ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಿಗೆ ಮುಷ್ಕರ : ಜುಲೈ 26ರಂದು ಏನೇನಾಯ್ತು?

|
Google Oneindia Kannada News

ಬೆಂಗಳೂರು, ಜುಲೈ 26 : ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿತ್ತು. ಆದರೆ, ಚಾಲಕರ ಮೇಲೆ ಮೆಜೆಸ್ಟಿಕ್‌ನಲ್ಲಿ ಹಲ್ಲೆಗೆ ಯತ್ನ ನಡೆದಿದ್ದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಮುಷ್ಕರ ನಡೆಸುತ್ತಿರುವ ನೌಕರರು, ಬಸ್ ಓಡಿಸುತ್ತಿರುವ ಚಾಲಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಬದಲಾಗದ ಸರ್ಕಾರದ ನಿಲುವು : ಶೇ. 10ರಷ್ಟು ವೇತನ ಹೆಚ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಲಾಗಿದೆ. ಮುಷ್ಕರ ಕೈಬಿಟ್ಟು ಸರ್ಕಾರದ ಜತೆ ಮಾತುಕತೆಗೆ ಬರುವಂತೆ ಮುಷ್ಕರ ನಿರತ ಸಂಘಟನೆಗಳಿಗೆ ಸೂಚಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಬಸ್ ಸಂಚಾರ : ಸ್ಯಾಟ್ ಲೈಟ್‌ನಿಂದ ಮೈಸೂರಿಗೆ ಬಸ್ ಸಂಚಾರ ಪ್ರಾರಂಭ. ಮೆಜೆಸ್ಟಿಕ್‌ನಿಂದ ಸ್ಯಾಟ್ ಲೈಟ್‌ಗೆ ತೆರಳುವ ಸಂಪರ್ಕ ಸಾರಿಗೆಯೂ ಪ್ರಾರಂಭ. ಯಶವಂತಪುರ ಡಿಪೋ ದಿಂದ ಮೆಜೆಸ್ಟಿಕ್‌ಗೆ ಒಂದು ಬಸ್ ಹೊರಡಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಮುಷ್ಕರದ ಹಿನ್ನಲೆಯಲ್ಲಿ ತುರ್ತು ಸಭೆ ಕರೆದಿದ್ದು, ವಿಧಾನಸೌಧದ ಸಿಎಂ ಕಚೇರಿಯಲ್ಲಿ ಸಭೆ ನಡೆಯುತ್ತಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

ಉತ್ತರಹಳ್ಳಿಗೆ ಬಸ್ ಸೇವೆ : ವಿಧಾನ ಪರಿಷತ್ ಸದಸ್ಯ (ಜೆಡಿಎಸ್) ಶರವಣ ಅವರು ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಉತ್ತರಹಳ್ಳಿಯವರೆಗೆ ಉಚಿತ ಬಸ್ ವ್ಯವಸ್ಥೆಯನ್ನು ಮಾಡಿದ್ದು, ಮೆಜಸ್ಟಿಕ್ ನಲ್ಲಿರುವ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬಹುದು.

bus

4 ಬಸ್ ಸಂಚಾರ ಆರಂಭ : ಶಾಂತಿನಗರ-ಮೆಜೆಸ್ಟಿಕ್, ಶಾಂತಿನಗರ-ಸ್ಯಾಟಲೈಟ್, ಶಾಂತಿನಗರ-ಜಯನಗರ, ಶಾಂತಿನಗರ-ಶಿವಾಜಿನಗರಕ್ಕೆ 4 ಬಿಎಂಟಿಸಿ ಬಸ್ಸುಗಳ ಸಂಚಾರ ಆರಂಭವಾಗಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದಲೂ 2 ಬಸ್ಸುಗಳ ಸಂಚಾರ ಆರಂಭವಾಗಿದೆ.

ಮೆಜೆಸ್ಟಿಕ್‌ಗೆ ಬಂದ ಬಸ್ : ಬೆಂಗಳೂರಿನ ಶಾಂತಿನಗರದಿಂದ ಹೊರಟ ಬಸ್ ಮೆಜೆಸ್ಟಿಕ್ ತಲುಪಿದ್ದು, ಅಲ್ಲಿಂದ ಪುನಃ ಶಾಂತಿನಗರಕ್ಕೆ ಸಂಚಾರ ಆರಂಭಿಸಿದೆ. ಬಸ್ಸುಗಳಿಗೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

bmtc

ಬಸ್ ಸಂಚಾರ ಆರಂಭ : ಬೆಂಗಳೂರಿನ ಶಾಂತಿ ನಗರ ಡಿಪೋದಿಂದ ಎರಡು ಬಿಎಂಟಿಸಿ ಬಸ್ಸುಗಳು ಮೆಜೆಸ್ಟಿಕ್‌ಗೆ ಸಂಚಾರ ಆರಂಭಿಸಿವೆ. ಬಸ್ಸುಗಳಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮದ್ದೂರು-ಮಂಡ್ಯ ನಡುವೆ ಸರ್ಕಾರಿ ಬಸ್ ಸೇವೆ ಆರಂಭವಾಗಿದೆ.

