1,594 ಬಸ್ ಖರೀದಿಸಲಿದೆ ಕೆಎಸ್ ಅರ್ ಟಿಸಿ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 26: ಸೇವೆ ಉತ್ತಮಗೊಳಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ 1,594 ಬಸ್ ಗಳನ್ನು ಖರೀದಿಸಲಿದೆ. ಅದರ ಭಾಗವಾಗಿ ಸೋಮವಾರ 70 'ಕರ್ನಾಟಕ ಸಾರಿಗೆ' ಬಸ್ ಗಳನ್ನು ಬಿಡುಗಡೆ ಮಾಡುತ್ತಿದೆ.

ಮೊದಲ ಹಂತದಲ್ಲಿ 380 ಕರ್ನಾಟಕ ಸಾರಿಗೆ ಬಸ್ ಗಳನ್ನು ಖರೀದಿಸಲಾಗುವುದು. ಆ ಪೈಕಿ ಎಪ್ಪತ್ತು ಬಸ್ ಗಳನ್ನು ಸೋಮವಾರ ಸೇವೆಗೆ ಬಿಡುಗಡೆ ಮಾಡುತ್ತಿದ್ದೀವಿ. ಬಾಕಿ ಬಸ್ ಗಳನ್ನು ನವೆಂಬರ್ ಕೊನೆಯಲ್ಲಿ ಸುಪರ್ದಿಗೆ ಪಡೆಯುತ್ತೀವಿ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.[ಸಾರಿಗೆ ನಿಗಮದ ನೌಕರರಿಗೆ ಅಕ್ಟೋಬರ್ ನಿಂದ ಪರಿಷ್ಕೃತ ವೇತನ]

ksrtc

ನಿಯಮಗಳ ಪ್ರಕಾರ ಸದ್ಯಕ್ಕೆ ಇರುವ ಕೆಎಸ್ ಅರ್ ಟಿಸಿ ಬಸ್ ಗಳ ಪೈಕಿ ಶೇ 15ರಷ್ಟನ್ನು ಬಳಸುವುದಕ್ಕೆ ಸಾಧ್ಯವಿಲ್ಲ. ವಾಹನಗಳು ಇಂತಿಷ್ಟು ಕಿಲೋಮೀಟರ್ ಸಂಚರಿಸಬಹುದು ಮತ್ತು ಇಂತಿಷ್ಟು ವರ್ಷ ಬಳಸಬಹುದು ಎಂದಿರುತ್ತದೆ.

ಆ ಎರಡರ ಪೈಕಿ ಯಾವುದೇ ಪೂರ್ಣಗೊಂಡಿದ್ದರೂ ಇನ್ನು ಬಳಸುವುದಿಲ್ಲ. ಇದೀಗ ಖರೀದಿಸುತ್ತಿರುವ ಬಸ್ ಗಳಲ್ಲಿ ಏಸಿ ಸ್ಲೀಪರ್, ಐರಾವತ ಕ್ಲಬ್ ಕ್ಲಾಸ್ ಕೂಡ ಒಳಗೊಂಡಿರುತ್ತವೆ.[ಕಾವೇರಿ ವಿವಾದ: ಬಂದ್, ಪ್ರತಿಭಟನೆಗೆ ಕೆಎಸ್ ಆರ್ ಟಿಸಿಗೆ 12 ಕೋಟಿ ನಷ್ಟ]

ಮುಂದಿನ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಬಸ್ ಗಳು ಸೇವೆಗೆ ಲಭ್ಯವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ವಿವಿಧ ಡಿಪೋಗಳಿಗೆ ಎಪ್ಪತ್ತು 'ಕರ್ನಾಟಕ ಸಾರಿಗೆ' ಬಸ್ ಗಳು ಹಂಚಿಕೆಯಾಗಲಿವೆ.

English summary
Karnataka State Road Transport Corporation will buy 1,594 buses. As part of this initiative, it will launch 70 buses on Monday.
Please Wait while comments are loading...