ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ಗೆ ಮಾಹಿತಿ ನೀಡಿ

|
Google Oneindia Kannada News

ಬೆಂಗಳೂರು, ನವೆಂಬರ್ 30 : ಕೇಂದ್ರ ಸರ್ಕಾರ ಭಾರತೀಯ ಪೌರರ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್‌ ಅನ್ನು ಸಿದ್ಧಪಡಿಸುವ ಮೊದಲ ಹೆಜ್ಜೆಯಾಗಿ 2011ರ ಜನಗಣತಿಯ ಮೊದಲ ಹಂತದ ಸಮಯದಲ್ಲಿ ದೇಶದಲ್ಲಿರುವ ಸಾಮಾನ್ಯ ನಿವಾಸಿಗಳಿಗೆ ಸಂಬಂಧಿಸಿದಂತೆ ಒಂದು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಅನ್ನು ತಯಾರಿಸಿದೆ.

ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್‌ಪಿಆರ್) ಮಾಹಿತಿ ಕೋಶದ ಪರಿಷ್ಕರಣೆಗೆ ಮತ್ತು ಆಧಾರ್ ಕಾರ್ಡ್‌ ಸಂಖ್ಯೆಯೊಂದಿಗೆ ಜೋಡಣೆಯ ಕಾರ್ಯವನ್ನು ದೇಶದಾದ್ಯಂತ ಆರಂಭಿಸಲಾಗಿದೆ. ಕರ್ನಾಟಕದಲ್ಲಿ ನವೆಂಬರ್ 11 ರಿಂದ ಎನ್‌ಪಿಆರ್‌ಗೆ ಮೂಲ ಮಾಹಿತಿ ಪರಿಷ್ಕರಣೆ ಮತ್ತು ಆಧಾರ್ ಕಾರ್ಡ್ ಜೋಡಣೆ ಕಾರ್ಯವನ್ನು ಆರಂಭಿಸಲಾಗಿದೆ. [ಆಧಾರ್ ಕಡ್ಡಾಯವಲ್ಲ : ಸುಪ್ರೀಂಕೋರ್ಟ್]

aadhar

ಎನ್‌ಪಿಆರ್‌ಗೆ ಮಾಹಿತಿ ಪರಿಷ್ಕರಣೆ ಕಾರ್ಯವನ್ನು ಮತ್ತು ಆಧಾರ್ ಸಂಖ್ಯೆ ಜೋಡಣೆ ಕಾರ್ಯವನ್ನು ಗಣತಿದಾರರು ಮನೆ-ಮನೆಗೆ ಭೇಟಿ ನೀಡುವ ಮೂಲಕ ಕೈಗೊಳ್ಳಲಾಗುತ್ತಿದೆ. ಗಣತಿದಾರರು ಮನೆಗೆ ಬಂದಾಗ ಅಗತ್ಯವಾದ ಮಾಹಿತಿಯನ್ನು ನೀಡುವಂತೆ ಸರ್ಕಾರ ಮನವಿ ಮಾಡಿದೆ. [ವಿವಾಹ ಸಂಬಂಧಿತ ವೆಬ್ ಸೈಟಿಗೆ ಆಧಾರ್ ಕಡ್ಡಾಯ]

ಎನ್‌ಪಿಆರ್‌ ಮೂಲ ಮಾಹಿತಿಕೋಶದಲ್ಲಿ ಕಂಡುಬರದ ಕುಟುಂಬಗಳನ್ನು, ವ್ಯಕ್ತಿಗಳನ್ನು ಗಣತಿ ಸಮಯದಲ್ಲಿ ಸೇರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಮಯಾನುಸಾರ ಈ ಮಾಹಿತಿಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಜನನ, ಮರಣ ಮತ್ತು ವಿವಾಹದ ನೋಂದಣಿಗಳನ್ನು ಎನ್‌ಪಿಆರ್‌ಗೆ ಅಳವಡಿಸಲಾಗುತ್ತದೆ. [NPR ವೆಬ್ ಸೈಟ್]

ತರಬೇತಿ ನೀಡಲಾಗಿದೆ : ಎನ್‌ಪಿಆರ್‌ ಮಾಹಿತಿ ಪರಿಷ್ಕರಣೆ ಬಗ್ಗೆ ಈಗಾಗಲೇ ಗಣತಿದಾರರಿಗೆ ತರಬೇತಿ ನೀಡಲಾಗಿದೆ. ಗಣತಿದಾರರು ತಮಗೆ ವಹಿಸಲಾಗಿರುವ ಬ್ಲಾಕಿನಲ್ಲಿರುವ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಲಿದ್ದಾರೆ.

ಯಾವ-ಯಾವ ಮಾಹಿತಿ : ವ್ಯಕ್ತಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ತಂದೆಯ ಹೆಸರು, ತಾಯಿಯ ಹೆಸರು, ಹುಟ್ಟಿದ ಸ್ಥಳ, ಸದ್ಯದ ವಿಳಾಸ ಇತ್ಯಾದಿ ಮಾಹಿತಿ ಸಂಗ್ರಹಣೆ ಮಾಡುತ್ತಾರೆ ಮತ್ತು ಆಧಾರ್ ಸಂಖ್ಯೆಯ ಜೋಡಣೆ ಕಾರ್ಯವನ್ನು ಕೈಗೊಳ್ಳುತ್ತಾರೆ.

ಸಾರ್ವಜನಿಕರು, ತಮ್ಮ ಮನೆಗಳಿಗೆ ಗಣತಿದಾರರು ಭೇಟಿ ನೀಡಿದ ಸಮಯದಲ್ಲಿ ಸಂಪೂರ್ಣ ಸಹಕಾರವನ್ನು ನೀಡಿ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಕುಟುಂಬದ ಪಡಿತರ ಚೀಟಿಯನ್ನು ಗಣತಿದಾರರಿಗೆ ನೀಡಿದರೆ ಅವರು ಮಾಹಿತಿಗಳನ್ನು ತುಂಬಿಕೊಳ್ಳಲಿದ್ದಾರೆ. [ಮಾಹಿತಿ : ಕರ್ನಾಟಕ ವಾರ್ತೆ]

English summary
Government of India decided to link National Population Register with Aadhar number. Karnataka government launched aadhar number link campaign in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X