ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

LIVE ಅಪ್ಡೇಟ್ಸ್ : ಕರ್ನಾಟಕ ಬಂದ್ ಎಲ್ಲೆಲ್ಲಿ ಏನು ನಡೆದಿದೆ?

By Mahesh
|
Google Oneindia Kannada News

ಬೆಂಗಳೂರು, ಸೆ. 09: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ ಸರ್ಕಾರ ಕಾವೇರಿ ನದಿ ನೀರನ್ನು ಹರಿಸಿದೆ. ಸರ್ಕಾರ, ನಾರಿಮನ್, ಜಯಲಲಿತಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾವಿರಾರು ಕನ್ನಡ ಪರ ಸಂಘಟನೆಗಳು ಶುಕ್ರವಾರ (ಸೆಪ್ಟೆಂಬರ್ 9) ಬಂದ್ ಆಚರಿಸುತ್ತಿವೆ. ಬಂದ್ ಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

ಸುಮಾರು 1,200ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು ಶುಕ್ರವಾರ (ಸೆಪ್ಟೆಂಬರ್ 09) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ. ಬಂದ್ ದಿನದ ಬೆಳವಣಿಗೆಗಳು ಇಲ್ಲಿವೆ: [ಕರ್ನಾಟಕ ಬಂದ್ ದಿನ ಏನೆಲ್ಲ ಬಂದ್?]

* ಶನಿವಾರ ಸಂಜೆ ತುರ್ತು ಸಂಪುಟ ಸಭೆ ನಡೆಸಲಿರುವ ಸಿಎಂ ಸಿದ್ದರಾಮಯ್ಯ
* ಬಂದ್ ಸಂದರ್ಭದಲ್ಲಿ ಜೂಜಾಟವಾಡುತ್ತಿದ್ದ ಚನ್ನಪಟ್ಟಣದ ಮೂರು ಕ್ಲಬ್ ಮೇಲೆ ಪ್ರತಿಭಟನಾಕಾರರ ದಾಳಿ, ಜೂಜುಕೋರರು ಪರಾರಿ.

* ತಮಿಳುನಾಡು, ಕರ್ನಾಟಕ ಸಿಎಂ, ಸಚಿವ ಎಂಬಿ ಪಾಟೀಲ್, ಸುಪ್ರೀಂಕೋರ್ಟ್ ಜಡ್ಜ್ ಗಳ ವಿರುದ್ಧ ಪ್ರಕರಣ, ಮಂಡ್ಯದಲ್ಲಿ ಎಂಡಿ ರಾಜಣ್ಣ ಎಂಬುವವರಿಂದ ಜೆಎಂಎಫ್ ಕೋರ್ಟ್ ನಲ್ಲಿ ದೂರು ದಾಖಲು. ಸೆಪ್ಟೆಂಬರ್ 14 ರಂದು ವಿಚಾರಣೆ ಸಾಧ್ಯತೆ.
* ಕಲ್ಲು ತೂರಾಟದಿಂದ ಮೂರು ಕೆಎಸ್ಸಾರ್ಟಿಸಿ ಬಸ್ ಗಳು ಜಖಂ.

* ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾ ನಿರತ ಚೋಳರಪಾಳ್ಯದ ನಿವಾಸಿ ಪ್ರಭು(30) ಚಾಕುವಿನಿಂದ ಹೊಟ್ಟೆಯನ್ನು ಕುಯ್ದುಕೊಂಡಿದ್ದಾರೆ. ಅಸ್ವಸ್ಥಗೊಂಡ ಪ್ರಭು ಅವರನ್ನು ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಸೇರಿಸಲಾಗಿದೆ.

