣವೇ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ' ಎಂದರು.

ಸಮಯ 12 ಗಂಟೆ : ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದಲ್ಲಿ ಶಾಸಕ ವೆಂಕಟೇಶ್ ನಾಯಕ್ (ಕಾಂಗ್ರೆಸ್) ಅವರ ನಿಧನದಿಂದಾಗಿ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಆದರೆ, ಅರೆಕೆರೆಯ ಬೂತ್ ನಂ 164ರ ಮತಗಟ್ಟೆಯಲ್ಲಿ ವೆಂಕಟೇಶ್ ನಾಯಕ್ ಅವರ ಹೆಸರು ಪತ್ತೆಯಾಗಿದೆ. ಮತದಾರರ ಪಟ್ಟಿಯನ್ನು ಸರಿಯಾಗಿ ಪರಿಷ್ಕರಣೆ ಮಾಡಿಲ್ಲ ಎಂದು ಜನರು ಆರೋಪಿಸಿದರು.

ಸಮಯ 11.15 : 'ಅಧಿಕಾರ ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಸಹಾಯದಿಂದಲೇ ಹಣ ಹಂಚುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು' ಎಂದು ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಒತ್ತಾಯಿಸಿದರು. [ಹೆಬ್ಬಾಳ ಉಪ ಚುನಾವಣೆಯಲ್ಲಿ ಹಣ ಹಂಚಿಕೆ]

ಸಮಯ 10.50 : ರಾಯಚೂರು ಜಿಲ್ಲೆಯ ದೇವದುರ್ಗ ಕ್ಷೇತ್ರದಲ್ಲಿ 9 ಗಂಟೆಯ ತನಕ ಶೇ 7.5ರಷ್ಟು ಮತದಾನವಾಗಿದೆ

ಸಮಯ 10.30 : 'ಹೆಬ್ಬಾಳ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ರಿಪ್ಲಬಿಕ್ ಆಫ್ ಬೆಂಗಳೂರು ಮಾಡಲು ಹೊರಟಿದ್ದಾರೆ. ಭೈರತಿ ಬಸವರಾಜ್ ಬೆಂಬಲಿಗರು ಬೂತ್ ಹೊರಗೆ ಹಣ ಹಂಚುತ್ತಿದ್ದಾರೆ. ಈ ವಿಚಾರದ ಕುರಿತು ಗಲಭೆ ಮಾಡುವುದಕ್ಕೂ ನಾನು ಸಿದ್ಧ' ಎಂದ ಹೆಬ್ಬಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ.

shivana gowda nayak

ಸಮಯ 10.15 : ಮಾಜಿ ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ಮುಖಂಡ ಅಬ್ದುಲ್ ಅಜೀಂ ಅವರು ಚಾಮರಾಜಪೇಟೆಯ ಜೆಡಿಎಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಮುಸ್ಲಿಂ ಅಭ್ಯರ್ಥಿಗೆ ಮತ ಹಾಕಿ ಎಂದು ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ರಾಜಕಾರಣಿಗಳಿಗೆ ಸಂವಿಧಾನದ ಬಗ್ಗೆ ಅರಿವಿರಬೇಕು' ಎಂದು ಅವರು ಕಿವಿಮಾತು ಹೇಳಿದರು.

ಸಮಯ 9 ಗಂಟೆ : ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಬಳಿ ಪೊಲೀಸರು ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 4 ಲಕ್ಷ ರೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್‌ನಲ್ಲಿ ಹಣವನ್ನು ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.

hebbala

ಸಮಯ 8.45 : ಮನೆಗೆ ತೆರಳಿ ಮತದಾರರ ಗುರುತಿನ ಚೀಟಿ ತಂದ ಬಳಿಕ ಜಯಮಾಲಾ ಮತ್ತು ಸೌಂದರ್ಯ ಅವರು ಮತದಾನ ಮಾಡಿದ್ದಾರೆ

ಸಮಯ 8.15 : ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆಗೆ ಮತದಾನ ಮಾಡಲು ಆಗಮಿಸಿದ್ದ ನಟಿ ಜಯಮಾಲಾ ಮತ್ತು ಸೌಂದರ್ಯ ಜಯಮಾಲಾ ಅವರು ಮತದಾರರ ಗುರುತಿನ ಚೀಟಿ ತರದೆ ಡಾಲರ್ಸ್ ಕಾಲೋನಿ ಬೂತ್‌ನಿಂದ ವಾಪಸ್ ಹೋಗಿದ್ದಾರೆ.

ಸಮಯ 7.40 : ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಿ.ಕೆ.ಅಬ್ದುಲ್ ರೆಹಮಾನ್ ಷರೀಫ್, ಬಿಜೆಪಿಯಿಂದ ವೈ.ಎ.ನಾರಾಯಣಸ್ವಾಮಿ, ಜೆಡಿಎಸ್‌ನ ಇಸ್ಮಾಯಿಲ್ ಷರೀಫ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ. [ಹೆಬ್ಬಾಳ ಶಾಸಕ ಜಗದೀಶ್ ಕುಮಾರ್ ಇನ್ನಿಲ್ಲ]

ಸಮಯ 7.20 : ದೇವದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎ.ರಾಜಶೇಖರ ನಾಯಕ್, ಬಿಜೆಪಿಯ ಶಿವನಗೌಡ ನಾಯಕ್ ಹಾಗೂ ಜೆಡಿಎಸ್‌ನಿಂದ ಕರಿಯಮ್ಮ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. [ದೇವದುರ್ಗ ಶಾಸಕ, ರೈಲು ಅಪಘಾತದಲ್ಲಿ ಸಾವು]

by poll

ಸಮಯ 7.10 : ಬೀದರ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಹೀಂಖಾನ್, ಬಿಜೆಪಿಯ ಪ್ರಕಾಶ್ ಖಂಡ್ರೆ, ಜೆಡಿಎಸ್‌ನ ಎಂ.ಡಿ.ಅಯಾಜ್ ಖಾನ್ ಅವರು ಪ್ರಮುಖ ಅಭ್ಯರ್ಥಿಗಳು. [ಗುರುಪಾದಪ್ಪ ನಾಗಮಾರಪಲ್ಲಿ ವಿಧಿವಶ]

English summary
Voting has been completed for Hebbal, Devadurga and Bidar constituency by election. Polling held from 7 a.m. to 5 p.m. on Saturday, February 13, 2016. Election result will be announced on February 16,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X