ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ಪ್ರವೇಶ ನಿರ್ಬಂಧಕ್ಕೆ ತಡೆ ಇಲ್ಲ, ಪರ್ಯಾಯ ಏನು?

|
Google Oneindia Kannada News

ಬೆಂಗಳೂರು, ಫೆಬ್ರವರಿ, 01: ಜನರ ವಿರೋಧದ ನಡುವೆಯೂ ಮಹಾನಗರಕ್ಕೆ ಬಸ್ ಗಳ ಪ್ರವೇಶದ ಮೇಲೆ ಹೇರಿಕೆ ಮಾಡಿರುವ ನಿರ್ಬಂಧ ಫೆಬ್ರವರಿ 1 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಪರಿಹಾರಾರ್ಥವಾಗಿ ಹೆಚ್ಚುವರಿ ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳನ್ನು ಬಿಡಲಾಗುತ್ತಿದೆ.

ಫೆಬ್ರವರಿ 1 ರಿಂದ 10ರ ತನಕ ಈ ಆದೇಶ ಜಾರಿಯಲ್ಲಿರುತ್ತದೆ. ಅರಮನೆ ಮೈದಾನದಲ್ಲಿ ಫೆಬ್ರವರಿ 3 ರಿಂದ 5ರವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಸಮಾವೇಶದ ವೇಳೆ ನಗರದಲ್ಲಿ ಸಂಚಾರ ದಟ್ಟಣೆ ಮತ್ತು ವಾಯು ಮಾಲಿನ್ಯ ನಿಯಂತ್ರಿಸಲು ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ಸುಗಳ ಸಂಚಾರವನ್ನು ನಿಷೇಧಿಸಲಾಗಿದೆ. [ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಬೆಂಗಳೂರು ಪ್ರವೇಶಿಸುವಂತಿಲ್ಲ]

ksrtc

ಎಲ್ಲೆಲ್ಲಿ ಬಸ್‌ ನಿಲುಗಡೆ?: ರಾಜ್ಯದ ವಿವಿಧ ಭಾಗಳಿಂದ ಬೆಂಗಳೂರಿಗೆ ಬರುವ ಖಾಸಗಿ ಬಸ್‌ಗಳ ನಿಲುಗಡೆಗೆ ನಗರದ ಹೊರ ಭಾಗದಲ್ಲಿ 6 ಸ್ಥಳ ನಿಗದಿ ಪಡಿಸಲಾಗಿದೆ. ತುಮಕೂರು ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಮೈದಾನ, ಮೈಸೂರು ರಸ್ತೆಯಲ್ಲಿ ನೈಸ್‌ ರಸ್ತೆ ಜಂಕ್ಷನ್‌, ಹೊಸೂರು ರಸ್ತೆಯಲ್ಲಿ ಅತ್ತಿಬೆಲೆ, ಕನಕಪುರ ರಸ್ತೆಯಲ್ಲಿ ನೈಸ್‌ ರಸ್ತೆ ಜಂಕ್ಷನ್‌, ಕೆ.ಆರ್‌.ಪುರ ರಸ್ತೆಯಲ್ಲಿ ಟೋಲ್‌ ಪ್ಲಾಜಾ ಹಾಗೂ ಹೆಬ್ಟಾಳ ರಸ್ತೆಯಲ್ಲಿ ಬಾಗಲೂರು ಕ್ರಾಸ್‌ ಬಳಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಪ್ರಯಾಣಿಕರನ್ನು ಮೆಜೆಸ್ಟಿಕ್‌ ಹಾಗೂ ಇತರ ಬಸ್‌ ನಿಲ್ದಾಣಗಳಿಗೆ ಸಾಗಿಸಲು ಬಿಎಂಟಿಸಿ ಬಸ್‌ಗಳ ಸೇವೆ ಕಲ್ಪಿಸಲಾಗುತ್ತಿದೆ.

ಸಂಚಾರಿ ದಳ (ಮೊಬೈಲ್ ಸ್ಕ್ವಾಡ್) ಸೇರಿದಂತೆ ಭದ್ರತೆಗಾಗಿ ಎಲ್ಲ ಕಡೆ ಪೊಲೀಸರನ್ನು ನಿಯೋಜಿಸಿದ್ದು ಎಲ್ಲ ಕಡೆ ಕಣ್ಣು ಇಟ್ಟಿರುತ್ತದೆ. ನಿಲುಗಡೆಗೆ ಅವಕಾಶ ನೀಡಿರುವ ಜಾಗದಲ್ಲಿಯೂ ವಿಶೇಷ ಭದ್ರತೆ ಕಲ್ಪಿಸಲಾಗಿದೆ.[ಕೆಎಸ್ ಆರ್ ಟಿಸಿ ನೇಮಕಾತಿ : ಅರ್ಜಿ ಸಲ್ಲಿಸಲು 5 ದಿನ ಬಾಕಿ]

ಖಾಸಗಿ ಬಸ್‌ಗಳಿಗೆ ಬೆಳಗ್ಗೆ 7ರಿಂದ ರಾತ್ರಿ 10 ಗಂಟೆವರೆಗೆ ನಗರ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ, ಅದಕ್ಕೆ ಮುನ್ನ ನಗರಕ್ಕೆ ಪ್ರವೇಶಿಸುವ ಬಸ್‌ಗಳು ಬೆಳಗ್ಗೆ 7 ಗಂಟೆಗೆ ಮುನ್ನ ನಿಲುಗಡೆ ಸ್ಥಳಗಳಿಗೆ ವಾಪಸ್‌ ತೆರಳಬೇಕು. ಅದೇ ರೀತಿ ರಾತ್ರಿ 10ರ ನಂತರ ನಿರ್ಗಮನ ಅವಧಿ ಇರುವ ಬಸ್‌ಗಳು ನಗರದ ನಿಗದಿತ ನಿಲ್ದಾಣಗಳಿಂದ ಹೊರಡಬಹುದು. ಆದರೆ, ನಿರ್ಬಂಧದ ಅವಧಿಯೊಳಗೆ ನಗರದಲ್ಲಿ ಖಾಸಗಿ ಬಸ್‌ಗಳು ಕಂಡರೆ, ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

English summary
Transport department banned entry of KSRTC and private buses inside the Bengaluru city from February 1 to 10, In the light of Invest Karnataka global business meet 2016 to be held at the palace grounds from February 3 to 5. The Karnataka State Road Transport Corporation (KSRTC) will ply additional buses between Monday and Friday to meet the anticipated rush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X