ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂನ್ 10ರಂದು ಏಳು ಪರಿಷತ್ ಸ್ಥಾನಗಳಿಗೆ ಚುನಾವಣೆ

|
Google Oneindia Kannada News

ಬೆಂಗಳೂರು, ಮೇ 24 : ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ 7 ಸದಸ್ಯರು ನಿವೃತ್ತರಾಗಲಿದ್ದು, ಅವರ ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣೆ ನಡೆಸಲಾಗುತ್ತದೆ. ಜೂನ್ 10ರಂದು ಮತದಾನ ನಡೆಯಲಿದೆ.

ಮೇ 24ರಂದು ಚುನಾವನಾ ಅಧಿಸೂಚನೆ ಹೊರಡಿಸಲಾಗುತ್ತದೆ. ಮೇ 31 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಜೂನ್ 3 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನ. ಜೂನ್ 10ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ನಡೆಯಲಿದೆ. [ಜೂನ್ 11ರಂದು ರಾಜ್ಯಸಭೆ ಚುನಾವಣೆ]

legislative council

ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಸ್. ಮೂರ್ತಿ ಅವರು ಚುನಾವಣಾಧಿಕಾರಿಯಾಗಿ ಹಾಗೂ ಉಪ ಕಾರ್ಯದರ್ಶಿ ಎಂ.ಎಸ್. ಕುಮಾರಸ್ವಾಮಿ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. [4 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆ ಘೋಷಣೆ]

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮೇ 24 ರಿಂದ 31ರ ತನಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಮೇ 29ರ ಭಾನುವಾರ ನಾಮಪತ್ರಗಳನ್ನು ಸಲ್ಲಿಸುವಂತಿಲ್ಲ. [ಪರಿಷತ್ ನಾಮ ನಿರ್ದೇಶನ, ಸಿದ್ದರಾಮಯ್ಯಗೆ ಹೊಸ ಸವಾಲು]

ಪ್ರತಿಯೊಬ್ಬ ಅಭ್ಯರ್ಥಿಯು ತಮ್ಮ ನಾಮಪತ್ರದ ಜೊತೆ ಕನಿಷ್ಟ ಹತ್ತು ಜನ ಹಾಲಿ ವಿಧಾನಸಭಾ ಚುನಾಯಿತ ಸದಸ್ಯರ ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ನಾಮಪತ್ರದ ಜೊತೆ 5000 ರೂ> ಹಾಗೂ ಇತರ ಅಭ್ಯರ್ಥಿಗಳು 10 ಸಾವಿರ ರೂ. ಠೇವಣಿಯನ್ನು ಇಡಬೇಕಾಗುತ್ತದೆ.

ನಿವೃತ್ತರಾಗಲಿರುವ ಸದಸ್ಯರು

* ವಿ.ಸೋಮಣ್ಣ (ಬಿಜೆಪಿ)
* ಅಶ್ವತ್ಥ ನಾರಾಯಣ (ಬಿಜೆಪಿ)
* ನಾರಾಯಣ ಸಾ.ಬಾಂಗಡೆ (ಬಿಜೆಪಿ)
* ಸಿ.ಎಚ್.ವಿಜಯಶಂಕರ (ಬಿಜೆಪಿ)
* ಡಾ.ವೀರಣ್ಣ ಮತ್ತೀಕಟ್ಟಿ (ಕಾಂಗ್ರೆಸ್)
* ಆರ್‌.ವಿ.ವೆಂಕಟೇಶ್ (ಕಾಂಗ್ರೆಸ್)
* ಎಂ.ಶ್ರೀನಿವಾಸ್ (ಜೆಡಿಎಸ್)

English summary
Election commission will announce Legislative council election 2016 notification on May 24, 2016. Election will be held for 7 seats on June 10, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X