* ಕೆಆರ್ ಎಸ್ ಅಣೆಕಟ್ಟು ಸಮೀಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

* ಕೆ ಆರ್ ಎಸ್ ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪಾಂಡವಪುರದ ಚಂದ್ರೇಗ್ರಾಮದ ರೈತ ರಾಮೇಗೌಡ(58).
* ಶುಕ್ರವಾರ ಸಂಜೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಸಿದ್ದರಾಮಯ್ಯ
* ಕಾವೇರಿ ವಿವಾದ ಬಗೆಹರಿಸಲು ಸಿಎಂಗಳ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ
* ಕೆಆರ್ ಎಸ್ ಬಳಿ ಲಾಠಿಚಾರ್ಜ್ ನಿಂದ ಪೆಟ್ಟು ತಿಂದ ಇಬ್ಬರು ಪ್ರತಿಭಟನಾಕಾರರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.

Live Updates: Karnataka Bandh September 09 Cauvery Dispute

* ಮಂಡ್ಯದ ಕೃಷ್ಣರಾಜಸಾಗರ ಬಳಿ ಪರಿಸ್ಥಿತಿ ಉದ್ವಿಗ್ನ, ಕೆ ಆರ್ ಎಸ್ ಗೆ ನುಗ್ಗಲು ಯತ್ನಿಸಿದ ರೈತರು, ಕಾವೇರಿ ಹಿತರಕ್ಷಣಾ ಸಮಿತಿಯವರ ಮೇಲೆ ಪೊಲೀಸರಿಂದ ಲಾಠಿಚಾರ್ಜ್.
* ಬೆಂಗಳೂರಿನ ಟೌನ್ ಹಾಲ್ ಬಳಿ ಪ್ರತಿಭಟನೆಯ ಬಗ್ಗೆ ನೇರ ವರದಿ


* ಮಂಡ್ಯ ಜಿಲ್ಲೆಯಲ್ಲಿ ತೀವ್ರಗೊಂಡ ಹೋರಾಟ, ಸಾವಿರಾರು ಜನರಿಂದ ರಸ್ತೆಗಿಳಿದು ಪ್ರತಿಭಟನೆ.

* ಬೆಂಗಳೂರಿನ ನಿಮ್ಹಾನ್ಸ್ ಸಿಬ್ಬಂದಿಯಿಂದ ಪ್ರತಿಭಟನೆ. ಡಾ. ಗಂಗಾಧರ್ ನೇತೃತ್ವದಲ್ಲಿ ಸಾಂಕೇತಿಕ ಬೆಂಬಲ.

* ಬಂದ್ ದಿನ ಅಂಗಡಿ ಬಾಗಿಲು ತೆಗೆದ ವೈನ್ ಸ್ಟೋರ್ ಮೇಲೆ ದಾಳಿ, ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಘಟನೆ

Live Updates: Karnataka Bandh September 09 Cauvery Dispute

* ಕರ್ನಾಟಕ ಬಂದ್ ಗೆ ಮಂಗಳೂರಿನಲ್ಲಿ ಶೇ 1 ರಷ್ಟು ಬೆಂಬಲ ಇಲ್ಲ

* ಕೊಪ್ಪಳದಲ್ಲಿ ಶಾಲೆಗೆ ರಜೆ ನೀಡದ ತಮಿಳು ಅಧಿಕಾರಿಗೆ ಎಚ್ಕೆ ಪಾಟೀಲ್ ಕಿವಿಮಾತು, ಆದೇಶ ರದ್ದುಮಾಡಿದ ಸಿಇಒ ಸೆಂಥಿಲ್ ಕುಮಾರ್

* ಕನ್ನಡ ಟ್ವೀಟ್ ಗಳಿಂದ ಬೆಚ್ಚಿದ ಬಯೋಕಾನ್ ಅಧ್ಯಕ್ಷೆ ಕಿರಣ್ ಅವರಿಂದ ಯೂ ಟರ್ನ್, ಕಾವೇರಿ ನದಿ ನೀರು ಉಳಿಸಿಕೊಳ್ಳೋಣ ಎಂದು ಟ್ವೀಟ್, ಹಳೆ ಟ್ವೀಟ್ ಡಿಲೀಟ್ ಮಾಡಿದ್ದಾರೆ.

