ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಸರ್ಕಾರಕ್ಕೆ ಹಿನ್ನಡೆ, ಹೊರ ರಾಜ್ಯದವರ ದಿಲ್ ಖುಷ್

By Mahesh
|
Google Oneindia Kannada News

ಬೆಂಗಳೂರು, ಜುಲೈ 01: ಹೊರರಾಜ್ಯಗಳ ನೋಂದಣಿ ಸಂಖ್ಯೆ ಇರುವ ವಾಹನಗಳ ಮೇಲೆ ನಿಯಂತ್ರಣ ಹೊಂದಲು ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ಹೈಕೋರ್ಟ್ ತಡೆ ನೀಡಿದೆ.

ಈ ತಿದ್ದುಪಡಿ ಅಸಂವಿಧಾನಾತ್ಮಕ ಕ್ರಮ ಎಂದು ಈ ಮುಂಚೆ ಏಕಸದಸ್ಯಪೀಠ ತೀರ್ಪು ನೀಡಿತ್ತು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಏನಿದು ಕಾಯ್ದೆ ತಿದ್ದುಪಡಿ: ಹೊರರಾಜ್ಯಗಳ ನೋಂದಣಿ ಇರುವ ವಾಹನಗಳು ಕರ್ನಾಟಕದಲ್ಲಿ ಸಂಚರಿಸಬೇಕಾದರೆ ಎಷ್ಟು ತೆರಿಗೆ ಕಟ್ಟಬೇಕು? ಯಾವಾಗ ಕಟ್ಟಬೇಕು? ಎಂಬುದರ ಬಗ್ಗೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಅದರಂತೆ ನಾನ್ ಕರ್ನಾಟಕ ವಾಹನಗಳು ಜೀವಿತಾವಧಿ ತೆರಿಗೆ(lifetime tax)ಯನ್ನು ಕರ್ನಾಟಕಕ್ಕೆ ಬಂದು ನೆಲೆಸಿದ 30 ದಿನದೊಳಗೆ ಪಾವತಿಸಬೇಕಾಗಿತ್ತು.

Lifetime tax on non-KA vehicles cannot be levied : High Court

ಆದರೆ, ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಅರ್ಜಿ ಹಾಕಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್ ಜಯಂತ್ ಎಂ ಪಟೇಲ್ ಹಾಗೂ ಜಸ್ಟೀಸ್ ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಮಾರ್ಚ್ 11ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಹೀಗಾಗಿ ಪರರಾಜ್ಯದಿಂದ ಇಲ್ಲಿಗೆ ಬಂದಿರುವ ಹೊರ ರಾಜ್ಯದ ನೋಂದಣಿ ಸಂಖ್ಯೆಯುಳ್ಳ ವಾಹನಗಳು 30ದಿನದೊಳಗೆ ಲೈಫ್ ಟೈಮ್ ತೆರಿಗೆ ಪಾವತಿಸಬೇಕಾಗಿಲ್ಲ. ಜೊತೆಗೆ 12 ತಿಂಗಳುಗಳ ಕಾಲ ತೆರಿಗೆ ರಹಿತವಾಗಿ ಸಂಚರಿಸಬಹುದು. ನಂತರ ಇಲ್ಲಿ ಮರು ನೋಂದಣಿ ಮಾಡಿಸಿಕೊಂಡು ಕರ್ನಾಟಕದ ನೋಂದಣಿ ಸಂಖ್ಯೆ ಪಡೆಯಬಹುದಾಗಿದೆ. ಆನಂತರ ವಾಹನ ಬಳಕೆಗೆ ಲೈಫ್ ಟೈಮ್ ತೆರಿಗೆ ಕಟ್ಟಬೇಕಾಗುತ್ತದೆ.

ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆ 1957ಕ್ಕೆ 2014ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಆದರೆ, ಕಾಯ್ದೆಯ ಸೆಕ್ಷನ್ 3ರಲ್ಲಿರುವ ಉಲ್ಲೇಖಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕೋರ್ಟ್ ಆದೇಶಿಸಿದೆ.

English summary
A Division Bench of the Karnataka High Court on Friday upheld an earlier verdict of a single bench that had declared as “unconstitutional” the new law that compelled owners of non-Karnataka vehicles to pay lifetime tax if they use such vehicles in Karnataka beyond 30 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X