ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ವಿಭಜನೆಗೆ ವಿಧಾನ ಪರಿಷತ್ ಒಪ್ಪಿಗೆ ಸಿಕ್ಕಿಲ್ಲ

|
Google Oneindia Kannada News

ಬೆಂಗಳೂರು, ಏ. 21 : ಪ್ರತಿಪಕ್ಷಗಳ ವಿರೋಧದ ನಡುವೆಯೇ ಸೋಮವಾರ ವಿಧಾನಸಭೆಯಲ್ಲಿ 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015' ಅಂಗೀಕಾರಗೊಂಡಿದೆ. ಆದರೆ, ವಿಧಾನಪರಿಷತ್ತಿನಲ್ಲಿ ವಿಧೇಯಕಕ್ಕೆ ಅನುಮೋದನೆ ಸಿಕ್ಕಿಲ್ಲ. ಆದ್ದರಿಂದ ಏ.23ರಂದು ಪುನಃ ಉಭಯ ಸದನಗಳ ಕಲಾಪ ನಡೆಯಲಿದೆ.

ವಿಧಾನಸಭೆಯಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕ ಬಳಿಕ ವಿಧಾನಪರಿಷತ್ತಿನಲ್ಲಿ ಚರ್ಚೆ ಆರಂಭವಾಯಿತು. ವಿ. ಸೋಮಣ್ಣ ಅವರು ವಿಧೇಯಕದ ವಿರುದ್ಧ ಒಂದು ಗಂಟೆ ಮಾತನಾಡಿದರು. ಉಳಿದ ಸದಸ್ಯರಿಗೂ ಅವಕಾಶ ನೀಡಬೇಕೆಂಬ ಬೇಡಿಕೆಯನ್ನು ಸದಸ್ಯರು ಮುಂದಿಟ್ಟಾಗ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಕಲಾಪವನ್ನು ಏ.23ರ ಗುರುವಾರಕ್ಕೆ ಮುಂದೂಡಿದರು. [ಸೋಮವಾರದ ವಿಧಾನಸಭೆ ಕಲಾಪದ ಮುಖ್ಯಾಂಶಗಳು]

Legislative Council

ಒಂದು ವೇಳೆ ವಿಧಾನಪರಿಷತ್ತಿನಲ್ಲಿ ವಿಧೇಯಕ ಅಂಗೀಕಾರವಾಗದಿದ್ದರೆ ಪುನಃ ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ಸಿದ್ಧವಾಗಿತ್ತು. ಇದಕ್ಕಾಗಿ ವಿಧಾನಸಭೆ ಕಲಾಪವನ್ನು ಕೆಲಕಾಲ ಮುಂದೂಡಲಾಗಿತ್ತು. ಆದರೆ, ಪರಿಷತ್ ಕಲಾಪ ಗುರುವಾರಕ್ಕೆ ಮುಂದೂಡಿದ ನಂತರ ಸಭೆ ಸೇರಿದ ಕಲಾಪ ಸಲಹಾ ಸಮಿತಿ ವಿಧಾನಸಭೆ ಕಲಾಪವನ್ನು ಏ.23ಕ್ಕೆ ಮುಂದೂಡುವ ನಿರ್ಣಯ ಕೈಗೊಂಡಿತು. [ಸೋಮವಾರದ ಕಲಾಪದಲ್ಲಿ ಹೇಳಿದ್ದು, ಕೇಳಿದ್ದು]

ರಜೆ ಮೇಲೆ ತೆರಳಿದ ರಾಜ್ಯಪಾಲರು : ಏ.23ರಂದು ಪರಿಷತ್ತಿನಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿದರೂ ಅದಕ್ಕೆ ಸಹಿ ಹಾಕಲು ರಾಜ್ಯಪಾಲರು ಲಭ್ಯವಿರುವುದಿಲ್ಲ. ರಾಜ್ಯಪಾಲ ವಜುಬಾಯಿ ವಾಲಾ ಅವರು, ಏ.20ರ ಸೋಮವಾರ ಮಧ್ಯಾಹ್ನ ಅಹಮದಾಬಾದ್‌ಗೆ ತೆರಳಿದ್ದಾರೆ. ಏ.27ಕ್ಕೆ ಅವರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ.

ಆದ್ದರಿಂದ, ವಿಧೇಯಕಕ್ಕೆ ಉಭಯ ಸದನಗಳು ಒಪ್ಪಿಗೆ ನೀಡಿದರೂ ಅದು ಜಾರಿಯಾಗಬೇಕಾದರೆ ಏ.27ರವರೆಗೆ ಸರ್ಕಾರ ಕಾಯಬೇಕು. ಈ ಮಧ್ಯೆ ಪರಿಷತ್ತಿನಲ್ಲಿ ವಿಧೇಯಕವನ್ನು ಸದನ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಪ್ರತಿಪಕ್ಷ ಬಿಜೆಪಿ ಪತ್ರ ಬರೆದಿದೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ವಿಧೇಯಕಕ್ಕೆ ಅನುಮೋದನೆ ಸಿಗುವುದು ಮತ್ತಷ್ಟು ವಿಳಂಬವಾಗಲಿದೆ.

English summary
Legislative Assembly on Monday passed the Karnataka Municipal Corporations (Amendment) Bill 2015. But, the legislative council has taken up the bill for discussion. Council was adjourned to April 23, Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X