ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲೂಕು ಪಂಚಾಯಿತಿ ಫಲಿತಾಂಶ : ಬಿಜೆಪಿ-ಕಾಂಗ್ರೆಸ್ ಸಮಬಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 23 : ಎರಡು ಹಂತಗಳಲ್ಲಿ ನಡೆದ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಜಿಲ್ಲಾ ಪಂಚಾಯಿತಿ ಚುನಾವಣೆಯಂತೆ ತಾಲೂಕು ಪಂಚಾಯಿತಿಯಲ್ಲೂ ಆಡಳಿತ ಪಕ್ಷ ಕಾಂಗ್ರೆಸ್‌ಗೆ ಜನರು ಬೆಂಬಲ ನೀಡಿದ್ದಾರೆ.

ಫೆ.13 ಮತ್ತು 20ರಂದು ಎರಡು ಹಂತದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆದಿತ್ತು. 175 ತಾಲೂಕು ಪಂಚಾಯಿತಿಗಳ 3902 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12,635 ಅಭ್ಯರ್ಥಿಗಳು ಕಣದಲ್ಲಿದ್ದರು. [LIVE : ಜಿಲ್ಲಾ ಪಂಚಾಯಿತಿ ಫಲಿತಾಂಶ]

13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಮಂಗಳವಾರ 3,889 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ. ತಾಲೂಕು ಪಂಚಾಯಿತಿ ಚುನಾವಣೆ ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ......[ಮೊದಲ ಹಂತದ ಚುನಾವಣೆ ವಿವರಗಳು]

hubballi

ಸಮಯ 2.30 : ಅಂತಿಮ ಫಲಿತಾಂಶ : 175 ತಾಲೂಕು ಪಂಚಾಯಿತಿಗಳ ಪೈಕಿ ಬಿಜೆಪಿ 54, ಕಾಂಗ್ರೆಸ್ 60, ಜೆಡಿಎಸ್ 26 ಸ್ಥಾನಗಳಲ್ಲಿ ಜಯಗಳಿಸಿದೆ. 35 ಕಡೆ ಅತಂತ್ರ ಫಲಿತಾಂಶ ಬಂದಿದೆ.

ಸಮಯ 2 ಗಂಟೆ : ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ರಾಯಭಾಗ ತಾಲೂಕು ಪಂಚಾಯತ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿಜಯಮ್ಮ ವಿರುದ್ಧ ಕಾಂಗ್ರೆಸ್‌ನ ಬಸಮ್ಮ 1 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಸಮಯ 1.30 : 5 ಮತಗಳ ಗೆಲವು : ಚಾಮರಾಜನಗರ ತಾಲೂಕಿನ ನಂಜೇ ದೇವನಪುರ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಾಗರಾಜಮ್ಮ ಅವರು 5 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಸಮಯ 1 ಗಂಟೆ : 175 ತಾಲೂಕುಗಳ ಪೈಕಿ ಕಾಂಗ್ರೆಸ್ 60, ಬಿಜೆಪಿ 56, ಜೆಡಿಎಸ್ 19 ಸ್ಥಾನಗಳಲ್ಲಿ ಜಯಗಳಿಸಿದ್ದರೆ, 33 ಕಡೆ ಫಲಿತಾಂಶ ಅತಂತ್ರವಾಗಿದೆ.

ಸಮಯ 12.45 : ಸದ್ಯದ ಫಲಿತಾಂಶ : ಕಾಂಗ್ರೆಸ್ 1,578, ಬಿಜೆಪಿ 1,274, ಜೆಡಿಎಸ್ 529, ಇತರೆ 172 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಸಮಯ 12.25 : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿಗೆ ಗೆಲುವು. ಬಿಜೆಪಿ 19, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಗೆಲುವು

ಸಮಯ 12.15 : ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಜಯಗಳಿಸಿದೆ. 24 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 20ರಲ್ಲಿ ಜಯಗಳಿಸಿದ್ದು, ಬಿಜೆಪಿ 4 ಕ್ಷೇತ್ರದಲ್ಲಿ ಜಯಸಾಧಿಸಿದೆ. ಅತ್ತ ಶಿಗ್ಗಾಂವಿ ತಾಲೂಕು ಪಂಚಾಯಿತಿ ಅತಂತ್ರವಾಗಿದೆ. ಬ್ಯಾಡಗಿ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಜಯಗಳಿಸಿದೆ.

ಸಮಯ 12 ಗಂಟೆ : ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಜಯಭೇರಿ, 23 ಸ್ಥಾನಗಳ ಪೈಕಿ ಕಾಂಗ್ರೆಸ್ 18, ಜೆಡಿಎಸ್‌ಗೆ 5 ಸ್ಥಾನ

ಸಮಯ 11.55 : ರಾಮನಗರ ತಾಲೂಕು ಪಂಚಾಯಿತಿ ಫಲಿತಾಂಶ (14 ಸ್ಥಾನಗಳು) - ಕಾಂಗ್ರೆಸ್ 6, ಜೆಡಿಎಸ್ 8

ಸಮಯ 11.46 : ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಆಡಳಿತ

ಸಮಯ 11.39 : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್.ಪುರ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಜಯಗಳಿಸಿದೆ. ಉಡುಪಿ ತಾಲೂಕು ಪಂಚಾಯಿತಿಯ 20 ಸ್ಥಾನಗಳಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಜಯಗಳಿಸಿದೆ.

