ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್ಸಾರ್ಟಿಸಿ ಪ್ರೀಮಿಯರ್ ಬಸ್ ಗಳ ದರ ಇಳಿಕೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತನ್ನ ಪ್ರೀಮಿಯರ್ ಸಾರಿಗೆ ಸೇವೆಗಳ ಪ್ರಯಾಣ ದರವನ್ನು ಶೇ.20.ರವರೆಗೆ ಇಳಿಕೆ ಮಾಡಿದೆ. ಹೊಸ ದರಗಳು ಜೂನ್ 13ರಿಂದ ಸೆಪ್ಟೆಂಬರ್ 30ರವರೆಗೆ ಜಾರಿಯಲ್ಲಿರುತ್ತದೆ.

ಕೆಎಸ್ಸಾರ್ಟಿಸಿ ಪ್ರೀಮಿಯರ್ ಬಸ್ ಗಳಾದ ರಾಜಹಂಸ, ವೈಭವ, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಡೈಮಂಡ್ ಕ್ಲಾಸ್, ಎಸಿ ಸ್ಲೀಪರ್, ನಾನ್ ಎಸಿ ಸೀಪರ್, ಐರಾವತ ಬ್ಲಿಸ್, ಐರಾವತ ಸುಪೀರಿಯಾ ಸಾರಿಗೆಗಳ ಮೇಲಿನ ಈಗಿನ ಪ್ರಯಾಣ ದರದಲ್ಲಿ ಶೇ.20 ರವರೆಗೆ ಕಡಿತ ಮಾಡಲಾಗಿದೆ. [ಬಸ್ ನಿಲ್ದಾಣದಲ್ಲಿ ಉಚಿತ ವೈ-ಫೈ ಸೇವೆ]

KSRTC reduces premier services bus fares

ಪರಿಷ್ಕೃತ ದರ ಪಟ್ಟಿಯಿಂದ ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರಗಳಂದು ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. [ಬಸ್ ಪ್ರಯಾಣ ದರ ಕಡಿಮೆ ಮಾಡೋಲ್ಲ : ರೆಡ್ಡಿ]

ಶುಕ್ರವಾರ, ಶನಿವಾರ ಮತ್ತು ಭಾನುವಾರಗಳಂದು ಪ್ರಯಾಣಿಸುವ ಪ್ರಯಾಣಿಕರುಗಳಿಗೆ ಸರಾಸರಿಯಾಗಿ ಶೇ.10ರವರೆಗೆ ಕಡಿಮೆ ಪ್ರಯಾಣ ದರವನ್ನು ಕೆಎಸ್‍ಆರ್ ಟಿಸಿ ನಿಗದಿಪಡಿಸಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯದ 13 ಬಸ್ ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ಉಚಿತ ವೈ-ಫೈ ಸೇವೆಗೆ ಬಹುತೇಕ ಒಳ್ಳೆ ಪ್ರತಿಕ್ರಿಯೆ ಬಂದಿದೆ.ಚಿತ್ರದುರ್ಗ ಮತ್ತು ಕೋಲಾರ ಸೇರಿದಂತೆ ರಾಜ್ಯದ ಅನೇಕ ನಗರಗಳಿಗೆ ವೈಫೈ ವಿಸ್ತರಣೆ ಮಾಡುವ ಯೋಜನೆಯನ್ನು ಕೆಎಸ್ಸಾರ್ಟಿಸಿ ಹೊಂದಿದೆ.

English summary
Karnataka State Road Transport Corporation has reduced the fares in its premier services — Rajahamsa, Vaibhav, Airavat, Airavat Club Class, air-conditioned sleeper, non-AC sleeper, Airavat Bliss, and Airavat Superia — with effect from June 13.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X