ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನ ಪರಿಷತ್ ಚುನಾವಣಾ ಫಲಿತಾಂಶ

|
Google Oneindia Kannada News

ಬೆಂಗಳೂರು, ಜೂನ್ 13 : ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ನಾಲ್ವರು ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ. ಬಿಜೆಪಿ ಮತ್ತು ಜೆಡಿಎಸ್ ತಲಾ ಎರಡು ಸ್ಥಾನಗಳಲ್ಲಿ ಜಯಗಳಿಸಿವೆ.

ಜೂನ್ 9ರಂದು ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು. ಬೆಳಗಾವಿ ಮತ್ತು ಮೈಸೂರಿನಲ್ಲಿ ಸೋಮವಾರ ಮತ ಎಣಿಕೆ ನಡೆಯಿತು. [ಪರಿಷತ್ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?]

legislative council

ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ವಾಯವ್ಯ ಶಿಕ್ಷಕ, ವಾಯುವ್ಯ ಪದವೀಧರ, ಪಶ್ಚಿಮ ಶಿಕ್ಷಕರ ಕ್ಷೇತ್ರಗಳ ಮತ ಎಣಿಕೆ, ಮೈಸೂರಿನ ಜೆಎಸ್‌ಎಸ್‌ ಕಾಲೇಜಿನಲ್ಲಿ ದಕ್ಷಿಣ ಪದವೀಧರ ಕ್ಷೇತ್ರದ ಮತ ಎಣಿಕೆ ನಡೆಯಿತು. [ವಿಧಾನಪರಿಷತ್ ಚುನಾವಣೆ ಹೇಗೆ ನಡೆಯುತ್ತದೆ?]

4 ಕ್ಷೇತ್ರಗಳ ಫಲಿತಾಂಶ

* ದಕ್ಷಿಣ ಪದವೀಧರರ ಕ್ಷೇತ್ರ ಕೆ.ಟಿ.ಶ್ರೀಕಂಠೇಗೌಡ ಗೆಲುವು (ಜೆಡಿಎಸ್)
* ವಾಯುವ್ಯ ಪದವೀಧರ ಮತ ಕ್ಷೇತ್ರದ ಹನುಮಂತ ನಿರಾಣಿ ಗೆಲುವು (ಬಿಜೆಪಿ)
* ವಾಯುವ್ಯ ಶಿಕ್ಷಕರ ಕ್ಷೇತ್ರ ಅರುಣ ಶಹಾಪುರ ಗೆಲುವು (ಬಿಜೆಪಿ)
* ಪಶ್ಚಿಮ ಶಿಕ್ಷಕರ ಕ್ಷೇತ್ರ ಬಸವರಾಜ ಹೊರಟ್ಟಿ ಗೆಲುವು (ಜೆಡಿಎಸ್)

ಬಸವರಾಜ ಹೊರಟ್ಟಿ, ಎಂ.ಪಿ.ನಾಡಗೌಡ, ಮಹಾಂತೇಶ ಕೌಜಲಗಿ, ಅರುಣ ಶಹಾಪುರ, ಕೆ.ಎಸ್‌.ಭಗವಾನ್‌, ವಾಟಾಳ್‌ ನಾಗರಾಜ್ ಸೇರಿದಂತೆ 4 ಕ್ಷೇತ್ರಗಳ ಚುನಾವಣೆಯಲ್ಲಿ 59 ಅಭ್ಯರ್ಥಿಗಳು ಕಣದಲ್ಲಿದ್ದರು. [ಪರಿಷತ್ ಚುನಾವಣೆ : ಏಳನೇ ಬಾರಿ ಅಖಾಡಕ್ಕಿಳಿದ ಹೊರಟ್ಟಿ]

ಅಂದಹಾಗೆ ಜೂನ್ 10ರಂದು ವಿಧಾನಸಭೆಯಿಂದ ಏಳು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್, ವೀಣಾ ಅಚ್ಚಯ್ಯ, ಅಲ್ಲಂ ವೀರಭದ್ರಪ್ಪ, ಆರ್‌.ಬಿ.ತಿಮ್ಮಾಪುರ, ಬಿಜೆಪಿಯ ವಿ.ಸೋಮಣ್ಣ, ಲೆಹರ್ ಸಿಂಗ್‌, ಜೆಡಿಎಸ್‌ನ ಕೆ.ವಿ.ನಾರಾಯಣ ಸ್ವಾಮಿ ಅವರು ಗೆಲುವು ಸಾಧಿಸಿದ್ದರು.

English summary
Legislative council election result announced. On June 9, 2016 elections held from graduates, teachers constituencies to elect 4 Legislative council members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X