ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುದುರೆಮುಖ ಇನ್ನು ಸಂರಕ್ಷಿತ ಹುಲಿಧಾಮ

|
Google Oneindia Kannada News

ಬೆಂಗಳೂರು, ಏ. 22 : ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಸಂರಕ್ಷಿತ ಹುಲಿಧಾಮವಾಗಿ ಘೋಷಿಸಲಾಗುತ್ತದೆ ಎಂದು ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲು ರಾಜ್ಯದಲ್ಲಿ ವಿರೋಧ ವ್ಯಕ್ತವಾಗಿತ್ತು.

ಮಂಗಳವಾರ ಲೋಕಸಭೆಗೆ ಪ್ರಕಾಶ್ ಜಾವಡೇಕರ್ ಈ ಕುರಿತು ಉತ್ತರ ನೀಡಿದ್ದಾರೆ. ಉತ್ತರಾಖಂಡದಲ್ಲಿರುವ ರಾಜಾಜಿ ರಾಷ್ಟ್ರೀಯ ಉದ್ಯಾನ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಧಾಮಗಳೆಂದು ಘೋಷಿಸಲು ರಾಷ್ಟ್ರೀಯ ಹುಲಿ ಸಂರಕ್ಷಣೆ ಪ್ರಾಧಿಕಾರ (ಎನ್‌ಟಿಸಿಎ) ಅಂತಿಮ ಒಪ್ಪಿಗೆ ನೀಡಿದೆ ಎಂದು ಹೇಳಿದ್ದಾರೆ. [ಕುದುರೆಮುಖವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿಲ್ಲ]

Tiger

ಚಾಮರಾಜನಗರದ ಮಲೆಮಾದೇಶ್ವರ ಬೆಟ್ಟವನ್ನು ಹುಲಿಧಾಮವೆಂದು ಘೋಷಿಸಲು ಕೇಂದ್ರ ಚಿಂತನೆ ನಡೆಸಿದೆ. ಮಲೆಮಾದೇಶ್ವರ ಬೆಟ್ಟ, ತಮಿಳುನಾಡಿನ ಮೇಘಾಮಲೈ ವನ್ಯಧಾಮ, ಗೋವಾದ ಮ್ಹಾದಿ, ಅರುಣಾಚಲ ಪ್ರದೇಶದ ದಿಬಾಂಗ್ ಅರಣ್ಯಗಳನ್ನು ಹುಲಿಧಾಮಗಳೆಂದು ಘೋಷಿಸುವ ಪ್ರಸ್ತಾವನೆ ಇದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದಾರೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

ಕುದುರೆಮುಖವನ್ನು ಹುಲಿಧಾಮವನ್ನಾಗಿ ಘೋಷಣೆ ಮಾಡಲು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಇದರ ನಡುವೆಯೇ ಸಮೀಕ್ಷೆ ನಡೆಸಲಾಗಿತ್ತು. [ಹುಲಿ: ಅರಣ್ಯ ಇಲಾಖೆಗೆ ವನ್ಯಜೀವಿ ಮಂಡಳಿ ಪತ್ರ]

prakash javadekar

ಕರ್ನಾಟಕ ಒಪ್ಪಿಗೆ ನೀಡಿಲ್ಲ : ಕೇಂದ್ರ ಸರ್ಕಾರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಹೊರಟಿದೆ. ಆದರೆ, ಕರ್ನಾಟಕ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಕೆಲವು ದಿನಗಳ ಹಿಂದೆ ಹೇಳಿದ್ದರು.

ಅಂದಹಾಗೆ ಇತ್ತೀಚೆಗೆ ಹುಲಿ ಗಣತಿ ಫಲಿತಾಂಶವನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಅರಣ್ಯ ಮಂತ್ರಾಲಯ ಘೋಷಣೆ ಮಾಡಿದ್ದವು. ಅದರಂತೆ ಕರ್ನಾಟಕದಲ್ಲಿ ಅಂದಾಜು 406 ಹುಲಿಗಳಿದ್ದು, ದೇಶದಲ್ಲೇ ಹುಲಿಗಳ ಸಂಖ್ಯೆಯಲ್ಲಿ ರಾಜ್ಯ ಪ್ರಥಮ ಸ್ಥಾನಗಳಿಸಿದೆ.

English summary
In written reply to Lok Sabha Environment Minister Prakash Javadekar said, The National Tiger Conservation Authority (NTCA) has accorded final approval to announced Kudremukh national park as tiger reserves.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X