ಸಮಯ 11.30 : ಕಾಂಗ್ರೆಸ್ 904, ಬಿಜೆಪಿ 740, ಜೆಡಿಎಸ್ 304 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 99 ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ಸಮಯ 11.09 : ಹುಬ್ಬಳ್ಳಿ ತಾಲೂಕು ಪಂಚಾಯಿತಿಯ ಎಲ್ಲಾ 15 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 7,
ಕಾಂಗ್ರೆಸ್ 5, ಜೆಡಿಎಸ್ 2 ಕ್ಷೇತ್ರದಲ್ಲಿ ಜಯಗಳಿಸಿದ್ದು, 1 ಸ್ಥಾನದಲ್ಲಿ ಪಕ್ಷೇತರ ಅಭ್ಯರ್ಥಿ ಜಯಸಾಧಿಸಿದ್ದಾರೆ.

ಸಮಯ 10.50 : ಕಾಂಗ್ರೆಸ್ 740, ಬಿಜೆಪಿ 593, ಜೆಡಿಎಸ್ 223, 75 ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ

ಸಮಯ 10.44 : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಪಂಚಾಯಿತಿಯಲ್ಲಿ ಜೆಡಿಎಸ್ ಜಯಭೇರಿ ಬಾರಿಸಿದೆ. 16 ಸ್ಥಾನಗಳಲ್ಲಿ 10ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಮಯ 10.30 : ರಾಮನಗರ ತಾಲೂಕು ಪಂಚಾಯಿತಿ ಜೆಡಿಎಸ್ ಪಾಲಾಗಿದೆ. 14 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಮಯ 10.25 : ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹೊಸಪೇಟೆ ತಾಲೂಕು ಪಂಚಾಯತಿಗಳಲ್ಲಿ ಬಿಜೆಪಿ ಜಯಗಳಿಸಿದೆ.

ಸಮಯ 10.20 : ಸದ್ಯದ ಫಲಿತಾಂಶ : ಕಾಂಗ್ರೆಸ್ 570, ಬಿಜೆಪಿ 472, ಜೆಡಿಎಸ್ 135 ಮತ್ತು 51 ಕ್ಷೇತ್ರಗಳಲ್ಲಿ ಇತರ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ

ಸಮಯ 10.15 : ಕೊಪ್ಪಳ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 11 ಸ್ಥಾನಗಳ ಪೈಕಿ 10 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ

ಸಮಯ 10.14 : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ಪಂಚಾಯಿತಿಯಲ್ಲಿ 11 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಸಮಯ 10 ಗಂಟೆ : ಕಾಂಗ್ರೆಸ್ 460, ಬಿಜೆಪಿ 355, ಜೆಡಿಎಸ್ 105, ಇತರರು 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ

ಸಮಯ 9.30 : ಸದ್ಯದ ಫಲಿತಾಂಶ : ಕಾಂಗ್ರೆಸ್ 342, ಬಿಜೆಪಿ 245, ಜೆಡಿಎಸ್ 60 ಮತ್ತು 28 ಇತರ ಪಕ್ಷಗಳ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಸಮಯ 9.05 : ಸದ್ಯದ ಫಲಿತಾಂಶ : ಕಾಂಗ್ರೆಸ್ 90, ಬಿಜೆಪಿ 63, ಜೆಡಿಎಸ್ 21, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ

ಸಮಯ 8.50 : ತಾಲೂಕು ಪಂಚಾಯಿತಿ ಸದ್ಯದ ಫಲಿತಾಂಶ : ಬಿಜೆಪಿ 25, ಕಾಂಗ್ರೆಸ್ 20, ಜೆಡಿಎಸ್ 15 ಕ್ಷೇತ್ರಗಳಲ್ಲಿ ಮುನ್ನಡೆ

ಸಮಯ 8.30 : ಚಿಕ್ಕಮಗಳೂರು ಜಿಲ್ಲೆಯ ಎರಡು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳಿಗೆ ಗೆಲುವು

election results

ಸಮಯ 8.25 : ಬೆಂಗಳೂರು ಉತ್ತರ ತಾಲೂಕಿನ ಹುರುಳಿಚಿಕ್ಕನಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಬಿಜೆಪಿಯ ಹೆಚ್.ವಿ.ಪ್ರಕಾಶ್ ಜಯಗಳಿಸಿದ್ದಾರೆ.

ಸಮಯ 8 ಗಂಟೆ : ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಆರಂಭವಾಗಿದ್ದು, ಅಂಚೆ ಮತಗಳನ್ನು ಮೊದಲು ಎಣಿಕೆ ಮಾಡಲಾಗುತ್ತಿದೆ

ಸಮಯ 7.30 : ಅವಧಿ ಮುಕ್ತಾಯಗೊಳ್ಳದಿರುವ ಕಾರಣ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಪಂಚಾಯಿತಿ ಹೊರತುಪಡಿಸಿ ರಾಜ್ಯದ ಉಳಿದ ತಾಲೂಕು ಪಂಚಾಯಿತಿಗಳಿಗೆ ಫೆ.13 ಮತ್ತು 20ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.[2ನೇ ಹಂತದ ಚುನಾವಣೆ ವಿವರಗಳು]

English summary
Karnataka : Taluk panchayat election results announced on Tuesday 23rd Feb 2016. Congress and BJP bagged 56 seats in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X