ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಂಷಾ ನದಿಗೆ ಬಿದ್ದ ಕೆಎಸ್ಆರ್‌ಟಿಸಿ ಬಸ್, 1 ಸಾವು

|
Google Oneindia Kannada News

ಮಂಡ್ಯ, ಜನವರಿ 28 : ಶಿಂಷಾ ನದಿಗೆ ಬಸ್ ಉರುಳಿ ಬಿದ್ದ ಪ್ರಕರಣದ ಕುರಿತು ಕೆಎಸ್ಆರ್‌ಟಿಸಿ ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಬಸ್ಸಿನಲ್ಲಿ 36 ಪ್ರಯಾಣಿಕರಿದ್ದರು ಎಂದು ಹೇಳಿದೆ. ಬಸ್ಸಿನಲ್ಲಿ ಸಿಬ್ಬಂದಿಗಳಾದ ಚಾಲಕ ವಿರೂಪಾಕ್ಷಪ್ಪ ಮತ್ತು ನಿರ್ವಾಹಕ ಗೋವಿಂದ ಇದ್ದರು. ಅಪಘಾತದಲ್ಲಿ ಒಬ್ಬರು ಪ್ರಯಾಣಿಕರು ಮಾತ್ರ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಸಮಯ 4.50 : ಶಿಂಷಾ ನದಿಗೆ ಉರುಳಿ ಬಿದ್ದಿರುವ ಬಸ್ ಮಧ್ಯಾಹ್ನ 12.40ಕ್ಕೆ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಹೊರಟಿತ್ತು. ಈ ಬಸ್ ಹಾಸನದ ರಾಮನಾಥಪುರ ಡಿಪೋಗೆ ಸೇರಿದ್ದಾಗಿದೆ.

ಸಮಯ 4.48 : ಶಿಂಷಾನದಿಗೆ ಸರ್ಕಾರಿ ಬಸ್ ಉರುಳಿ ಬಿದ್ದು ನಡೆದ ಅಪಘಾತದಲ್ಲಿ ಗಾಯಗೊಂಡ 22 ಜನರಿಗೆ ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಮಯ 4.30 :ಶಿವಪುರ ಬಳಿ ನಡೆದ ಬಸ್ ಅಪಘಾತದಲ್ಲಿ ಹೆಬ್ಬೆರಾಳು ಗ್ರಾಮದ ರಾಮಕೃಷ್ಣ (48) ಅವರು ಮೃತಪಟ್ಟಿದ್ದಾರೆ. ರಾಮನಗರಕ್ಕೆ ರೇಷ್ಮೆ ಗೂಡು ಮಾರಲು ರಾಮಕೃಷ್ಣ ಅವರು ತೆರಳಿದ್ದರು ಎಂದು ತಿಳಿದುಬಂದಿದೆ.

ಸಮಯ 4.10 : ಬಸ್ ಚಾಲಕ ಮತ್ತು ನಿರ್ವಾಹಕ ಸುರಕ್ಷಿತವಾಗಿದ್ದಾರೆ. ಉರುಳಿ ಬದ್ದ ಬಸ್ ನಂಬರ್ ಕೆಎ 13 ಎಫ್ 1944

ಸಮಯ 4.05 : ಶಿಂಷಾ ನದಿಗೆ ಬಸ್ ಉರುಳಿ ಬಿದ್ದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, 'ಕೂಡಲೇ ಸ್ಥಳಕ್ಕೆ ತೆರಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. 32 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂಬ ಮಾಹಿತಿ ಬಂದಿದೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ' ಎಂದು ಹೇಳಿದ್ದಾರೆ.

ಸಮಯ 4 ಗಂಟೆ : ಶಿವಪುರ ಬಳಿ ಕೆಎಸ್ಆರ್‌ಟಿಸಿ ಬಸ್ ಶಿಂಷಾ ನದಿಗೆ ಉರುಳಿ ಬಿದ್ದಿರುವುದರಿಂದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ 5 ಕಿ.ಮೀ.ಸಂಚಾರ ದಟ್ಟಣೆ ಉಂಟಾಗಿದೆ. ವಾಹನ ಸಂಚಾರ ಸುಗಮಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಹಿಂದಿನ ಸುದ್ದಿ : ಮಂಡ್ಯ ಜಿಲ್ಲೆಯ ಮದ್ದೂರಿನ ಶಿವಪುರ ಬಳಿ ಕೆಎಸ್ಆರ್‌ಟಿಸಿ ಬಸ್ ಶಿಂಷಾ ನದಿಗೆ ಉರುಳಿ ಬಿದ್ದಿದೆ. ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿಯ ಸಾಮಾನ್ಯ ಬಸ್ ಗುರುವಾರ ಮಧ್ಯಾಹ್ನ ಶಿಂಷಾ ನದಿಗೆ ಉರುಳಿ ಬಿದ್ದಿದೆ. ಬಸ್ಸಿನ ಮುಂಭಾಗದ ಟೈರ್ ಸ್ಫೋಟಗೊಂಡು, ಬಸ್ ಸೇತುವೆ ಮೇಲಿಂದ ನದಿಗೆ ಉರುಳಿ ಬಿದ್ದಿದೆ ಎಂದು ಸ್ಥಳೀಯರು ಹೇಳಿದ್ದಾರೆ. [ಸರ್ಕಾರಿ ಬಸ್ಸುಗಳು ಬೆಂಗಳೂರು ನಗರ ಪ್ರವೇಶಿಸುವಂತಿಲ್ಲ]

ksrtc bus

ಬಸ್ಸಿನಲ್ಲಿ ಸುಮಾರು 50 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಶಿಂಷಾ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಭಾರೀ ಅನಾಹುತ ತಪ್ಪಿದೆ. ಮದ್ದೂರು ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ. [ಕೆಎಸ್ಆರ್ ಟಿಸಿ ನೇಮಕಾತಿ, ಅರ್ಜಿ ಸಲ್ಲಿಸಲು ಫೆ.4 ಕೊನೆ ದಿನ]

'ವೇಗವಾಗಿ ಬಂದ ಬಸ್ ಸೇತುವೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ನಂತರ ನದಿಗೆ ಉರುಳಿ ಬಿತ್ತು' ಎಂದು ಪ್ರತ್ಯಕ್ಷದರ್ಶಿ ನಾಗೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆಯೂ ಕಾರು ಮತ್ತು ಲಾರಿ ಸೇತುವೆ ಮೇಲಿಂದ ಶಿಂಷಾ ನದಿಗೆ ಉರುಳಿ ಬಿದ್ದಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

English summary
Karnataka State Road Transport Corporation (KSRTC) bus fell into the Shimsha river in Maddur, Mandya district on Thursday, January 28 evening. Bus was going towards Mysuru from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X