ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಡಿಲಿನಿಂದ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಗೋಪುರಕ್ಕೆ ಹಾನಿ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಕುಕ್ಕೆ ಸುಬ್ರಹ್ಮಣ್ಯ, ಮೇ 22: ಈ ಘಟನೆಯನ್ನು ಹೇಗೆ ಅರ್ಥೈಸಬೇಕು ಎಂಬುದನ್ನು ಆಸ್ತಿಕರಿಗೆ ಹಾಗೂ ಶಾಸ್ತ್ರವೇತರಿಗೆ ಬಿಟ್ಟು, ಸುದ್ದಿಯನ್ನು ಮಾತ್ರ ತಿಳಿಸುತ್ತಿದ್ದೇವೆ. ಒಂದೆರಡು ದಿನದಿಂದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತ ಬಾರೀ ಮಳೆಯಾಗುತ್ತಿತ್ತು. ಭಾನುವಾರ ಬೆಳಗ್ಗೆ ಸಿಡಿಲು ಬಡಿದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಗೋಪುರಕ್ಕೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ.

ಸಿಡಿಲಿನ ಹೊಡೆತಕ್ಕೆ ಗೋಪುರದ ತುದಿಯಲ್ಲಿನ ಸಿಮೆಂಟ್ ತುಂಡು ಕಿತ್ತುಬಂದಿದೆ. ಸಿಡಿಲಿನಿಂದ ನಾಲ್ಕೂರು ಗ್ರಾಮದ ಮನೆಯೊಂದಕ್ಕೆ ಕೂಡ ಹಾನಿಯಾಗಿದೆ. ಮನೆಯ ಛಾವಣಿಯು ಕುಸಿದುಹೋಗಿದೆ. ಹೆಂಚುಗಳು ಚೂರಾಗಿವೆ. ಇನ್ನು ಕಿಟಕಿ ಬಾಗಿಲುಗಳು ಮುರಿದುಹೋಗಿದ್ದು, ವಿದ್ಯುತ್ ತಂತಿ ಹಾನಿಯಾಗಿದೆ.[ಕುಕ್ಕೆ ಸುಬ್ರಹ್ಮಣ್ಯನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆತಂಕ ಬೇಡ]

Kukke Subrahmanya temple tower damaged by thunderbolt

ಅದೃಷ್ಟವಶಾತ್ ಮನೆಯೊಳಗೆ ಇದ್ದವರಿಗೆ ಯಾವುದೇ ರೀತಿ ತೊಂದರೆಯಾಗಿಲ್ಲ. ಗುತ್ತಿಗಾರಿನ ಮುತ್ತಪ್ಪ ನಗರಲ್ಲಿಯೂ ಮನೆಗೆ ಸಿಡಿಲು ಬಡಿದಿದೆ. ಇನ್ನು ಸುಬ್ರಹ್ಮಣ್ಯದ ಟೆಲಿಫೋನ್ ಕೇಂದ್ರದ ಮೊಬೈಲ್ ಟವರ್ ಗೂ ಸಿಡಿಲಿನಿಂದ ಹಾನಿಯಾಗಿತ್ತು. ಆ ಕಾರಣಕ್ಕೆ ಕೆಲ ಕಾಲ ಮೊಂಬೈಲ್ ಫೋನ್ ಗಳ ಸಂಪರ್ಕ ಇರಲಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದ್ದು, ಹಾನಿ ಬಗ್ಗೆ ವರದಿಯಾಗುತ್ತಿದೆ.[ವಿವಾದಕ್ಕೆ ಗ್ರಾಸವಾದ ಕುಕ್ಕೆ ಕಿರುಷಷ್ಠಿ ಆಮಂತ್ರಣ ಪತ್ರಿಕೆ]

{promotion-urls}

English summary
Karnataka's famous Kukke Subrahmanya temple tower damaged by thunderbolt on Sunday. Houses were also in damaged in surrounding area. Mobile network service interrupted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X