* ಹೆಬ್ಬುಲಿ ಚಿತ್ರ ಶೂಟಿಂಗ್ ನಿಮಿತ್ತ ಕಾಶ್ಮೀರದಲ್ಲಿರುವ ಕಿಚ್ಚ ಸುದೀಪ್ ಅಲ್ಲಿಂದಲೇ ತಮ್ಮ ಚಿತ್ರತಂಡದ ಪರವಾಗಿ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Live Updates: Karnataka Bandh September 09 Cauvery Dispute


* ಡಾ. ಶಿವರಾಜ್ ಕುಮಾರ್, ಉಪೇಂದ್ರ, ಶರಣ್ , ಹರಿಪ್ರಿಯಾ ಸೇರಿದಂತೆ ಹಲವಾರು ನಟ, ನಟಿಯರು, ಕಲಾವಿದರು, ತಂತ್ರಜ್ಞರಿಂದ ಫಿಲ್ಮ್ ಚೇಂಬರ್ ಎದುರು ಪ್ರತಿಭಟನೆ.

Live Updates: Karnataka Bandh, September 09 Cauvery Dispute

* ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕೆಲಸ ನಿರತ ಟೆಕ್ಕಿಗಳ ವಿರುದ್ಧ ಆಕ್ರೋಶ. ಬಲವಂತವಾಗಿ ಕಚೇರಿ ಬಂದ್ ಮಾಡಿಸಿದ ಹೋರಾಟಗಾರರು.
* ಬೆಂಗಳೂರಿನ ಟೌನ್ ಹಾಲ್ ಬಳಿ ತೀವ್ರಗೊಂಡ ಪ್ರತಿಭಟನೆ, ಜಯಲಲಿತಾ ತಿಥಿ ಆಚರಣೆ. ನರಕ ಪ್ರಾಪ್ತಿಯಾಗಲಿ ಎಂದು ಕೋರಿಕೆ.
* ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರ ಸ್ಥಗಿತ.
* ಏರ್ ಪೋರ್ಟ್ ಕ್ಯಾಬ್, ಟೂರಿಸ್ಟ್ ವಾಹನ, ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಂಚಾರ ಬಂದ್.
* ತಮಿಳು 53 ಚಾನೆಲ್ ಗಳನ್ನು ಬಂದ್ ಮಾಡಿದ ಕೇಬಲ್ ಆಪರೇಟರ್ಸ್, ಆಕ್ಟ್ ಬ್ರ್ಯಾಡ್ ಬಾಂಡ್ ನಿಂದ ಕಸ್ಟಮರ್ ಕೇರ್ ಕೇಂದ್ರ ಬಂದ್.

Namma metro

* ಭದ್ರಕಾಳಿ ವೇಷದಲ್ಲಿ ಜಯಲಲಿತಾ, ಸಿದ್ದರಾಮಯ್ಯ ಹಾಗೂ ಸಂಸದರ ಹರಾಜು, ಅರೆಬೆತ್ತಲೆ ಪ್ರತಿಭಟನೆ-ಚಾಮರಾಜನಗರ, ಭುವನೇಶ್ವರಿ ವೃತ್ತ. [ಬಂದ್ ಬಗ್ಗೆ ಬಯೋಕಾನ್ ಕಿರಣ್ ಕಿಡಿ, ಟ್ವಿಟ್ಟರ್ ನಲ್ಲಿ ಉರಿ]

