ಸಾಲು-ಸಾಲು ರಜೆ ಕೆಎಸ್ಆರ್‌ಟಿಸಿಯಿದ 500 ಹೆಚ್ಚುವರಿ ಬಸ್

Posted By: Gururaj
Subscribe to Oneindia Kannada

ಬೆಂಗಳೂರು, ಆ.10 : ಸ್ವಾತಂತ್ರ್ಯ ದಿನಾಚರಣೆ ಮತ್ತು ಸಾಲು-ಸಾಲು ರಜೆಯ ಹಿನ್ನಲೆಯಲ್ಲಿ ಕೆಎಸ್ಆರ್‌ಟಿಸಿ 500 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಆಗಸ್ಟ್ 11, 12 ರಂದು ಈ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ಸಂಚಾರ ನಡೆಸಲಿವೆ.

ಮಾಡಿ ಸಖತ್ ಮಜಾ, ಆಗಸ್ಟ್ ತಿಂಗಳಲ್ಲಿ 9 ಸರ್ಕಾರಿ ರಜಾ!

ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ಬೇರೆ-ಬೇರೆ ರಾಜ್ಯದಿಂದ ಆಗಸ್ಟ್ 15ರಂದು ಬೆಂಗಳೂರಿಗೆ ವಾಪಸ್ ಆಗಲಿವೆ. ಆಗಸ್ಟ್ 12, 13 ಶನಿವಾರ ಮತ್ತು ಭಾನುವಾರವಿದೆ. ಆಗಸ್ಟ್ 14 ರಂದು ಕೃಷ್ಣ ಜನ್ಮಾಷ್ಟಮಿ, 15 ರಂದು ಸ್ವಾತಂತ್ರ್ಯ ದಿನಾಚರಣೆ ಇದೆ. ಸಾಲು-ಸಾಲು ರಜೆ ಬರುವುದರಿಂದ ಹೆಚ್ಚುವರಿ ಬಸ್ ಓಡಿಸಲಾಗುತ್ತಿದೆ.

KSRTC to operate extra buses to meet long weekend rush

ಹೆಚ್ಚುವರಿ ಬಸ್ಸುಗಳ ಪೈಕಿ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ತೆರಳುವ ಬಸ್ಸುಗಳು ಕೆಂಪೇಗೌಡ ಬಸ್ ನಿಲ್ದಾಣದಿಂದ ಹೊರಡಲಿವೆ.

ಮೈಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದಲ್ಲಿ ಸಂಚಾರ ನಡೆಸುವ ಹೆಚ್ಚುವರಿ ಬಸ್ಸುಗಳು ಮೈಸೂರು ರಸ್ತೆ ಬಸ್ (ಸ್ಯಾಟಲೈಟ್) ನಿಲ್ದಾಣದಿಂದ ಸಂಚಾರ ನಡೆಸಲಿವೆ.

ಜೈಪುರ, ಸೂರತ್‌ಗೆ ಕೆಎಸ್ಆರ್‌ಟಿಸಿ ಸ್ಲೀಪರ್ ಬಸ್ ಸೇವೆ

ಮಧುರೈ, ಕುಂಬಕೋಣಂ, ತಿರುಚಿ, ಚೆನ್ನೈ, ತಿರುಚ್ಚಿ, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ತೆರಳುವ ಬಸ್ಸುಗಳು ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿದೆ.

ವಿಜಯನಗರ, ಜೆ.ಪಿ.ನಗರ, ಜಯನಗರ ನಾಲ್ಕನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರಂ 18 ನೇ ಕ್ರಾಸ್, ಕೆಂಗೇರಿ ಉಪನಗರ ಮುಂತಾದ ಸ್ಥಳಗಳಿಂದ ಪ್ರಯಾಣಿಕರ ದಟ್ಟಣೆ ಪರಿಗಣಿಸಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಧರ್ಮಸ್ಥಳ ಮುಂತಾದ ಸ್ಥಳಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ.

ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದಾಗ ತಮ್ಮ ಪಿಕಪ್ ಪಾಯಿಂಟ್ ಗಳನ್ನು ಸರಿಯಾಗಿ ನೋಡಿಕೊಳ್ಳುವಂತೆ ಮನವಿ ಮಾಡಲಾಗಿದೆ. ಇ-ಟಿಕೆಟ್‌ಗಳನ್ನು ಬುಕ್ ಮಾಡಲು www.ksrtc.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.

KSRTC: Now Senior Citizens Can Avail 25% Ticket Reduction Easily | Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To meet the long weekend rush Karnataka State Road Transport Corporation will run 500 extra buses in addition to the existing schedules between August 11 and 12, 2017.
Please Wait while comments are loading...