ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೈ' ಬಿಟ್ಟು 'ಕಮಲ' ಅಪ್ಪಿಕೊಳ್ಳಲು ಹೊರಟಿದ್ದಾರೆ ಕುಮಾರ್ ಬಂಗಾರಪ್ಪ!

ಖುದ್ದು ಯಡಿಯೂರಪ್ಪ ಮನೆಗೆ ಬೇಟಿ ನೀಡಿರುವುದು, ಜತೆಗೆ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿಕೆ ನೀಡಿರುವುದು ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವುದು ಬಹುತೇಕ ನಿರ್ಧಾರವಾಗಿದೆ ಎನ್ನಲಾಗುತ್ತಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 27: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ 74ನೇ ಹುಟ್ಟುಹಬ್ಬದಂದೇ ಬಿಜೆಪಿ ಪಾಲಿಗೆ ಸಿಹಿ ಸುದ್ದಿ ಹೊರ ಬೀಳುವ ಲಕ್ಷಣ ಇದೆ. ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪ ಪುತ್ರ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯದಲ್ಲೇ ಸೊರಬ ಕ್ಷೇತ್ರದ ಕಾರ್ಯಕರ್ತರ ಒತ್ತಾಸೆಯಂತೆ ರಾಜಕೀಯ ನಿರ್ಧಾರವೊಂದನ್ನು ಪ್ರಕಟಿಸುವುದಾಗಿ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಹುಟ್ಟು ಹಬ್ಬಕ್ಕೆ ಶುಭ ಕೋರಲು ಯಡಿಯೂರಪ್ಪ ಮನೆಗೆ ಹೋಗಿದ್ದ ಕುಮಾರ್ ಬಂಗಾರಪ್ಪ ಮಾಧ್ಯಮಗಳ ಮುಂದೆ ಈ ವಿಚಾರ ಹಂಚಿಕೊಂಡಿದ್ದಾರೆ.[ಶಿವಣ್ಣ ಮೂರನೇ ಕಣ್ಣು ತೆರೆದರೆ ಏನು ಆಗಲ್ಲ : ಕು.ಬಂಗಾರಪ್ಪ]

Kumar Bangarappa towards BJP, decision may announce in 2-3 days

ಖುದ್ದು ಯಡಿಯೂರಪ್ಪ ಮನೆಗೆ ಬೇಟಿ ನೀಡಿರುವುದು, ಜತೆಗೆ ರಾಜಕೀಯ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿಕೆ ನೀಡಿರುವುದು ಕುಮಾರ್ ಬಂಗಾರಪ್ಪ ಬಿಜೆಪಿ ಸೇರುವುದು ಬಹುತೇಕ ನಿರ್ಧಾರವಾಗಿದೆ ಎನ್ನಲಾಗುತ್ತಿದೆ. ಆದರೆ ಬಿಜೆಪಿ ಸೇರಲಿದ್ದೀರಾ? ಎಂಬ ಪ್ರಶ್ನೆಗೆ 'ಕಾದು ನೋಡಿ' ಎಂದಷ್ಟೆ ಹೇಳಿ ಕಾರು ಹತ್ತಿ ಹೊರಟು ಹೋದರು.["ಗೀತಾ ಶಿವರಾಜ್ ಕುಮಾರ್ ಹರಕೆಯ ಕುರಿ"]

ಮಾಧ್ಯಮಗಳ ಮುಂದೆ ಯಡಿಯೂರಪ್ಪ ಗುಣಗಾನ ಮಾಡಿದ ಕುಮಾರ್ ಬಂಗಾರಪ್ಪ, ಬಿಜೆಪಿ ಸೇರಲು ಸಿದ್ದ ಎಂಬ ಸಂದೇಶವನ್ನು ಬಹಿರಂಗವಾಗಿಯೇ ನೀಡಿದ್ದಾರೆ. ಮಾತ್ರವಲ್ಲದೆ ಯಡಿಯೂರಪ್ಪ ಕೈಯನ್ನು ನಮ್ಮಂತಹ ಯುವಕರು ಬಲಪಡಿಸಬೇಕು. ಬಿಜೆಪಿ ಸೇರುವ ಬಗ್ಗೆ ಕ್ಷೇತ್ರದ ಜನರ ಅಭಿಪ್ರಾಯ ಪಡೆದಿದ್ದೇನೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಸಲಹೆ ಮಾಡಿದ್ದಾರೆ. ಬದಲಾವಣೆ ಅನಿವಾರ್ಯ ಎಂದು ಹೇಳಿದ್ದಾರೆ.[ಕುಮಾರ್ ಅಂಬುಲೆನ್ಸ್, ವೈದ್ಯರ ಜೊತೆ ಬಿಜೆಪಿಗೆ ಸೇರಲಿ, ಮಧು ಬಂಗಾರಪ್ಪ]

English summary
Former Minister Kumar Bangarappa have met Karnataka BJP state president BS Yeddyurappa in his birthday occasion and rumors are coming up that Bangarappa will join BJP very soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X