ಬಸ್ ಸಂಚಾರ ಆರಂಭ? : ಇಂದು ಮಧ್ಯಾಹ್ನದ ನಂತರ ಪೊಲೀಸ್ ಭದ್ರತೆಯೊಂದಿಗೆ ಬಸ್ ಸೇವೆ ಆರಂಭಿಸಲು ನಿರ್ಧಾರ ಕೈಗೊಳ್ಳಲಾಗಿದೆ. ತರಬೇತಿಯಲ್ಲಿರುವ ಚಾಲಕರು, ಮುಷ್ಕರಕ್ಕೆ ಕೈ ಜೋಡಿಸದೇ ಇರುವ ಸಂಘಟನೆಗಳ ನೆರವಿನಿಂದ ಬಸ್ ಸೇವೆ ಆರಂಭಿಸಲು ನಿರ್ಧರಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಸಿದ್ದರಾಮಯ್ಯ ಅವರ ಒಪ್ಪಿಗೆ ಬಾಕಿ ಇದೆ.

ಸದ್ಯ, ಇಲಾಖೆಯಲ್ಲಿ ತರಬೇತಿ ಪಡೆದಿರುವ ಸುಮಾರು 15 ಸಾವಿರ ಚಾಲಕ ಕಂ ನಿರ್ವಾಹಕರಿದ್ದಾರೆ. ಇವರನ್ನು ಬಳಸಿಕೊಂಡು ಪೊಲೀಸ್ ರಕ್ಷಣೆಯಲ್ಲಿ ಬಸ್ಸುಗಳನ್ನು ಓಡಿಸಲು ಸರ್ಕಾರ ಮುಂದಾಗಿದೆ.[ಸಿದ್ದರಾಮಯ್ಯ ಹೇಳಿದ್ದೇನು?]

ಸಾರಿಗೆ ಇಲಾಖೆಯ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸರ್ಕಾರ ಒಂದು ಸುತ್ತಿನ ಮಾತುಕತೆ ನಡೆಸಿದೆ. ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರ ಸಭೆ ನಡೆಯುತ್ತಿದ್ದು, ಸಭೆಯ ಬಳಿಕ ಅಂತಿಮ ತೀರ್ಮಾನ ಪ್ರಕಟಿಸಲಾಗುತ್ತದೆ.

ಹಿಂದಿನ ಸುದ್ದಿ : ವೇತನ ಪರಿಷ್ಕರಣೆ ಸೇರಿದಂತೆ 42 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಸುಗಳಿಲ್ಲದೆ ಜನರು ಪರದಾಡುತ್ತಿದ್ದಾರೆ.

ಸೋಮವಾರದಿಂದ ಆರಂಭವಾದ ಮುಷ್ಕರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಸಂಚಾರ ಸ್ಥಗಿತಗೊಂಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಸುಗಳು ರಸ್ತೆಗಿಳಿದಿಲ್ಲ. ಆಟೋಗಳು ಜನರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ.[ಸಾರಿಗೆ ಮುಷ್ಕರದ ಚಿತ್ರಗಳು]

ಶೇ. 35ರಷ್ಟು ವೇತನ ಪರಿಷ್ಕರಣೆ ಸೇರಿದಂತೆ 42 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜುಲೈ 25ರಿಂದ ಮುಷ್ಕರ ನಡೆಸಲಾಗುತ್ತಿದೆ. ಸರ್ಕಾರ ಜುಲೈ 26ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.[ಸಾರಿಗೆ ನೌಕರರ ಮುಷ್ಕರ ಯಾರು, ಏನು ಹೇಳಿದರು?]

ಶೇ 10ಕ್ಕಿಂತ ವೇತನ ಹೆಚ್ಚಿಲ್ಲ : 'ಶೇ 10ಕ್ಕಿಂತ ಹೆಚ್ಚು ವೇತನ ಪರಿಷ್ಕರಣೆ ಸಾಧ್ಯವೇ ಇಲ್ಲ. ಸಾರಿಗೆ ಇಲಾಖೆ ನೌಕರರು ತಮ್ಮ ಹಠಮಾರಿ ಧೋರಣೆಯನ್ನು ಕೈ ಬಿಟ್ಟು ಸರ್ಕಾರದ ಜೊತೆ ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ' ನೀಡಿದರು.

ಹಾವೇರಿಯಲ್ಲಿ ಬಸ್ಸಿಗೆ ಕಲ್ಲು : ಕೆಎಸ್ಆರ್‌ಟಿಸಿಯ ಮಲ್ಟಿ ಎಕ್ಸೆಲ್ ಸ್ಕ್ಯಾನಿಯಾ ಬಸ್ಸಿನ ಮೇಲೆ ಹಾವೇರಿಯಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಬಸ್ಸಿನ ಮುಂಭಾಗ ಜಖಂಗೊಂಡಿದೆ.

ಬೆಳಗ್ಗೆ 10.30ಕ್ಕೆ ಸಭೆ : ಸಾರಿಗೆ ನೌಕರರು ಮುಷ್ಕರ ಕೈ ಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದ್ದಾರೆ. ಸರ್ಕಾರದ ಮನವಿಗೆ ಒಪ್ಪಿಗೆ ನೀಡದಿದ್ದರೆ ಎಸ್ಮಾ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಬೆಳಗ್ಗೆ 10.30ಕ್ಕೆ ಸಿದ್ದರಾಮಯ್ಯ ಅವರು ಸಭೆ ಕರೆದಿದ್ದು, ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

English summary
Karnataka State Road Transport Corporation employees strike enters 2nd day. Employees demanding for 35 percent salary hike. Here are the updates of July 26, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X