* ಕನ್ನಡ ಚಲನಚಿತ್ರರಂಗದಿಂದ ಬಂದ್ ಗೆ ಬೆಂಬಲ, ಮಂಡ್ಯ ಹಿತರಕ್ಷಣಾ ವೇದಿಕೆ ತೆಗೆದುಕೊಳ್ಳುವ ನಿರ್ಣಯಕ್ಕೆ ನಾವು ಬದ್ಧ ಕೆಪಿಸಿಸಿ ಅಧ್ಯಕ್ಷ ಸಾರಾ ಗೋವಿಂದು ಘೋಷಣೆ.[ಗ್ಯಾಲರಿ : ಕರ್ನಾಟಕ ಬಂದ್, ಜನಜೀವನ ಅಸ್ತವ್ಯಸ್ತ]
* ಶಿವಮೊಗ್ಗ ಡಿವಿಎಸ್ ಶಾಲೆ ಮುಂದೆ ಪ್ರತಿಭಟನೆ ನಂತರ ರಜೆ ಘೋಷಣೆ
* ಕಲಬುರಗಿಯಲ್ಲಿ ಜನಜೀವನ ಅಸ್ತವ್ಯಸ್ತ, ಬಸ್ ಸಂಚಾರ ಸಂಪೂರ್ಣ ಸ್ಥಗಿತ.
* ಮಂಡ್ಯದ ಸಂಜಯ್ ವೃತ್ತದಲ್ಲಿ ಬಲೂನ್ ಹಿಡಿದು ಶಾಂತಿಯುತವಾಗಿ ಪ್ರತಿಭಟನೆ. ಮಂಡ್ಯದ ಜನ ಹೃದಯವಂತರು ಎಂದು ಸಾರಿದ ಕಾರ್ಮಿಕ ಹಿತರಕ್ಷಣಾ ಟ್ರಸ್ಟ್
* ಬೆಂಗಳೂರಿನ ಟೌನ್ ಹಾಲ್ ಬಳಿ ಅರೆಬೆತ್ತಲೆಯಾಗಿ ಉರುಳುಸೇವೆ, ತೀವ್ರ ಪ್ರತಿಭಟನೆ
* ಬೆಳಗ್ಗೆ 7.30 ರ ವೇಳೆಗೆ ಮೆಜೆಸ್ಟಿಕ್ ಬಳಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ, ಕ್ಯಾಬ್ ನಿಲ್ಲಿಸುವಂತೆ ಆಗ್ರಹ. ಓಲಾ ಡ್ರೈವರ್ ಗೆ ಕನ್ನಡ ಪರ ಹೋರಾಟಗಾರರಿಂದ ಬಂದ್ ಬಗ್ಗೆ ಪಾಠ.

* ತಮಿಳು ನಾಡು ಖಾಸಗಿ ಬಸ್ ಗಳನ್ನು ಮೆಜೆಸ್ಟಿಕ್ ನಲ್ಲೇ ನಿಲ್ಲಿಸಿದ ಪೊಲೀಸರು.

Karnataka Bandh
* ಮಾರ್ಕ್ಸ್ ಮ್ಯಾನ್ ವಾಹನ, 4 ಕೆಎಸ್ ಆರ್ ಪಿ ತುಕಡಿ ಸಿಎಂ ಸಿದ್ದರಾಮಯ್ಯ ನಿವಾಸ ಬಳಿ ನಿಯೋಜನೆ
* ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಗೆ ಅಭೂತಪೂರ್ವ ಭದ್ರತೆ. [ಕಾವೇರಿ: ಉರಿಯೋ ಬೆಂಕಿಗೆ ತುಪ್ಪ ಸುರಿದ ತಮಿಳುನಾಡು]
* ಆಟೋ, ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರು ಬಂದ್‌ ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ.
* ಬೆಂಗಳೂರಲ್ಲಿ ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಂಡಿದೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಬಂದ್

(ಒನ್ ಇಂಡಿಯಾ ಸುದ್ದಿ)

English summary
For the fourth time in this year Karnataka is observing total Bandh on September 09. Emergency services, primarily healthcare and ambulance services is functioning. While pro Kannada organisations are staging protest in various places across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X