ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಸ್ಥಾನ, ಗುಜರಾತ್‌ಗೂ ಕೆಎಸ್ಆರ್‌ಟಿಸಿ ಬಸ್ ಸೇವೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 17 : ಉತ್ತರ ಭಾರತದ ರಾಜ್ಯಗಳಿಗೆ ಪ್ರವಾಸ ಹೋಗುವ ಜನರನ್ನು ಸೆಳೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗುಜರಾತ್ ಮತ್ತು ರಾಜಸ್ಥಾನಕ್ಕೆ ಬಸ್ ಸೇವೆ ಆರಂಭಿಸಲು ಮುಂದಾಗಿದೆ. ಮಹಾರಾಷ್ಟ್ರ ಸರ್ಕಾರದ ಒಪ್ಪಿಗೆ ಸಿಕ್ಕರೆ ಶೀಘ್ರವೇ ಸೇವೆ ಆರಂಭವಾಗಲಿದೆ.

ಗುಜರಾತ್, ರಾಜಸ್ಥಾನಕ್ಕೆ ಬಸ್ ಸೌಲಭ್ಯ ಒದಗಿಸುವ ಯೋಜನೆಯನ್ನು ಕೆಎಸ್ಆರ್‌ಟಿಸಿ ಸಿದ್ಧಪಡಿಸಿದ್ದು, ಬೆಂಗಳೂರಿನಿಂದ ಹೊರಡುವ ಬಸ್ಸುಗಳು ಮುಂಬೈ ಮೂಲಕ ರಾಜಸ್ಥಾನ ಮತ್ತು ಗುಜರಾತ್‌ನ ಪ್ರಮುಖ ನಗರಗಳನ್ನು ಸಂಪರ್ಕಿಸಲಿವೆ. [ಶಿವಮೊಗ್ಗ, ಮಧುರೈಗೆ ಫ್ಲೈ ಬಸ್ ಸೇವೆ]

ksrtc

ಬಸ್ಸುಗಳ ಸಂಚಾರಕ್ಕೆ ಮಹಾರಾಷ್ಟ್ರ ಸರ್ಕಾರದ ಸಾರಿಗೆ ಇಲಾಖೆಯಿಂದ ಅನುಮತಿ ಬೇಕಾಗಿದ್ದು, ಅದಕ್ಕಾಗಿ ಮನವಿ ಸಲ್ಲಿಸಿದ್ದು ಉತ್ತರಕ್ಕಾಗಿ ಕಾಯುತ್ತಿದೆ. ಉತ್ತರ ಭಾರತಕ್ಕೆ ಉದ್ಯಮ ಮತ್ತು ಪ್ರವಾಸಿ ಸ್ಥಳಗಳ ವೀಕ್ಷಣೆಗಾಗಿ ಹಲವಾರು ಜನರು ಸಂಚಾರ ನಡೆಸುತ್ತಿದ್ದು, ಇವರನ್ನು ಸೆಳೆಯಲು ಕೆಎಸ್ಆರ್‌ಟಿಸಿ ಈ ಸೇವೆ ಆರಂಭಿಸಲಿದೆ. [ಶಬರಿಮಲೆಗೆ ರಾಜಹಂಸ ಬಸ್ ಸೇವೆ]

ಕೆಎಸ್ಆರ್‌ಟಿಸಿ ಈಗಾಗಲೇ ಮುಂಬೈಗೆ ಆರಂಭಿಸಿರುವ ಸ್ಲೀಪರ್ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಾಜಸ್ಥಾನ ಮತ್ತು ಗುಜರಾತ್‌ಗೆ ಐರಾವತ ವೊಲ್ವೋ ಬಸ್ಸುಗಳನ್ನು ಪರಿಚಯಿಸಲಿದೆ. ಬಸ್ ಸಂಚಾರಕ್ಕೆ ಒಪ್ಪಿಗೆ ನೀಡುವ ಕುರಿತು ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಠಾರಿಯಾ ಹೇಳಿದ್ದಾರೆ.[ksrtc ಮಾಸಿಕ ಪಾಸು ದರ ಹೆಚ್ಚಳ]

2016ರ ಜನವರಿಯಿಂದ ಕೆಎಸ್ಆರ್‌ಟಿಸಿ ಶಿವಮೊಗ್ಗ, ಕೊಯಮತ್ತೂರು, ಪುದುಚೇರಿ, ಮಧುರೈ ಮುಂತಾದ ನಗರಗಳಿಗೆ ಫ್ಲೈ ಬಸ್ ಸೇವೆಯನ್ನು ಆರಂಭಿಸಲು ಸಿದ್ಧತೆ ನಡೆಸಿದೆ. ಸದ್ಯ, ಬೆಂಗಳೂರಿನ ವಿಮಾನ ನಿಲ್ದಾಣದಿಂದ ಮೈಸೂರು ಮತ್ತು ಮಣಿಪಾಲ್‌ಗೆ ಫ್ಲೈ ಬಸ್ ಸಂಚಾರ ನಡೆಸುತ್ತಿವೆ.

English summary
Karnataka State Road Transport Corporation (KSRTC) will introduce bus service to Gujarat and Rajasthan soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X