ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಪಂಪ್ ಸೆಟ್ ಸಕ್ರಮಕ್ಕೆ ಮಾರ್ಚ್ 31 ಕಡೇ ದಿನ

|
Google Oneindia Kannada News

ಬೆಂಗಳೂರು, ಫೆ. 27: ರಾಜ್ಯದಲ್ಲಿನ ಅಕ್ರಮ ಪಂಪ್ ಸೆಟ್ ಗಳ(ನೀರಾವರಿ)ಸಕ್ರಮಕ್ಕೆ ಮಾರ್ಚ್ 31ರ ಗಡುವು ವಿಧಿಸಲಾಗಿದೆ. ಮಾರ್ಚ್ 31ರೊಳಗೆ ಸಂಬಂಧಿಸಿದ ವಿದ್ಯುತ್ ಪೂರೈಕೆ ನಿಗಮಗಳಲ್ಲಿ ರೈತರು ಹಣ ಸಂದಾಯ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿಸದ್ದಾರೆ.

ಪ್ರತಿ ಪಂಪ್ ಸೆಟ್ ಗೆ 10 ಸಾವಿರದಿಂದ 15 ಸಾವಿರ ಠೇವಣಿ ಇಟ್ಟು ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕು. 2.50 ಲಕ್ಷ ಪಂಪ್ ಸೆಟ್ ಗಳಲ್ಲಿ 57 ಸಾವಿಕ್ಕೂ ಹೆಚ್ಚು ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. [ರೈತರ ಉಚಿತ ವಿದ್ಯುತ್ ದುರುಪಯೋಗ: ಡಿಕೆಶಿ]

electricity

ಕರೆಂಟ್ ಖೋತಾ ಇಲ್ಲ
ಈ ಸಲ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಉಂಟಾಗುವ ಲಕ್ಷಣಗಳು ಕಂಡುಬಂದಿಲ್ಲ. ಕೊರತೆ ಎದುರಿಸಲು 700 ಮೆಗಾವಾಟ್ ವಿದ್ಯುತ್ ಖರೀದಿಗೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ 200 ಮೆಗಾವಾಟ್ ವಿದ್ಯುತ್ ಖರೀದಿಗೆ ಒಪ್ಪಂದವಾಗಿದೆ. ಉಳಿದಿದ್ದಕ್ಕೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದ್ದಾರೆ.

ಉತ್ತರ ರಾಜ್ಯಗಳಿಂದ ವಿದ್ಯುತ್ ತೆರಲು ಎದುರಾಗಿದ್ದ ಗ್ರಿಡ್ ಸಮಸ್ಯೆ ಬಗೆಹರಿದಿದ್ದು ಛತ್ತೀಸ್ ಗಡದಲ್ಲಿ ಎನ್ ಟಿಪಿಸಿ ಸಹಯೋಗದಲ್ಲಿ ಶಾಖೋತ್ಪನ್ನ ಸ್ಥಾವರ ಆರಂಭಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

English summary
Karnataka Irrigation - 31 March 2015 is the last day for legalization of illegal water pump sets used for irrigating lands. The dead line is set by Karnataka Energy minister D.K Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X